ಬ್ಯಾಂಕ್ ರೈತರಿಂದ ಜಪ್ತಿ ಮಾಡಿದ್ದ ಟ್ರಾಕ್ಟರ್ ರೈತರಿಂದ ಮರು ಜಪ್ತಿ!!

ತುಮಕೂರು :

      ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ನೇತೃತ್ವದಲ್ಲಿ ಪ್ರಾಥಮಿಕ ಕೃಷಿ ಅಭಿವೃದ್ದಿ ಬ್ಯಾಂಕ್ ರೈತರಿಂದ ಜಪ್ತಿ ಮಾಡಿದ್ದ ಟ್ರಾಕ್ಟರ್‍ನನ್ನು ಮರು ಜಪ್ತಿ ಮಾಡುವ ಕಾರ್ಯ ನಡೆಯಿತು.

      ನಗರದ ಭದ್ರಮ್ಮ ಸರ್ಕಲ್‍ನಲ್ಲಿರುವ ಪಿಎಲ್‍ಡಿ ಬ್ಯಾಂಕಿನಿಂದ ಸಾಲ ಪಡೆದಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ರೈತ ರಂಗನಾಥ ಎಂಬುವವರಿಗೆ ಯಾವುದೇ ನೊಟೀಸ್ ನೀಡದೆ ಬ್ಯಾಂಕ್ ಅಧಿಕಾರಿಗಳು, ಕುಟುಂಬಕ್ಕೆ ಆಧಾರವಾಗಿದ್ದ ಟ್ರಾಕ್ಟರ್ ಜಪ್ತಿ ಮಾಡಿ ತಂದ ಬ್ಯಾಂಕ್ ಗೋಡೌನ್‍ನಲ್ಲಿ ಇರಿಸಿದ್ದರು.ಶುಕ್ರವಾರ ಮಧ್ಯಾಹ್ನ 1:30ರ ಸುಮಾರಿಗೆ ಸ್ಥಳಕ್ಕೆ ಆನಂದ ಪಟೇಲ್ ನೃತೃತ್ವದಲ್ಲಿ ಆಗಮಿಸಿದ ರೈತರು ಗೋಡೌನ್‍ಗೆ ಹಾಕಿದ್ದ ಬೀಗವನ್ನು ಹೊಡೆದು ರೈತರಿಂದ ಜಪ್ತಿ ಮಾಡಿದ್ದ ಸುಮಾರು ಐದು ಟ್ರಾಕ್ಟರ್‍ಗಳನ್ನು ಮರು ಜಪ್ತಿ ಮಾಡಿ ತೆಗೆದುಕೊಂಡು ಹೋದರು.

      ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್,ಸತತ ಬರಗಾಲದಿಂದ ರೈತರು ಕಂಗಾಗಲಾಗಿದ್ದಾರೆ. ರಾಜ್ಯ ಸರಕಾರವೇ ಬಲವಂತದ ವಸೂಲಿಯನ್ನು ಕೈಬಿಟ್ಟು,ರೈತರ ಮನವೊಲಿಸಿ ಸಾಲ ವಸೂಲಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಪಿಎಲ್‍ಡಿ ಬ್ಯಾಂಕಿನವರು ರೈತರ ಮನೆ ಬಾಗಿಲಿಗೆ ಹೋಗಿ ಯಾವುದೇ ನೊಟೀಷ್ ನೀಡದೆ ಟ್ರಾಕ್ಟರಗಳನ್ನು ಜಪ್ತಿ ಮಾಡುತ್ತಿದ್ದಾರೆ.ಇದು ತರವಲ್ಲ.ತಿಳುವಳಿಕೆ ಪತ್ರ ನೀಡದೆ,ಬ್ಯಾಂಕಿನ ಸಾಲ ಎಷ್ಟಿದೆ ಎಂದು ತಿಳಿಸದೆ ಜಪ್ತಿ ಮಾಡುತ್ತಿರುವುದು ಕಾನೂನು ಬಾಹಿರ.ಹಾಗಾಗಿ ಬ್ಯಾಂಕು ಅಧಿಕಾರಿಗಳು ಕದ್ದು ತಂದ ಟ್ರಾಕ್ಟರ್ ಗಳನ್ನು ಮರು ಜಪ್ತಿ ಮಾಡಿ,ಅವುಗಳ ಮಾಲೀಕರಿಗೆ ಒಪ್ಪಿಸಲಾಗಿದೆ.ಇದಲ್ಲದೆ ರೈತರಿಗೆ ಖಾಲಿ ಚೆಕ್‍ಗಳಿಗೆ ಸಹ ಮಾಡಿ ನೀಡುವಂತೆ ಬೆದರಿಕೆಯನ್ನು ಬ್ಯಾಂಕ್ ಅಧಿಕಾರಿಗಳು ಮಾಡುತ್ತಿದ್ದು,ಕೂಡಲೇ ಕೈ ಬಿದಿದ್ದರೆ,ರೈತರ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

      ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ,ರೈತರು ತಮ್ಮ ಭೂಮಿಯನ್ನು ಅಡವಿಟ್ಟು ಕೃಷಿ ಸಾಲ ಪಡೆದಿದ್ದಾರೆ.ಕೃಷಿಗೆ ಪೂರಕವಾಗಿರುವ ಟ್ರಾಕ್ಟರ್,ಟಿಲ್ಲರ್ ಸೇರಿದಂತೆ 14 ವಸ್ತುಗಳನ್ನು ಬ್ಯಾಂಕುಗಳ ಜಪ್ತಿ ಮಾಡುವಂತಿಲ್ಲ ಎಂದು ಸರಕಾರದ ನಿರ್ದೇಶನವಿದ್ದರೂ ಅಧಿಕಾರಿಗಳು ಕಾನೂನು ಗಾಳಿ ತೂರಿ, ರೈತರಿಂದ ಬಲವಂತವಾಗಿ ಟ್ರಾಕ್ಟರ್ ಜಪ್ತಿ ಮಾಡುತಿದ್ದಾರೆ.
ಇಂದಿನ ಮರು ಜಪ್ತಿ ಸಾಂಕೇತಿಕ. ಬ್ಯಾಂಕು ಅಧಿಕಾರಿಗಳ ಧೋರಣೆ ಹೀಗೆಯೇ ಮುಂದುವರೆದರೆ ಇಡೀ ರಾಜ್ಯದಾಧ್ಯಂತ ಈ ಹೋರಾಟ ನಡೆಯಲಿದೆ ಎಂದರು.

       ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಧನಂಜಯ್ ಆರಾಧ್ಯ,ತಿಮ್ಮನಹಳ್ಳಿ ಲೋಕಣ್ಣ,ತಮ್ಮಡಿಹಳ್ಳಿ ಮಲ್ಲಿಕಾರ್ಜುನ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

(Visited 13 times, 1 visits today)

Related posts

Leave a Comment