ಕಾಡು ಮೊಲ ಚರ್ಮ ತೆಗೆಯುವ ವಿಡೀಯೋ ವೈರಲ್ : ಆರೋಪಿಗಳಿಬ್ಬರ ಬಂಧನ

ಕೊರಟಗೆರೆ:

      ವನ್ಯಪ್ರಾಣಿ ಕಾಡುಮೊಲ ಬೇಟಿಯಾಡಿ ಚರ್ಮವನ್ನು ಸುಲಿಯುವ ವಿಡಿಯೋ ಮತ್ತು ಪೊಟೋ ಟಿಕ್‍ಟಾಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿವರ್ಗ ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ.

      ತುಮಕೂರು ಉಪಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ.ಗಿರೀಶ್ ಮಾರ್ಗದರ್ಶನ ಮತ್ತು ಮಧುಗಿರಿ ಸಹಾಯಕ ಉಪ ಸಂರಕ್ಷಣಾಧಿಕಾರಿ ಶ್ರೀನಿವಾಸ ಎನ್.ಯರಡೋಣಿ ಮತ್ತು ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶ್‍ಚಂದ್ರ ನೇತೃತ್ವದ ತಂಡ ವಿನಯ್ ಮತ್ತು ವಿನಯಕುಮಾರ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

      ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಕರಿದುಗ್ಗನಹಳ್ಳಿ ವಿನಯ ಮತ್ತು ಎಸ್.ಗೊಲ್ಲಹಳ್ಳಿ ವಿನಯಕುಮಾರ್ ಎಂಬಾತನು ಟಿಕ್‍ಟಾಕ್ ಪ್ರಚಾರದ ಹುಚ್ಚು ಮನಸ್ಸಿನಿಂದ ಮೊಲದ ಚರ್ಮ ಸುಳಿಯುವ ವಿಡಿಯೋ ಮತ್ತು ಪೊಟೋ ಹಾಕಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿವರ್ಗ ದಾಳಿ ನಡೆಸಿದ್ದಾರೆ.

      ಅರಣ್ಯದಲ್ಲಿ ವಾಸಿಸುವ ಕಾಡುಮೊಲ ಬೇಟಿಯಾಡಿ ಮನೆಯ ಆವರಣದಲ್ಲಿ ಮೊದಲ ಚರ್ಮ ತೆಗೆಯುವ ವಿಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಜಾಡು ಪತ್ತೆಮಾಡಿದ ಮಧುಗಿರಿ ಸಹಾಯಕ ಉಪ ಸಂರಕ್ಷಣಾಧಿಕಾರಿ ಮತ್ತು ಕೊರಟಗೆರೆ ವಲಯ ಅರಣ್ಯಾಧಿಕಾರಿ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಮತ್ತಷ್ಟು ತೀರ್ವ ಗೊಳಿಸಿದ್ದಾರೆ.

      ಕಾರ್ಯಚರಣೆಯಲ್ಲಿ ಕೊರಟಗೆರೆ ಉಪವಲಯ ಅರಣ್ಯಾಧಿಕಾರಿ ನಾಗರಾಜು, ನಂದೀಶ್, ನಹೆಜುಲ್ ತಸ್ಮಿಯಾ, ಹನುಮಂತಪ್ಪ, ವಿಜಯ ದೇವೇಂದ್ರ, ನರಸಿಂಹಯ್ಯ, ನರಸರಾಜು ಭಾಗವಹಿಸಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನನ್ನು ನೀಡಲಾಗಿದೆ.

(Visited 116 times, 1 visits today)

Related posts