ದೀಪಾವಳಿ ಹಿನ್ನೆಲೆ: ಮಿಂಟೋ ಆಸ್ಪತ್ರೆಯಿಂದ 24/7 ತುರ್ತು ಚಿಕಿತ್ಸೆ ನೀಡಲು ತಯಾರಿ

ಬೆಂಗಳೂರು: 

      ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಮಿಂಟೋ ಆಸ್ಪತ್ರೆ ವತಿಯಿಂದ ‘ಮುಂಜಾಗ್ರತೆ ವಹಿಸಿ ಅಪಾಯ ಆಗುವುದನ್ನು ತಡೆಗಟ್ಟುವುದು ಚಿಕಿತ್ಸೆ ನೀಡುವುದಕ್ಕಿಂತ ಉತ್ತಮ ಕ್ರಮ’ ಎಂಬ ಉದ್ದೇಶದೊಂದಿಗೆ ಹಬ್ಬದಲ್ಲಿ ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ತುರ್ತು ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

      ಹಬ್ಬದ ಸಂದರ್ಭದಲ್ಲಿ ಅಗತ್ಯವಿರುವ ಔಷಧ ಸೇರಿದಂತೆ ಮತ್ತಿತರ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಗಳ ಕಾಲವೂ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ. 

      ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅನಾಹುತ ಸಂಭವಿಸಿದರೆ ಆಸ್ಪತ್ರೆಯ ಸಹಾಯವಾಣಿ ಸಂಖ್ಯೆ 080-26707176 ಅಥವಾ ಮೊ. 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

(Visited 7 times, 1 visits today)

Related posts

Leave a Comment