ಕಾರಿನ ಗಾಜು ಒಡೆದು ಕ್ಯಾಮೆರಾ, ನಗದು ಕಳವು

ತುಮಕೂರು:

      ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದ ಕಳ್ಳರು ಕಾರಿನಲ್ಲಿದ್ದ ಕ್ಯಾಮೆರಾ, ಹಾರ್ಡ್ ಡಿಸ್ಕ್ ಹಾಗೂ 49 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಎಂ.ಜಿ. ರಸ್ತೆಯಲ್ಲಿ ನಡೆದಿದೆ.

      ತಾಲ್ಲೂಕಿನ ಕೋರಾ ಹೋಬಳಿಯ ಕೋಡಿಹಳ್ಳಿ ವಾಸಿ ರಾಜಣ್ಣ ಎಂಬುವರು ತುಮಕೂರಿನ ಎಂ.ಜಿ. ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕ್‍ಗೆ ಹಣ ಕಟ್ಟಲು ಹೋದಾಗ ಕಾರಿನ ಹಿಂದಿನ ಬಾಗಿಲ ಗಾಜು ಹೊಡೆದಿರುವ ಕಳ್ಳರು ಕಾರಿನಲ್ಲಿದ್ದ ಕ್ಯಾಮೆರಾ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ರಾಜಣ್ಣ  ಪೊಲೀಸ್ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

      ಈ ಸಂಬಂಧ ತುಮಕೂರು ನಗರ ಠಾಣೆ  ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

(Visited 8 times, 1 visits today)

Related posts

Leave a Comment