ನಾಳೆ ತುಮಕೂರಿಗೆ ಪ್ರಧಾನಿ : ವಿವಿಧ ಸಚಿವರು, ಗಣ್ಯರ ದಂಡು

 ತುಮಕೂರು  :

      ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರದಲ್ಲಿ ಜನವರಿ 2ರಂದು ಪಾಲ್ಗೊಳ್ಳಲಿರುವ ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನ ಕಾರ್ಯಕ್ರಮ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸೇರಿದಂತೆ ವಿವಿಧ ರಾಜ್ಯಗಳ ಸಚಿವರು ಭಾಗವಹಿಸಲಿದ್ದಾರೆ.

      ಸಮಾರಂಭದಲ್ಲಿ ಕೇಂದ್ರದ ಕ್ಯಾಬಿನೆಟ್ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಕೃಷಿ ಸಚಿವರಾದ ಪರ್ಷೋತ್ತಮ್ ರೂಪಾಲ ಹಾಗೂ ಕೈಲಾಶ್ ಚೌಧರಿ, ರಾಜ್ಯ ರೈಲ್ವೇ ಸಚಿವ ಸುರೇಶ್ ಸಿ.ಅಂಗಡಿ, ಹರಿಯಾಣ ರಾಜ್ಯದ ಕೃಷಿ ಸಚಿವ ಜೆ.ಪಿ.ದಲಾಲ್, ತ್ರಿಪುರ ರಾಜ್ಯದ ಕೃಷಿ ಸಚಿವ ಪ್ರಣಜಿತ್ ಸಿಂಗ್ ರಾಯ್, ಹಿಮಾಚಲ್ ಪ್ರದೇಶದ ಕೃಷಿ ಸಚಿವ ಡಾ: ರಾಮ್ ಲಾಲ್ ಮರ್‍ಕಂದ, ಛತ್ತೀಸ್‍ಗಡ್‍ನ ಕೃಷಿ ಅಭಿವೃದ್ಧಿ ಸಚಿವ ರವೀಂದ್ರ ಚೌಬೇಜಿ, ಬಿಹಾರ್ ರಾಜ್ಯದ ಕೃಷಿ ಸಚಿವ ಪ್ರೇಮ್‍ಕುಮಾರ್, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯಲಪ್ರತಾಪ್ ಶಶಿ, ಗುಜರಾತ್‍ನ ಕೃಷಿ ಸಚಿವ ರಣಚೋದ್‍ಬಾಯ್ ಚಣಬಾಯ್ ಫಾಲ್ದು, ತಮಿಳುನಾಡು ರಾಜ್ಯದ ಮೀನುಗಾರಿಕಾ ಸಚಿವ ತಿರು ಡಿ.ಜಯಕುಮಾರ್, ಮಣಿಪುರದ ಕೃಷಿ ಸಚಿವ ವಿ.ಹ್ಯಾಂಗ್‍ಖಾನ್‍ಲೆನ್, ಒರಿಸ್ಸಾದ ಕೃಷಿ ಸಚಿವ ಡಾ: ಅರುಣ್ ಕುಮಾರ್ ಸಾಹು, ಅಸ್ಸಾಂನ ಕೃಷಿ ಸಚಿವ ಅತುಲ್‍ಬೋರಾ,    ವಸತಿ ಸಚಿವ ವಿ. ಸೋಮಣ್ಣ, ಅಬಕಾರಿ ಸಚಿವ ಹೆಚ್.ನಾಗೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಐ.ಪಾಟೀಲ ಹಾಗೂ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

(Visited 8 times, 1 visits today)

Related posts

Leave a Comment