5ನೇ ವಾರ್ಡಿನ ಅಭಿವೃದ್ಧಿಗೆ ಅನುದಾನ: ಸಂಸದ ಮುದ್ದಹನುಮೇಗೌಡ

ತುಮಕೂರು:

     ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಅಂತಹ ಜನಪ್ರತಿನಿಧಿಗಳಲ್ಲಿ 5ನೇ ವಾರ್ಡ್‍ನ ಕಾಪೋರೇಟರ್ ಎನ್.ಮಹೇಶ್ ಸಹ ಒಬ್ಬರಾಗಿದ್ದು, ತಮ್ಮ ವಾರ್ಡ್‍ನ ಜನರಿಗಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಸಂಸದ ಮುದ್ದ ಹನುಮೇಗೌಡ ತಿಳಿಸಿದ್ದಾರೆ.

      ನಗರದ 5ನೇ ವಾರ್ಡ್‍ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಂಸದ ಮುದ್ದ ಹನುಮೇಗೌಡ ಮಾತನಾಡಿದ ಅವರು, ಜನರಿಗೆ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರ ಬಳಕೆ ಮುಕ್ತಮಾಡಬೇಕಿದ್ದು, ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು.

      ಮುಂಜಾನೆ ಗೆಳೆಯರ ಬಳಗದ ಗೌರವಾಧ್ಯಕ್ಷ ಕರಾಟೆ ಕೃಷ್ಣಮೂರ್ತಿ ಅವರು, ಅಮಾನಿಕೆರೆಗೆ ಶೀಘ್ರವಾಗಿ ಹೇಮಾವತಿ ನೀರನ್ನು ಹರಿಸುವ ಮೂಲಕ ಸುತ್ತಮುತ್ತಲಿನ ಕೊಳವೆಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಹಾಗೂ ರಸ್ತೆ ಅಭಿವೃದ್ಧಿ, ಈಜುಕೊಳ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಅಮಾನಿಕೆರೆಯಲ್ಲಿ ಮಾಡುವ ಮೂಲಕ ಹೆಚ್ಚಿನ ಜನಾಕರ್ಷಣೆಯ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕೆಂದು ಸಂಸದರಿಗೆ ಮನವಿ ಮಾಡಿದರು.

      ತುಮಕೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ತು.ಬಿ.ಮಲ್ಲೇಶ್ ಮಾತನಾಡಿ ಸಂಸದರ ಅಧಿಕಾರವಧಿಯಲ್ಲಿಯೇ ತುಮಕೂರು ನಗರ ಸ್ಮಾರ್ಟ್‍ಸಿಟಿಯಾಗಿ ರೂಪುಗೊಳ್ಳುತ್ತಿದ್ದು, ನಗರದ ಹಳೆ ಭಾಗವಾಗಿರುವ ಚಿಕ್ಕಪೇಟೆ, ಕೋಟೆ ಆಂಜನೇಯ ವೃತ್ತ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಅನುದಾನವನ್ನು ನೀಡಬೇಕೆಂದು ಸಂಸ ದರಲ್ಲಿ ಮನವಿ ಮಾಡಿದ ಅವರು, ಹಿಂದಿನ ಯಾವುದೇ ಸಂಸದರ ಅಧಿಕಾರವಧಿಯಲ್ಲಿ ಆಗದಂತಹ ಅಭಿವೃದ್ಧಿ ಕಾರ್ಯಗಳು ಮುದ್ದಹನುಮೇಗೌಡ ಅವರ ಅಧಿಕಾರವಧಿಯಲ್ಲಿ ನಡೆದಿದ್ದು, ತುಮಕೂರಿನ ಅಭಿವೃದ್ಧಿಯಲ್ಲಿ ಮುದ್ದಹನುಮೇಗೌಡರ ಪಾತ್ರ ದೊಡ್ಡದಿದ್ದು, ಮುಂದಿನ ದಿನಗಳಲ್ಲಿ ಜನರು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸುವುದರೊಂದಿಗೆ ಸದಾ ತಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ಹೇಳಿದರು.

      ಕೋರ್ಟ್ ಆವರಣದಲ್ಲಿದ್ದ ಓವರ್‍ಹೆಡ್ ಟ್ಯಾಂಕ್ ಅನ್ನು ನೆಲಸಮ ಮಾಡಿರುವುದರಿಂದ ಈಭಾಗದ ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕಾರ್ಪೋರೇಟರ್ ಆದ ಮಹೇಶ್ ಅವರು ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ತುರ್ತಾಗಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಸಮಿತಿ ಖಜಾಂಚಿ ಟಿ.ವಿ.ಪಾಶ್ರ್ವನಾಥ್, ಟಿ.ಎಲ್.ಸುರೇಶ್‍ಬಾಬು, ಶ್ರೀನಿವಾಸ್, ರಾಜೇಶ್, ಲಕ್ಷ್ಮೀಪತಿ, ಪುರೋತ್ತಮಾಚಾರ್, ಮುರುಳಿ, ಸೀಮೆಎಣ್ಣೆ ಬಾಬು, ಸಣ್ಣಿ ಮುಂತಾದವರು ಉಪಸ್ಥಿತರಿದ್ದರು.

(Visited 17 times, 1 visits today)

Related posts

Leave a Comment