ಇಂಧನ ಲಾರಿ ಪಲ್ಟಿ : ಪೆಟ್ರೋಲ್‍ಗೆ ಮುಗಿಬಿದ್ದ ಜನತೆ!

ಮಧುಗಿರಿ:

     ಚಾಲಕನ ನಿಯಂತ್ರಣ ತಪ್ಪಿ ಪೆಟ್ರೊಲ್ ಲಾರಿಯೊಂದು ರಸ್ತೆ ಪಕ್ಕಕ್ಕೆ ಉರುಳಿಬಿದ್ದ ಪರಿಣಾಮ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.

      ತಾಲೂಕಿನ ಕೊಡಿಗೇನಹಳ್ಳಿ ಹೊಬಳಿಯ ಯಾಕಾರ್ಲಹಳ್ಳಿ ಕಡಗತ್ತೂರು ರಸ್ತೆಯಲ್ಲಿ ಬೆಳಿಗ್ಗೆ 11 ಗಂಟೆ ಆಸುಪಾಸಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇಂದನ ತುಂಬಿದಲಾರಿ ರಸ್ತೆ ಪಕ್ಕಕ್ಕೆ ಉರುಳಿದೆ. ಲಾರಿ ಪಲ್ಟಿಯಾಗಿ ಸೋರಿಕೆಯಾಗುವ ಇಂಧನದಿಂದ ಸ್ಪೋಟಿಸುವ ಸಾಧ್ಯತೆ ಹೆಚ್ಚಾಗಿ ಗ್ರಾಮಸ್ಥರ ಭೀತಿಯಿಂದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

      ತಕ್ಷಣ ಸುತ್ತಮುತ್ತಲಿನ ಗ್ರಾಮಸ್ಥರು ಬಿಂದಿಗೆ, ನೀರಿನ ಡಬ್ಬಗಳೊಂದಿಗೆ ದೌಡಾಯಿಸಿ ಸೋರಿಕೆಯಾಗುತಿದ್ದ ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದರು. ಸ್ಥಳಕ್ಕೆ ಪಿಎಸೈ ಮೋಹನ್ ಕುಮಾರ್ ಭೇಟಿ ನೀಡಿ ಟ್ಯಾಂಕರ್‍ನ್ನು ತೆರವು ಮಾಡಿದ್ದು ಯಾವುದೆ ಪ್ರಾಣಪಾಯ ಸಂಭವಿಸಿಲ್ಲಾ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 

(Visited 7 times, 1 visits today)

Related posts

Leave a Comment