ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ರೈತರಿಗೆ ತೊಂದರೆ ಕೋಡುತ್ತೀದ್ದ ಚಿರತೆಗಳು ರೈತರ ಜಮೀನಿನ ಹತ್ತಿರ ಪ್ರತ್ಯೇಕ ಎರಡು ಕಡೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಬಿದ್ದು ಚಿರಾಟ ನಡೆಸಿರುವ ಘಟನೆ ಮಂಗಳವಾರ ಮತ್ತು ಬುಧವಾರ ಎರಡು ದಿನ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತನ ತೋಟದಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಸೋಮವಾರ ತಡರಾತ್ರಿ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ವರ್ಗ ಮಂಗಳವಾರ ಮುಂಜಾನೆ ಮತ್ತೊಂದು ಅರಣ್ಯಕ್ಕೆ ರವಾನಿಸಿದ್ದಾರೆ.
ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಓಬಳದೇವರಹಳ್ಳಿ ತಾಂಡದ ಬೇಟ್ಟದ ಕೆಳಗೆ ಅರಣ್ಯ ಇಲಾಖೆ ಇಟ್ಟಿದ್ದ ಮತ್ತೊಂದು ಬೋನಿಗೆ ಮಂಗಳವಾರ ರಾತ್ರಿ ಮತ್ತೊಂದು ಚಿರತೆ ಬಿದ್ದಿದೆ. ಅದನ್ನು ಸಹ ಅರಣ್ಯ ಇಲಾಖೆ ಬುಧವಾರ ಮುಂಜಾನೆ ಚಿರತೆಯನ್ನು ಸೇರೆಹಿಡಿದು ಮತ್ತೊಂದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಗೌರಗಾನಹಳ್ಳಿ ಸಮೀಪ ಮಂಗಳವಾರ ಸೇರೆಯಾಗಿದ್ದ ಚಿರತೆ ವಿಚಾರ ಮಾಸುವ ಮುನ್ನವೇ ಮಾರನೇಯ ದಿನವೇ ಮತ್ತೊಂದು ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಓಬಳದೇವರಹಳ್ಳಿ ಬೆಟ್ಟದ ಸಮೀಪ ಬೋನಿಗೆ ಬಿದ್ದ ಚಿರತೆ ನೋಡಲು ಮತ್ತು ಮೊಬೈಲ್ನಲ್ಲಿ ಚಿರತೆ ಚಿತ್ರ ಸೆರೆ ಹಿಡಿಯಲು ಹರಸಾಹಸ ಪಡುತ್ತೀದ್ದ ಪ್ರಸಂಗ ನಡೆದಿದೆ.
ಚಿರತೆಯನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಸಾರ್ವಜನಿಕರು ಮುಗಿಬಿದ್ದು ಚಿರತೆಯ ಮುಖಕ್ಕೆ ಕಡ್ಡಿಯಿಂದ ತಿವಿದು ಗಾಯಗೊಳಿಸಿ ಗಾಬರಿಗೊಳಿಸಿ ನಂತರ ಅದರ ಹೊಟ್ಟೆಯ ಭಾಗಕ್ಕೂ ಸಹ ನೋವುಂಟು ಮಾಡಿದ್ದಾರೆ. ಬೋನಿನಲ್ಲಿದ್ದ ಚಿರತೆಯ ಮೇಲೆ ಕೂಗಾಡುತ್ತಾ ಚಿರತೆಗೆ ಸಾಕಾಷ್ಟು ಆಯಾಸ ಉಂಟು ಮಾಡುವುದರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲು ಸಹ ಸ್ಥಳಿಯರು ದರ್ಪ ಮೆರೆದಿದ್ದಾರೆ.
ಚಿರತೆಯ ರಕ್ಷಣೆ ಮತ್ತು ರವಾನಿಸಲು ಬಂದ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ಮೇಲು ಸಹ ಚಿರತೆ ನೋಡಲು ಆಗಮಿಸಿದ ಸಾರ್ವಜನಿಕರು ಅವಾಶ್ಚ ಶಬ್ದಗಳಿಂದ ನಿಂದಿಸಿ ನಿಮಗೆ ಬರಲು ಹೇಳಿದವರು ಯಾರು..? ಚಿರತೆ ಬೋನಿಗೆ ಬಿದ್ದ ಮೇಲೆ ಏಕೆ ಬರುತ್ತೀರಿ. ನಾವೇ ಕಾಡಿಗೆ ಬಿಟ್ಟು ಬರುತ್ತೇವೆ ಎಂದು ದರ್ಪದ ಮಾತುಗನ್ನಾಡಿದ್ದು ಅರಣ್ಯ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ.
ಕೊರಟಗೆರೆ ಪೊಲೀಸ್ ಸಿಪಿಐ ನದಾಪ್ ಮತ್ತು ಅರಣ್ಯ ಇಲಾಖೆಯ ಸತೀಶಚಂದ್ರ ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ಬೋನಿಯ ಸ್ಥಳದಿಂದ ದೂರ ಸರಿಸುವ ಪ್ರಯತ್ನ ಮಾಡಿದ್ದರೂ ಸಹ ಸಾರ್ವಜನಿಕರ ನಡುವೆ ಮೊಬೈಲ್ನಲ್ಲಿ ಚಿತ್ರ ಸೆರೆ ಹಿಡಿಯಲು ನೂಕುನುಗ್ಗಲು ಉಂಟಾಗಿದೆ. ಕೊನೆಗೆ ಹರಸಾಹಸ ಪಟ್ಟು ಚಿರತೆಯನ್ನು ಕಾಡಿಗೆ ರವಾನಿಸುವಲ್ಲಿ ಯಶಸ್ವಿ ಆಗಿದ್ದಾರೆ.