ತಾ.ಪಂ.ಸಿಬ್ಬಂದಿಗೆ ಕೊರೊನಾ : ಮಾಹಿತಿಯಿದ್ದರೂ ಸಭೆ ನಡೆಸಿದ ಶಾಸಕ ಗೌರಿಶಂಕರ್

ತುಮಕೂರು:

      ತುಮಕೂರು ತಾಲ್ಲೂಕು ಪಂಚಾಯಿತಿ ಮಹಿಳಾ ಸಿಬ್ಬಂದಿ ಮಂಜುಳಾ ಕರೋನಾ ಪಾಸಿಟಿವ್ ಧೃಡ ಪಟ್ಟಿದೆ. ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಮತ್ತು ಕಚೇರಿಗೆ ಹಾಜರಾಗಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ವಾಸವಿರುವ ಸೋಂಕಿತ ಮಂಜುಳಾರವರು ಪ್ರತಿನಿತ್ಯ ಕೆಸ್ತೂರು ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ರಮೇಶ್ ಮತ್ತು ಸ್ವಾಂದೇನಹಳ್ಳಿ ಪಿಡಿಓ ಕೃಷ್ಣಮೂರ್ತಿ ರವರ ಜೊತೆಯಲ್ಲಿ ಬೆಂಗಳೂರಿನಿಂದ ಕೃಷ್ಣಮೂರ್ತಿ ಅವರ ಕಾರಿನಲ್ಲಿ ಬಂದು ಹೋಗುತ್ತಿರುತ್ತಾರೆ. ಸ್ವಾಂದೇನಹಳ್ಳಿ ಪಿಡಿಒ ಕೃಷ್ಣಮೂರ್ತಿ ಮಾಹಿತಿ ತಿಳಿದ ಮೇಲೆ ಕಚೇರಿ ಹಾಜರಾಗದೆ ರಜೆ ಪಡೆದಿರುವ ವಿಚಾರ ಕೇಳಿ ಬಂದಿರುತ್ತದೆ.

      ಕೃಷ್ಣಮೂರ್ತಿ ರಮೇಶ್ ಮಂಜುಳಾ ರವರು ಪ್ರತಿನಿತ್ಯ ಕೃಷ್ಣಮೂರ್ತಿ ಕಾರಿನಲ್ಲಿ ಬೆಂಗಳೂರು ನಿಂದ ಬರುತ್ತಿದ್ದು ಕೆಸ್ತೂರು ಮತ್ತು ಸ್ವಾಂದೇನಹಳ್ಳಿ ಪಂಚಾಯತ್ ಸಿಬ್ಬಂದಿಗಳು ಕೂಡ ಆತಂಕದಲ್ಲಿದ್ದಾರೆ.
ಅದೇ ಮಂಜುಳಾ ರವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವ ವಿಚಾರ ತಾಲೂಕು ಪಂಚಾಯತ್ ಇವೋ ಜೈಪಾಲ್ ಮತ್ತು ಏಡಿ ಶಶಿಧರ್ ರವರಿಗೆ ಮಾಹಿತಿ ಇರುತ್ತದೆ.

     ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ಬೆಳಿಗ್ಗೆ ತಾಲೂಕು ಪಂಚಾಯತ್ ಆವರಣದಲ್ಲಿ ಪೂರ್ವನಿಯೋಜಿತವಾಗಿ ಇರುತ್ತದೆ. ತಾಲೂಕು ಪಂಚಾಯತ್ ಕಚೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ರದ್ದುಗೊಳಿಸುವ ವಿಚಾರ ಶಾಸಕ ಗೌರಿಶಂಕರ್ ಹೇಳಿದರು,ಶಾಸಕರಿಗೆ ಕರೋನಾ ಪಾಸಿಟಿವ್ ದೃಢ ಪಟ್ಟಿರುವ ಸಿಬ್ಬಂದಿ ಮಂಜುಳಾರವರು 15 ದಿನದಿಂದ ರಜೆಯಲ್ಲಿ ಇದ್ದಾರೆ ಕಚೇರಿಗೆ ಬಂದಿರುವುದಿಲ್ಲ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪೂರ್ವನಿಯೋಜಿತ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ನಡೆಸಿರುತ್ತಾರೆ. ತಾಲೂಕು ಪಂಚಾಯತ್ ಕಚೇರಿ ಆವರಣಕ್ಕೆ ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಚೇರಿಯ ಒಳಗೆ ಬರಲು ನಿರಾಕರಿಸಿದಾಗ ಕಚೇರಿ ಸಭಾಂಗಣದ ಮಧ್ಯೆಯಿರುವ ಕಾರಿಡಾರ್ ನಲ್ಲಿ ಸಾಮಾಜಿಕ ಅಂತರ ವಿಲ್ಲದಂತೆ ಸಭೆ ನಡೆಸಿದ್ದಾರೆ. ಶಾಸಕರ ಬಳಿ ತಮ್ಮ ನೋವುಗಳನ್ನು ಹೇಳಿಕೊಳ್ಳಲಾಗದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿಧಿಯಿಲ್ಲದೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜೀವಕ್ಕೆ ಬೆಲೆ ಇಲ್ಲವೇ…? ತಾಲೂಕು ಪಂಚಾಯತ್ ಇಔ ಮತ್ತು ಂಆ ವರ್ತನೆ ಅಮಾನವೀಯವಾಗಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯ ಸಮಯದಲ್ಲಿ ಶಾಸಕ ಗೌರಿಶಂಕರ್ ರವರು ಸ್ವ ಬುದ್ಧಿಯಿಂದ ವಿಚಾರ ಮಾಡಿ ಮುಂದುವರಿಯಬೇಕು.

(Visited 15 times, 1 visits today)

Related posts

Leave a Comment