ಮೇ.13ರಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ

ತುಮಕೂರು:

      ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್-19 ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಂದೂಡಲಾಗಿದ್ದು ವಿದ್ಯಾರ್ಥಿಗಳ ಆತ್ಮವಿಶ್ವಾಸ ತುಂಬಲು ಹಾಗೂ ವಿಷಯವಾರು ಕ್ಲಿಷ್ಟ ಅಂಶಗಳು/ಸಂದೇಹಗಳನ್ನು ಪರಿಹರಿಸಲು ನಿಗಧಿತ ಸಂಪನ್ಮೂಲ ಶಿಕ್ಷಕರುಗಳಿಂದ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಉಪನಿರ್ದೇಶಕರಾದ ಎಂ. ರೇವಣಸಿದ್ದಪ್ಪ ಅವರು ತಿಳಿಸಿದ್ದಾರೆ.

      ಮೇ 13ರಂದು ಗಣಿತ ಮತ್ತು ವಿಜ್ಞಾನ, ಮೇ 14ರಂದು ಕನ್ನಡ ಮತ್ತು ಇಂಗ್ಲೀಷ್, ಮೇ 15ರಂದು ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯಗಳನ್ನು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.30 ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯುತ್ತಿದ್ದು, ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಸಿರಾ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ನಿಗಧಿಪಡಿಸಿದ ದಿನಾಂಕ ಮತ್ತು ಸಮಯದಂದು ದೂರವಾಣಿ ಕರೆ ಮಾಡಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ

 ಕರೆ ಮಾಡುವ ದೂರವಾಣಿ ಸಂಖ್ಯೆ :

      ಮಧುಗಿರಿ ಉಪನಿರ್ದೇಶಕರು (ಆಡಳಿತ)-9448999347; ಶಿಕ್ಷಣಾಧಿಕಾರಿಗಳು-9880541556; ಗಣಿತ ವಿಷಯಕ್ಕಾಗಿ ಧನಂಜಯಪಟೇಲ್-7344120729, ಗುರುಪ್ರಸಾದ್-9663945599, ಕೆ.ಆರ್. ರಾಮಚಂದ್ರಪ್ಪ-9739353641, ಮಂಜುನಾಥ-9731348240, ವಿಜ್ಞಾನ ವಿಷಯಕ್ಕಾಗಿ ಲೋಕೇಶ್-9901080705, ಗಿರೀಶ್-9620912980, ಕನ್ನಡ ವಿಷಯಕ್ಕಾಗಿ ನಿರಂಜನ್-9740209569, ಜಯರಾಂ-9901124277, ಇಂಗ್ಲೀಷ್ ವಿಷಯಕ್ಕಾಗಿ ನರಸಿಂಹಮೂರ್ತಿ-9845917041, ರಾಘವೇಂದ್ರ-9964113546, ಎಂ. ವೆಂಕಟರಾಮು-9341902053, ಹಿಂದಿ ವಿಷಯಕ್ಕಾಗಿ ಪುಟ್ಟಗಂಗಯ್ಯ-9972077648, ರೇಣುಕಪ್ಪ-9480179934, ಸಮಾಜ ವಿಜಾÐನ ವಿಷಯಕ್ಕಾಗಿ ಮೋಹನ್‍ಕುಮಾರ್-7019035552ಗಳಿಗೆ ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 46 times, 1 visits today)

Related posts