ಬಿಜೆಪಿ ಸೇರಿದ ವಾರದೊಳಗೆ ಮಂಜುನಾಥ್ ಯೂಟರ್ನ್

ಹುಳಿಯಾರು:

      ಕಳೆದ ವಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಕುಟುಂಬ ಸಮೇತ ಬಿಜೆಪಿ ಸೇರಿದ್ದ ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್ ಅವರು ಈಗ ಯೂ ಟರ್ನ್ ಹೊಡೆದಿದ್ದಾರೆ.

ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್ ಅವರು ತಮ್ಮ ತಾಯಿ ವಿಎಸ್‍ಎಸ್‍ಎನ್ ಸದಸ್ಯರಾದ ಶಿವಮ್ಮ ಹಾಗೂ ಪತ್ನಿ ಗ್ರಾಪಂ ಸದಸ್ಯೆ ರಮ್ಯಾ ಅವರೊಂದಿಗೆ ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

      ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೈ ಜೋಡಿಸುವುದಾಗಿ ಹೇಳಿ ಮಾಧುಸ್ವಾಮಿ ಬೆಂಬಲಿಗರೊಂದಿಗೆ ವಾರದಿಂದ ಇದ್ದ ಮಂಜುನಾಥ್ ಮೀಸಲಾತಿ ಪ್ರಕಟಗೊಂಡ ನಂತರ ತಮ್ಮ ನಿಲುವು ಬದಲಾಯಿಸಿ ಜೆಡಿಎಸ್ ತೆಕ್ಕೆಗೆ ಸೇರಿಕೊಂಡಿದ್ದಾರೆ.

      ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಅವರೊಂದಿಗೆ ತಮ್ಮ ಪತ್ನಿ ರಮ್ಯಾ ಜೊತೆ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಅವಧಿಯ ದೊಡ್ಡಎಣ್ಣೇಗೆರೆಯ ಅಧ್ಯಕ್ಷರ ಮೀಸಲಾತಿ ಬಿಸಿಎಂ ಬಿ ಜಾತಿಗೆ ಮೀಸಲಾಗಿದ್ದು ಜೆಡಿಎಸ್ ಹಾಗೂ ಕೆಎಸ್‍ಕೆ ಬಿಜೆಪಿ ಬಣದಿಂದ ರಮ್ಯಾ ಮಂಜುನಾಥ್ ಅವರಿಗೆ ಅಧ್ಯಕ್ಷ ಸ್ಥಾನದ ಆಫರ್ ಕೊಟ್ಟ ಪರಿಣಾಮ ಇವರು ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

(Visited 7 times, 1 visits today)

Related posts

Leave a Comment