ಪಾವಗಡ : ಕೇಳುವರಿಲ್ಲ ಖಾಸಗಿ ಸಿಬ್ಬಂದಿ ವರ್ಗದವರ ಗೋಳು!!

ಪಾವಗಡ:

      ಪಾವಗಡ ಕಳೆದ ನಾಲ್ಕು ತಿಂಗಳಿಂದ ಜನರನ್ನು ಸಾಗಿಸುತ್ತಿದ್ದ ಖಾಸಗಿ ಬಸ್‍ಗಳು ತುಕ್ಕು ಹಿಡಿಯುತ್ತಿರುವುದು ಒಂದು ಕಡೆ ಅದರೆ ಬೀದಿಗೆ ಬಿಳುವ ಹಂತದಲ್ಲಿ ಇರುವ ಖಾಸಗಿ ಬಸ್‍ಗಳನ್ನೆ ನಂಬಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಬಗಳು.

      ಕಳೆದ ನಾಲ್ಕು ತಿಂಗಳಿಂದ ಕೂರೊನ ಭೀತಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶವೆ ಕಂಗಾಲಾಗಿದೆ. ಇದರ ಮಧ್ಯದಲ್ಲಿ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿದವೂ ಎಂಬುದು ಲೆಕ್ಕಸಿಗದ ರೀತಿಯಲ್ಲಿ ನಾವೂ ಕಾಣಬಹುದಾಗಿದೆ. ಅದರೆ ದಿನನಿತ್ಯ ದುಡಿದು ತಿನ್ನುತ್ತಿದ್ದ ಜನರ ಪಾಡು ಹೇಳ ತೀರದಾಗಿದ್ದು ಒಂದು ಕಡೇ ಅದರೆ. ಖಾಸಗಿ ಬಸ್‍ಗಳನ್ನು ನಂಬಿ ಜೀವನ ಸಾಗಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್, ಏಜೆಂಟ್‍ರ್‍ಗಳು ಹಾಗೂ ಕ್ಲೀನರ್ ಗಳ ಪಾಡು ಹೇಳುತೀರದಾಗಿದೆ. ಇಂದು ದಿನ ಕೂಲಿ ಕೇಲಸವು ಸಹ ಸಿಗದ ಪರಿಸ್ಥಿತಿಯಲ್ಲಿ ಇರುವ ಜನರ ರಕ್ಷಣೆಗೆ ಸರ್ಕಾರ ಇದೆ ಎಂಬುದಾಗಿ ಹೇಳುತ್ತಿರುವ ಜನಪ್ರತಿನಿಧಿಗಳು ಒಂದು ಕಡೆಯಾದರೆ, ಸಂಕಷ್ಟಕ್ಕೆ ಬಹುತೇಕ ಕುಟುಂಬದ ಸದಸ್ಯರು ಒಳಗೊಂಡಿದ್ದಾರೆ.

      ಪಾವಗಡ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಎಸ್.ಆರ್.ಇ.ಬಸ್ ಮಾಲಿಕರಾದ ಡಿ.ಸಿ.ವೆಂಕಟೇಶ ರೆಡ್ಡಿ ಹೇಳುವ ಪ್ರಕಾರ ಸ್ವಾತಂತ್ರ್ಯ ಮುಂಚೆನಿಂದಲೂ ಖಾಸಗಿ ಬಸ್‍ಗಳ ಇರುವ ಒಂದು ಇತಿಹಾಸವೆ ಇದೇ. ಅದರೆ, ಸರ್ಕಾರ ಅಂತಹ ಖಾಸಗಿ ಬಸ್‍ಗಳ ಮಾಲೀಕರು ಮತ್ತು ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕಂಡಕ್ಟರ್ ಹಾಗೂ ಏಜೆಂಟ್, ಕ್ಲೀನರ್‍ಗಳ ಕುಟುಂಬಗಳು ರಸ್ತೆಗೆ ಬಂದಿದ್ದಾರೆ.

      ನನ್ನ ಬಳಿ ಆರು ಬಸ್‍ಗಳಿವೆ ತಿಂಗಳಿಗೆ ಒಂದು ಬಸ್‍ನಿಂದ 50 ಸಾವಿರ ತೆರಿಗೆಯಂತೆ 3 ಲಕ್ಷ ದಷ್ಟು ಹಣ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುತ್ತಿದ್ದೆನೆ ಇದರೊಂದಿಗೆ ಒಂದು ವರ್ಷಕ್ಕೆ 1 ಲಕ್ಷದಂತೆ ಇನ್ಶುರೆನ್ಸ್ ಕಟ್ಟುತ್ತಿದ್ದೆನೆ.

      2000 ಇಸವಿಯಿಂದ ಇಲ್ಲಿಯವರೆಗೆ ಎಲ್ಲೂ ಕಂಡರಿಯದ ರೀತಿಯಲ್ಲಿ ಡೀಸಲ್ ಧರ ಹೆಚ್ಚಾಗಿದೆ. ಸಾರಿಗೆ ಸಚಿವರು ಹೇಳುವ ಪ್ರಕಾರ ಬಸ್ ಒಂದಕ್ಕೆ 30ಜನ ಪ್ರಯಾಣಿಕರನ್ನು ಹಾಕಬೇಕು ಎಂಬ ಆದೇಶ ನೀಡಲಾಗಿದೆ. ಅದರೆ ಬಸ್ ಹೂರ ತೆಗೆಯಲು ಒಂದು ಲಕ್ಷ ಬೇಕಾಗುತ್ತದೆ.

      ಸರ್ಕಾರಿ ಬಸ್‍ಗಳಿಂದ ಖಾಸಗಿ ಬಸ್ ಟಿಕೆಟ್ ಧರ ಕಡಿಮೆ ಅದರೆ ಕೆ.ಎಸ್.ಆರ್.ಟಿ.ಸಿ.ಬಸ್ ಗಳಿಂದಲೂ ಈಗಲೂ ನಷ್ಟ ಅನುಭವಿಸಲಾಗುತ್ತಿದೆ. ಅದರೆ ಅವುಗಳಿಂದ ನಷ್ಟವಾದರೆ ಅದರ ಹೊರೆ ಸಾರ್ವಜನಿಕರ ಮೇಲೆಯ ಹಾಕುತ್ತಾರೆ. ಅದರೆ ಖಾಸಗಿ ಬಸ್‍ಗಳಿಂದ ನಷ್ಟವಾದರೆ ಅದರ ನಷ್ಟವು ಖಾಸಗಿ ಬಸ್ ಮಾಲೀಕರೆ ಮೇಲೆ ಮಾತ್ರ ಹೊರೆ ಬೀಳುತ್ತದೆ ಎನ್ನುತ್ತಾರೆ.

       ಪಾವಗಡ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್‍ಗಳ ವ್ಯವಸ್ಥೆ ಇಲ್ಲಾದ ಕಾರಣ ಲಗೇಜ್ ಆಟಗಳಲ್ಲಿ ಕುರಿಗಳ ರೀತಿಯಲ್ಲಿ ಜನರನ್ನು ಹಾಕಿ ಸಾಗಿಸುತ್ತಿದ್ದರೆ. ಅದರೆ ಅವುಗಳಿಗೆ ಅಂತರ ಮತ್ತು ಕಾನೂನು ಇಲ್ಲದಂತಾಗಿದೆ. ಅದರೆ ಖಾಸಗಿ ಬಸ್‍ಗಳಿಗೆ ಮಾತ್ರ ಏಕೆ ನಿಯಮಗಳು ಹೇರಬೇಕು ಎಂಬುದು ಬಸ್‍ಗಳ ಮಾಲೀಕರ ಪ್ರಶ್ನೆಯಾಗಿದೆ.

       ಸಾರ್ವಜನಿಕರಿಗೆ ಖಾಸಗಿ ಬಸ್‍ಗಳು ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದ್ದವು ಬೆಳಿಗ್ಗೆ 4 ರಿಂದ 7ರ ವರೆಗೆ ಸುಮಾರು ಏಳು ಎಂಟು ಬಸ್‍ಗಳು ಓಡಾಡುತ್ತಿದ್ದವು, ಅದರೆ ಈಗ ಸರ್ಕಾರಿ ಬಸ್ ಗಳು ಬೆಳಿಗ್ಗೆ 7 ರಿಂದ ರಸ್ತೆಗೆ ಇಳಿಯುತ್ತಿವೆ ಎಂದರು ಇದರಿಂದ ಉತ್ತಮ ಸಾರಿಗೆ ಸೇವೆಯು ಸಹ ಸರ್ಕಾರಿ ಬಸ್‍ಗಳು ನೀಡದ ರೀತಿಯಲ್ಲಿ ಓಡಾಡುತ್ತಿವೆ ಎಂದರು.

     ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಖಾಸಗಿ ಬಸ್ ಮಾಲಿಕರು ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನ ವಾಗಿಲ್ಲಎನ್ನುತ್ತಾರೆ ಖಾಸಗಿ ಬಸ್ ಮಾಲಿಕರುಗಳು.

(Visited 11 times, 1 visits today)

Related posts