ಗುಡ್ಡದಯ್ಯನಪಾಳ್ಯ ಗ್ರಾಮದ ರೈತನ 10,000 ಕೊಬ್ಬರಿ ಬೆಂಕಿಗಾಹುತಿ

ತುರುವೇಕೆರೆ:

      ತಾಲೂಕಿನ ಗುಡ್ಡದಯ್ಯನಪಾಳ್ಯ ಗ್ರಾಮದ ಶಿವಣ್ಣನವರಿಗೆ ಸೇರಿದ 10,000 (ಹತ್ತು ಸಾವಿರ ) ಕೊಬ್ಬರಿ ಬೆಂಕಿಗಾಹುತಿಯಾಗಿವೆ.

      ಹಡವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಯ್ಯನಪಾಳ್ಯ ಗ್ರಾಮದ ಶಿವಣ್ಣನವರ ತೋಟದಲ್ಲಿ ಶೆಡ್ ನಿರ್ಮಿಸಿ ಕೂಡಿಟ್ಟದ 10ಸಾವಿರ ಕೊಬ್ಬರಿ ಬೆಂಕಿಗಾಹುತಿಯಾಗಿದ್ದು, ರಾತ್ರಿ ಇದ್ದಕ್ಕಿದ್ದಂತೆ ಹತ್ತಿಕೊಂಡ ಬೆಂಕಿಗೆ ಕೊಬ್ಬರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಂದಿನಂತೆ ಮುಂಜಾನೆ ತೋಟಕ್ಕೆ ಭೇಟಿ ನೀಡಿದ ರೈತ ಶಿವಣ್ಣ ಕೊಬ್ಬರಿ ಸುಟ್ಟು ಕರಕಲಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ.

      ಸ್ಥಳಕ್ಕೆ ಸ್ಥಳೀಯ ಮುಖಂಡ ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಂ.ಯೋಗೀಶ್ ಸ್ಥಳಕ್ಕೆ ಭೇಟಿ ನೀಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಸರ್ಕಾರ ಕೂಡಲೇ ರೈತನ ಕಷ್ಟಕ್ಕೆ ಧಾವಿಸಬೇಕು ವರ್ಷಗಳಿಂದ ಕೂಡಿಟ್ಟಿದ್ದ ಕೊಬ್ಬರಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು ರೈತನ ಜೀವನ ಬೀದಿಗೆ ಬಂದಿದೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

(Visited 4 times, 1 visits today)

Related posts

Leave a Comment