ತುಮಕೂರು : ಅಂತರ ರಾಜ್ಯ ಲಾರಿ ಕಳ್ಳರ ಬಂಧನ

ತುಮಕೂರು : 

     ರಾತ್ರಿ ವೇಳೆಯಲ್ಲಿ ಸಿರಾ ಟೌನ್, ಸಂತೇಪೇಟೆ ಸರ್ಕಾರಿ ಸ್ಕೂಲ್ ಮುಂಭಾಗ ಸಿರಾ- ತುಮಕೂರು ಎನ್.ಹೆಚ್-4 ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 11 ಲಕ್ಷ ರೂ ಮೌಲ್ಯದ KA-64 -3627 ನಂಬರಿನ 12 ಚಕ್ರದ ಅಶೋಕ್ ಲೈಲ್ಯಾಂಡ್ ಲಾರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪ್ರಕರಣ ದಾಖಲಿಸಿಲಾಗಿತ್ತು.

      ಕಳವಾದ ಲಾರಿ ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಶಿರಾ ಎಲ್ ಡಿ.ಎಸ್.ಪಿ. ಕುಮಾರಪ್ಪ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿಗಳಾದ ಎಸ್. ಮಣಿಕಂಠನ್ @ ರಮೇಶ್ ಕುಮಾರ್, ಮನೋಜ್ ತಿರಕಿ @ ಮೈಕಲ್ ಬಿನ್ ಒಮದ ತಿರಕಿ ರವರುಗಳು ಲಾರಿಯನ್ನು ಕಳ್ಳತನ ಮಾಡಿ ತಮಿಳುನಾಡಿನ ಸೇಲಂಗೆ ತಗೆದುಕೊಂಡು ಹೋಗಿ ಪಳನಿಸ್ವಾಮಿ ಮತ್ತು ಸೆಂಥಿಲ್ ನಾಥನ್ ವಕೀಲರು ರವರುಗಳಿಗೆ ಮಾರಾಟ ಮಾಡಿದ್ದು, ಪಳನಿ ಸ್ವಾಮಿ ಮತ್ತು ಸಂಥಿಲ್ ನಾಥನ್ ರವರು ಪ್ರಸಾದ್ ಬಿನ್ ಕನ್ನನ್, ಮತ್ತು ಬಾಷಾ @ ಬಾಯಿ ಬಿನ್ ಸಲೀಂ ಖಾನ್, ರವರುಗಳಿಗೆ ಮತ್ತೊಮ್ಮೆ ವಾಹನವನ್ನು ಮಾರಾಟ ಮಾಡಿದ್ದು, ಸದರಿ ಪ್ರಸಾದ್ ಮತ್ತು ಬಾಷಾ ಬಾಯಿ ರವರುಗಳು ಸದರಿ ಲಾರಿಯ ಇಂಜಿನ್ ನಂಬರ್, ಚಾಸಿಸ್ ನಂಬರ್ ಮತ್ತು ಆರ್.ಸಿ ನಂಬರ್ ಗಳನ್ನು ಬದಲಿಸಿ ಬೇರೆ ವಾಹನದ ಆರ್.ಸಿ ನಂಬರ್, ಇಂಜಿನ್
ನಂಬರ್ ಮತ್ತು ಚಾಸಿಸ್ ನಂಬರ್ ಗಳನ್ನು ಬದಲಿಸಿ ಲಾರಿಯನ್ನು ಮೇಲ್ನೋಟಕ್ಕೆ ಮೂಲ ವಾಹನದ ಸ್ವರೂಪ
ಗೊತ್ತಾಗದಂತೆ ಬದಲಾವಣೆಗಳನ್ನು ಮಾಡಿ ಕಳ್ಳತನ ಮಾಡಿದ ಲಾರಿಗೆ TN-04-AX-0325 ನೇ ನಂಬರ್ ನೀಡಿ
ತಮಿಳುನಾಡಿನ ಕುಮಾರ್ ಆರ್ ಬಿನ್ ಲೇಟ್, ರಾಜೇಂದ್ರನ್’ ರಿಗೆ  12.60 ಲಕ್ಷ ರೂಗಳಿಗೆ ಮಾರಾಟ ಮಾಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿರುತ್ತದೆ.

     ಸದರಿ ಲಾರಿಯನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ.

      ಕಳವಾದ ಲಾರಿ ಮತ್ತು ಆರೋಪಿಯನ್ನು ಪತ್ತೆ ಮಾಡಲು ಶ್ರಮಿಸಿದ ಪೊಲೀಸರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ.ಕೆ. ವಂಸಿಕೃಷ್ಣ ಐ.ಪಿ.ಎಸ್.ರವರು ಅಭಿನಂದಿಸಿದ್ದಾರೆ.

(Visited 6 times, 1 visits today)

Related posts

Leave a Comment