Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ
  • ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ
  • ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ
  • ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
  • ಬಡತನ ನಿರ್ಮೂಲನೆ ನಮ್ಮ ಉದ್ದೇಶ : ಶಶಿಧರ್
  • ಸಾಹಿತ್ಯ, ಕಾವ್ಯಗಳ ತೌಲನಿಕ ಅಧ್ಯಯನ ಅಗತ್ಯ: ನಾಡೋಜ ಹಂಪನಾ
  • ಜನಸಂಖ್ಯಾವಾರು ಮೀಸಲಾತಿ ಹೆಚ್ಚಳವಾಗಲು ಹೋರಾಟ ಅಗತ್ಯ
  • ಜೀವಿಗಳ ಸಮೃದ್ದಿಯಾಗಿ ಪರಿಸರದ ಸಂರಕ್ಷಣೆ ಅತ್ಯಗತ್ಯ : ಜೆ. ಪ್ರಭು
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ವಿಷಯ ಪರಿಣತಿ ಅತ್ಯಗತ್ಯ
ಕರ್ನಾಟಕ ಸುದ್ಧಿಗಳು

ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ವಿಷಯ ಪರಿಣತಿ ಅತ್ಯಗತ್ಯ

By News Desk BenkiyabaleUpdated:August 11, 2023 6:07 pm

ತುಮಕೂರು


ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡದಂತೆ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ನಿರ್ವಹಿಸಲು ಸರ್ಕಾರಿ ಅಧಿಕಾರಿ/ನೌಕರರು ಕಾನೂನು ವಿಷಯದಲ್ಲಿ ಪರಿಣತಿ ಹೊಂದಿರುವುದು ಅತ್ಯಗತ್ಯವೆಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷರಾದ ವೆಂಕಟ ಸುದರ್ಶನ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿಂದು ಸರ್ಕಾರಿ ಅಧಿಕಾರಿ/ನೌಕರರಿಗಾಗಿ “ಸರ್ಕಾರದ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಗಾಗಿ ಅಧಿಕಾರಿ/ನೌಕರರು ಕಾಲ-ಕಾಲಕ್ಕೆ ಹೊರಡಿಸಲಾಗುವ ಕಾನೂನು ತಿದ್ದುಪಡಿಗಳ ಬಗ್ಗೆ ತಿಳಿದುಕೊಂಡಿರಬೇಕು. ಸರ್ಕಾರದ ವಿರುದ್ಧ ಯಾವುದೇ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡಿದರು.
ವಿಷಯ ನಿರ್ವಾಹಕರಿಗೆ ಕಾನೂನಿನ ಬಗ್ಗೆಯಿರುವ ಅರಿವಿನ ಕೊರತೆಯಿಂದ ಹಾಗೂ ನ್ಯಾಯಾಲಯದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಪ್ರಕರಣಗಳು ಬಗೆಹರಿಯದೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ ಎಂದು ತಿಳಿಸಿದರಲ್ಲದೆ ನ್ಯಾಯಾಲಯ ನಿರ್ವಹಣಾ ವಿಧಾನ, ಸಿವಿಲ್ ವ್ಯಾಜ್ಯಗಳಿಗೆ ಸಂಬAಧಿಸಿದAತೆ ಸರ್ಕಾರದ ಪರವಾಗಿ ವಾದಿಸಲು ಕಲೆ ಹಾಕಬೇಕಾದ ದಾಖಲೆ ಮತ್ತು ಸಾಕ್ಷಿಗಳು, ಸರ್ಕಾರದ ವಿರುದ್ಧ ಬಂದ ನೋಟೀಸುಗಳಿಗೆ ಯಾವ ರೀತಿ ಉತ್ತರಿಸಬೇಕೆಂಬ ಬಗ್ಗೆ ಸರ್ಕಾರಿ ಅಧಿಕಾರಿ/ನೌಕರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಅಧಿಕಾರಿ/ನೌಕರರು ಕಾರ್ಯಾಗಾರದಿಂದ ಕಾನೂನು ಅರಿವು ಪಡೆದು ಸರ್ಕಾರಿ/ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸ್ವಂತ ಆಸ್ತಿ ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರ್ಕಾರದ ಅನ್ನ ತಿನ್ನುತ್ತಿರುವ ನಾವೆಲ್ಲಾ ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿಯನ್ನು ಸಂರಕ್ಷಿಸುವಲ್ಲಿ ಆಸಕ್ತಿ ವಹಿಸಬೇಕು. ಸರ್ಕಾರದ ವ್ಯಾಜ್ಯಗಳ ಬಗ್ಗೆ ಕಾಳಜಿಯಿಂದ ಕ್ರಮಕೈಗೊಂಡಲ್ಲಿ ಮೌಲ್ಯಯುತವಾದ ಸರ್ಕಾರಿ ಸ್ಥಳಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ಸರ್ಕಾರಿ ಆಸ್ತಿಯನ್ನು ಲಪಟಾಯಿಸುವವರ ಸಂಖ್ಯೆಯನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ ಎಂದರಲ್ಲದೆ, ಇಂಥ ಕೃತ್ಯಗಳಿಗೆ ಒಂದು ರೀತಿಯಲ್ಲಿ ನಾವೂ ಸಹ ಪರೋಕ್ಷವಾಗಿ ಕಾರಣರಾಗುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟ್ ಸುದರ್ಶನ್ ಅವರು ಸಿವಿಲ್ ದಾವೆಗಳಲ್ಲಿನ ಹಂತಗಳು ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಸರ್ಕಾರಿ ನೌಕರರ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರಲ್ಲದೆ ಸರ್ಕಾರಿ ಆಸ್ತಿ ಕಾಪಾಡುವಲ್ಲಿ ಉದಾಸೀನ ಬೇಡ. ಸರ್ಕಾರಿ ವ್ಯಾಜ್ಯಗಳು ಶೀಘ್ರ ವಿಲೇವಾರಿಯಾಗಲು ಅಧಿಕಾರಿಗಳು ಸಹಕರಿಸಬೇಕು. ಸರ್ಕಾರಿ ಸೇವೆಯಲ್ಲಿರುವವರೆಲ್ಲರೂ ಭಾಗ್ಯಶಾಲಿಗಳು. ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕೈಜೋಡಿಸುವ ಮೂಲಕ ಸರ್ಕಾರದ ಋಣವ ತೀರಿಸಿ ಋಣಮುಕ್ತರಾಗಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸರ್ಕಾರಿ/ಸಾರ್ವಜನಿಕರ ಆಸ್ತಿಗೆ ಸರ್ಕಾರಿ ನೌಕರರು ಕಾವಲುಗಾರರಾಗಿರಬೇಕು. ಆಸ್ತಿ ಉಳಿಸುವಲ್ಲಿ ಕಾಳಜಿ ಹೊಂದಿರಬೇಕು. ಜಿಲ್ಲೆಯ ನ್ಯಾಯಾಲಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರ ಕೊರತೆ ನೀಗಿಸುವ ದೃಷ್ಟಿಯಿಂದ ಆಗಸ್ಟ್ ಮಾಹೆಯೊಳಗೆ ೧೬ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯಾಲಯದಲ್ಲಿ ಸರ್ಕಾರಿ ವ್ಯಾಜ್ಯಗಳನ್ನು ಪ್ರತಿನಿಧಿಸಲು ಈ ನೇಮಕಾತಿ ಅನುಕೂಲವಾಗಲಿದೆ. ಸರ್ಕಾರಿ ನೌಕರರು/ ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳ ಬಗ್ಗೆ ೧೫ ದಿನಗಳಿಗೊಮ್ಮೆ ಪರಿಶೀಲಿಸಿ ವಿಲೇವಾರಿಗೆ ಕ್ರಮವಿಡಲಾಗಿದೆ ಎಂದು ತಿಳಿಸಿದರಲ್ಲದೆ, ಸಾರ್ವಜನಿಕರಿಗೆ ಬಳಕೆಯಾಗುವ ಆಸ್ತಿಯನ್ನು ಭೂಕಬಳಿಕೆದಾರರು ಅನುಭವಿಸದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಆಸ್ತಿ ಸಂರಕ್ಷಣೆಯಲ್ಲಿ ಕಾನೂನು ಜ್ಞಾನದ ಕೊರತೆ ಪ್ರಮುಖ ಸಮಸ್ಯೆಯಾಗಿರುವುದರಿಂದ ಆಸ್ತಿ ಹಕ್ಕುಗಳ ಬಗ್ಗೆ ಅಧಿಕಾರಿ/ನೌಕರರು ಹೆಚ್ಚಿನ ಜ್ಞಾನ ಹೊಂದಿರಬೇಕು. ಕಾನೂನು ಜ್ಞಾನದ ಕೊರತೆ ಇರುವುದರಿಂದ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ಸಮಯೋಚಿತವಾಗಿ ಉಪಕ್ರಮ ಕೈಗೊಳ್ಳುವುದರಲ್ಲಿ ವಿಳಂಬವಾಗುತ್ತಿರುವುದರಿAದ ಆಸ್ತಿ ಕಬಳಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅರಿವು ಮೂಡಿಸುವ ಸಲುವಾಗಿ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲ್ಲೂಕು, ಗ್ರಾಮ ಮಟ್ಟದ ಅಧಿಕಾರಿಗಳಿಗೂ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತಹಶೀಲ್ದಾರ್ ಸಿದ್ಧೇಶ್, ಜಿಪಂ. ಉಪಕಾರ್ಯದರ್ಶಿಗಳಾದ ಹಾಲಸಿದ್ಧಪ್ಪ ಪೂಜೇರಿ ಹಾಗೂ ನರಸಿಂಹಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಡಿಕೆಶಿ ನಾಯಕತ್ವವನ್ನು ಹೊಗಳಿದ ಶಾಸಕ ಬಿ. ಸುರೇಶ್ ಗೌಡ
Next Article ಪಾವಗಡ ಬಸ್ ನಿಲ್ದಾಣ ಇದ್ದರು ಇಲ್ಲವಾಗಿದೆ ಸಾರ್ವಜನಿಕರ ಆಗ್ರಹ : ಅಧಿಕಾರಿಗಳು ಜಾಣ ಕುರುಡು
News Desk Benkiyabale

Related Posts

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

September 20, 2023 5:12 pm ತುಮಕೂರು

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm ಇತರೆ ಸುದ್ಧಿಗಳು

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

September 20, 2023 5:12 pm
ಇತರೆ ಸುದ್ಧಿಗಳು

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm
ತುಮಕೂರು

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm
ತುಮಕೂರು

ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

September 12, 2023 4:16 pm
ತುಮಕೂರು

ಬಡತನ ನಿರ್ಮೂಲನೆ ನಮ್ಮ ಉದ್ದೇಶ : ಶಶಿಧರ್

September 12, 2023 4:13 pm
ತುಮಕೂರು

ಸಾಹಿತ್ಯ, ಕಾವ್ಯಗಳ ತೌಲನಿಕ ಅಧ್ಯಯನ ಅಗತ್ಯ: ನಾಡೋಜ ಹಂಪನಾ

September 11, 2023 4:38 pm
Our Youtube Channel
Our Picks

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ಮಾಹಿತಿ ಶಿಕ್ಷಣ ಸಂವಹನ ವಿಶೇಷ ಕಾರ್ಯಕ್ರಮ

August 22, 2023 5:18 pm

ಹೋಬಳಿ ಮಟ್ಟದ ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಬಗೆಹರಿಸಲು ಕೆ.ಎನ್.ರಾಜಣ್ಣ ಸೂಚನೆ

August 17, 2023 4:52 pm

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಶಿಸ್ತುಕ್ರಮ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ

August 10, 2023 5:08 pm

ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಕನಸುಗಳಿರಬೇಕು

August 08, 2023 5:03 pm
News Tags
Accident Ambedkar Araga jnanendra BJP Bommai Ceo Chikkanayakanahalli Congress corona Cpim crime DC dss epaper gs basavaraju Gubbi jc madhuswamy Jds jyothiganesh Kn rajanna kodigenahalli Koratagere kumaraswamy kunigal madhugiri Mla Mla jyothiganesh mla shrinivas mlc r.rajendra Parameshwar pavagada Police police naveen Protest r.ashok R. Rajendra tumakur tumkur Tumkur dc yspatil Tumkur mahanagara palike tumur turuvekere University Vasanna YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm
Don't Miss
ತುಮಕೂರು

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

By News Desk BenkiyabaleSeptember 20, 2023 5:12 pm

ತುಮಕೂರು ಬರ, ಮಳೆ ಕೊರತೆ ನಡುವೆಯೂ ಗೌರಿ-ಗಣೇಶ ಹಬ್ಬವನ್ನು ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯೇ…

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm

ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

September 12, 2023 4:16 pm
News by Date
September 2023
M T W T F S S
 123
45678910
11121314151617
18192021222324
252627282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.