ವೆಂಟಿಲೇಟರ್ ಇಲ್ಲದೆ ಸಹಜ ಉಸಿರಾಟ ನಡೆಸುತ್ತಿರುವ ಶ್ರೀಗಳು

ತುಮಕೂರು:

      ಸಿದ್ಧಗಂಗಾ ಶ್ರೀಗಳು ವೆಂಟಿಲೇಟರ್ ಇಲ್ಲದೆ ಸಹಜವಾಗಿ ಉಸಿರಾಟ ನಡೆಸುತ್ತಿದ್ದಾರೆ. ಎಂದಿನಂತೆ ಸಾರ್ವಜನಿಕರಿಗೆ ದರ್ಶನ ನೀಡುತ್ತಿದ್ದಾರೆ. ಶ್ರೀಗಳ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ಈ ಕುರಿತು ವಿಜಯ ಕರ್ನಾಟಕ ಪ್ರತ್ಯಕ್ಷವಾಗಿ ಪರಿಶೀಲಿಸಿದ್ದು, ಶ್ರೀಗಳು ಸಹಜವಾಗಿ ಉಸಿರಾಟ ನಡೆಸುತ್ತಿದ್ದಾರೆ. 

      ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಕಿಟಕಿ ಮೂಲಕ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಶ್ರೀಗಳ ದರ್ಶನ ಮಾಡಿದ ಭಕ್ತರು, “ಶ್ರೀಗಳು ಚೆನ್ನಾಗಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಹಬ್ಬುತ್ತಿದ್ದಾರೆ”, ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ದರ್ಶನಕ್ಕೆ ತೊಂದರೆ ಇಲ್ಲ: 
ಸಿದ್ಧಗಂಗಾ ಶ್ರೀಗಳ ಸಾರ್ವಜನಿಕ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. 

      ಆದರೂ ನಡೆದಾಡುವ ದೇವರು ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. 

(Visited 175 times, 1 visits today)

Related posts