ಉತ್ತಮ ಆರೋಗ್ಯಕ್ಕೆ ಆಯುಷ್ ಚಿಕಿತ್ಸೆ ಅಗತ್ಯ

 ತುಮಕೂರು:

      ಉತ್ತಮ ಆರೋಗ್ಯಕ್ಕೆ ಆಯುಷ್ ಚಿಕಿತ್ಸೆ ಅಗತ್ಯ ಎಂದು ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಸಂಜೀವ್‍ಮೂರ್ತಿ ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಅರುಣ ಎಜುಕೇಷನ್ ಟ್ರಸ್ಟ್‍ಗಳ ಸಹಯೋಗದಲ್ಲಿಂದು ನಗರದ ಅಶ್ವಿನಿ ಆಯುರ್ವೇದ ಆಸ್ಪತ್ರೆಯಲ್ಲಿ ಎಸ್.ಸಿ.ಪಿ ಫಲಾನುಭವಿಗಳಿಗಾಗಿ ಏರ್ಪಡಿಸಲಾಗಿದ್ದ “ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆಯುಷ್ ಚಿಕಿತ್ಸೆಯಿಂದ ಇಂತಹ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಸರ್ಕಾರದ ಐ.ಇ.ಸಿ ಕಾರ್ಯಕ್ರಮದಡಿ ಎಸ್.ಸಿ.ಪಿ/ಟಿಎಸ್.ಪಿ ಫಲಾನುಭವಿಗಳಿಗಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಕಾರ್ಯಾಗಾರದಲ್ಲಿ ಅರುಣ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕ ರಾಘವೇಂದ್ರ, ಕಾರ್ಯದರ್ಶಿ ಸುಜಾತ, ಅಶ್ವಿನಿ ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಹರೀಶ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 10 times, 1 visits today)

Related posts