ಮಹಾನಗರಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಚುನಾವಣೆ ಮುಂದೂಡಿಕೆ

 ತುಮಕೂರು:

      ತುಮಕೂರು ಮಹಾನಗರಪಾಲಿಕೆಯಲ್ಲಿನ ಪಟ್ಟಣ ವ್ಯಾಪಾರ ಸಮಿತಿಗೆ ಅಲ್ಪಸಂಖ್ಯಾತ ಮೀಸಲಾತಿ ಸ್ಥಾನಕ್ಕೆ ಡಿಸೆಂಬರ್ 21ರಂದು ನಡೆಯಬೇಕಿದ್ದ ಚುನಾವಣೆಯನ್ನು ಡಿಸೆಂಬರ್ 26ರಂದು ಮುಂದೂಡಲಾಗಿದೆ ಎಂದು ಪಟ್ಟಣ ವ್ಯಾಪಾರ ಸಮಿತಿ ಚುನಾವಣಾಧಿಕಾರಿ ತಿಳಿಸಿದ್ದಾರೆ.

      ಜಿಲ್ಲಾದ್ಯಂತ ಡಿಸೆಂಬರ್ 18ರ ರಾತ್ರಿ 8 ಗಂಟೆಯಿಂದ 21ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಸದರಿ ಚುನಾವಣೆಯು ಡಿಸೆಂಬರ್ 26 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಹಾನಗರಪಾಲಿಕೆ ಆವರಣದ ನಗರ ವಸತಿ ರಹಿತರ ಆಶ್ರಯ ಕೇಂದ್ರ ಹಾಗೂ ನಲ್ಮ್ ಯೋಜನೆಯ ಕಚೇರಿಯಲ್ಲಿ ನಡೆಯಲಿದೆ.

      ಪಟ್ಟಣ ವ್ಯಾಪಾರ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಮೀಸಲಾತಿಯ 01 ಸ್ಥಾನಕ್ಕೆ ಶಾಂತಿನಗರದ ಅಭ್ಯರ್ಥಿ ಬಾಬಾ ಬಿನ್ ಷೇಕ್‍ಅಮೀರ್(ಮಾರಾಟ ನೋಂದಣಿ ಸಂಖ್ಯೆ – 1487), ಜಿ.ಸಿ.ಕಾಲೋನಿಯ ಮಹಮ್ಮದ್ ರಫೀಕ್ ಬಿನ್ ಅಬ್ದುಲ್‍ಕುದ್ದೂಸ್(ಮಾರಾಟ ನೋಂದಣಿ ಸಂಖ್ಯೆ – 780), ಶ್ರೀರಾಮನಗರದ ಮೊಹಮ್ಮದ್ ಸೌದ್ ಅಹಮದ್ ಬಿನ್ ಲೇಟ್ ರಫಿಉಲ್ಲಾ(ಮಾರಾಟ ನೋಂದಣಿ ಸಂಖ್ಯೆ – ಟಿಎಂಕೆ00817), ಹೊರಪೇಟೆಯ ವಸೀಂ ಅಕ್ರಂ ಬಿನ್ ಅನ್ವರ್ ಪಾಷ(ಮಾರಾಟ ನೋಂದಣಿ ಸಂಖ್ಯೆ – 1360) ಅಂತಿಮವಾಗಿ 4 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 6 times, 1 visits today)

Related posts

Leave a Comment