ಚಾಕು, ರಾಡು ಗಳಿಂದ ಏಕಾಏಕಿ ದಾಳಿ : ಯುವಕನ ಬರ್ಬರ ಹತ್ಯೆ

ಮಧುಗಿರಿ :
      ಪಟ್ಟಣದ ಶಂಕರ ಟಾಕೀಸ್ ಮುಂಭಾಗವಿರುವ ಶೇವಿಂಗ್ ಶಾಪ್ ಮುಂದೆ ಪತ್ರಿಕೆ ಓದುತ್ತಿದ್ದ ಯುವಕನ ಮೇಲೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ಗುಂಪೊಂದು ಹಾಡಹಗಲೇ ಭರ್ಜಿ, ಚಾಕು ,ರಾಡು ಗಳಿಂದ ಏಕಾಏಕಿ ದಾಳಿ ನಡೆಸಿ ತಿವಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ  ಶುಕ್ರವಾರ ನಡೆದಿದೆ. 
     ತುಮಕೂರಿನ ಮಂಜುನಾಥ ನಗರದ ವಾಸಿ ವೀರಭದ್ರಯ್ಯ(26) ಕೊಲೆಯಾದ  ಯುವಕನಾಗಿದ್ದು, ಈತ ಪತ್ರಿಕೆಯನ್ನು ಓದುತ್ತ ಶೇವಿಂಗ್ ಶಾಪ್ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದಾಗ ನಾಲ್ವರು ಯುವಕರು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದು ರಾಡ್ ನಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ದರದರನೆ  ರಸ್ತೆಯವರೆಗೂ ಎಳೆದುಕೊಂಡು ಹೋಗಿ
ಎಸೆದು ಪರಾರಿಯಾಗಿದ್ದಾರೆ. 
      ಶಿವರಾತ್ರಿ ಹಬ್ಬದಂದು ಸಾಯಂಕಾಲ ಶಿರಾ ಗೇಟ್ ಬಳಿ ಎರಡು ಯುವಕರ ಗುಂಪಿನ ನಡುವೆ ನಡೆದ ಘರ್ಷಣೆ ಈ ಗಲಾಟೆಗೆ ಕಾರಣವೆನ್ನಲಾಗುತ್ತಿದೆ.  ಗಾಯಳಿಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿ‌ನ ಚಿಕಿತ್ಸೆ ಗೆ ತುಮಕೂರು ಅಸ್ಪತ್ರೆಗೆ ಸಾಗಿಸುವಾಗ  ಮೃತಪಟ್ಟಿದ್ದಾನೆ.
      ಘಟನೆಯ ಸ್ಥಳಕ್ಕೆ ಡಿವೈಎಸ್ಪಿ ರಾಮಕೃಷ್ಣ, ಸಿಪಿಐ ಎಂ .ಎಸ್. ಸರ್ದಾರ್, ಪಿಎಸ್ಸೈ ಮಂಗಳಗೌರಮ್ಮ, ಎಎಸ್ ಐ ಸಾಕ್ಷ್ಯಪ್ಪ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
(Visited 10 times, 1 visits today)

Related posts

Leave a Comment