ತುಮಕೂರು : ಸಿದ್ಧಗಂಗ ಮಠಕ್ಕೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ!!

ತುಮಕೂರು:

      ಜಿಲ್ಲಾ ಬಿಜೆಪಿಯ ನೂತನ ಸಾರಥಿ ಮಾಜಿ ಶಾಸಕ ಬಿ.ಸುರೇಶ್ ಗೌಡರವರು ಸಿದ್ಧಗಂಗ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದರು.

      ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊಟ್ಟ ಮೊದಲ ಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಜಿಲ್ಲಾಧ್ಯಕ್ಷರಾಗಿ ಶ್ರೀಗಳ ಆಶೀರ್ವಾದ ಪಡೆದದ್ದು ವಿಶೇಷ.

      ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರನ್ನು ಆಶೀರ್ವ ದಿಸಿದ ಶ್ರೀಗಳು ಜಿಲ್ಲೆಯ ಸಂಘಟ ನೆಯಲ್ಲಿ ಯಶಸ್ವಿ ನಾಯಕನಾಗುವಂತೆ ಅರಸಿ ಆಶೀರ್ವದಿಸಿದರು.

      ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರೊಟ್ಟಿಗೆ ಮಾಜಿ ಸಚಿವ ಸೊಗಡು ಶಿವಣ್ಣ, ನಿಕಟಪೂರ್ವ ಅಧ್ಯಕ್ಷ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಹಾಲಿ ಸದಸ್ಯ ಸದಸ್ಯ ವೈ.ಹೆಚ್.ಹುಚ್ಚಯ್ಯ. ಹಾಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಗೂಳೂರು ಶಿವಕುಮಾರ್, ಸಿದ್ದೇಗೌಡರು, ಮಾಜಿ ತಾ.ಪಂ ಅಧಕ್ಷರು ನರಸಿಂಹಮೂರ್ತಿ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಜನಪ್ರತಿನಿಧಿಗಳು, ಸುರೇಶ್‍ಗೌಡರ ಅಭಿಮಾನಿಗಳ ಬಳಗ ಹಾಗೂ ನಗರದ ಕೆಲ ಬಿಜೆಪಿ ಮುಖಂಡರು ಸುರೇಶ್‍ಗೌಡರೊಟ್ಟಿಗೆ ಮಠಕ್ಕೆ ಭೇಟಿ ನೀಡಿದ್ದರು.

(Visited 3 times, 1 visits today)

Related posts