ಮಧುಗಿರಿ :  35 ಲಕ್ಷ ಬೆಲೆ ಬಾಳುವ ತೋಟ ಸುಟ್ಟು ಭಸ್ಮ

ಮಧುಗಿರಿ :        ತಾಲೂಕಿನ ಪುರವರ ಹೋಬಳಿಯ ಹಂದ್ರಾಳು ಗ್ರಾಮದ ನಿವೃತ್ತ ಕೆ.ಎ.ಎಸ್. ಅಧಿಕಾರಿ ಹಾಗೂ ಖ್ಯಾತ ಕಥೆಗಾರ ಹಂದ್ರಾಳು ಕೇಶವರೆಡ್ಡಿ ಅವರ ತೋಟಕ್ಕೆ ಬುಧವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಸುಮಾರು 35 ಲಕ್ಷ ಬೆಲೆ ಬಾಳುವ ತೋಟ ಸುಟ್ಟು ಭಸ್ಮವಾಗಿದೆ.       ಒಟ್ಟು 26 ಎಕರೆಯಲ್ಲಿ 15ಎಕರೆ ಮಾವು, 5 ಎಕರೆ ಸಪೋಟ, ಉಳಿದ 6 ಎಕರೆಯಲ್ಲಿ ಮಹಾಗಣಿ, ಹೆಬ್ಬೇವು, ನೇರಳೆ, ಹಲಸು ಇತರೆ ಗಿಡಗಳನ್ನು ಬೆಳೆಸಿದ್ದೆ, ಆದರೆ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನನ್ನ 13 ವರ್ಷದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಈ ಗಿಡ-ಮರಗಳನ್ನು ಬೆಳೆಸಲು ನಾನು ಸುಮಾರು 25 ಲಕ್ಷ ಸಾಲ ಮಾಡಿದ್ದೆ, ಆದರೆ ಈಗ ತೋಟ ಕೆಲ ಗಿಡಗಳು ಹೊರತುಪಡಿಸಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಸುಮಾರು 35 ಲಕ್ಷ ನಷ್ಟವಾಗಿರುವುದಕ್ಕೆ ನನ್ನ ಕೈಕಾಲುಗಳು…

ಮುಂದೆ ಓದಿ...

ಹುಳಿಯಾರು : ಮತ್ತೊಂದು ರಾಗಿ ಖರೀದಿ ಕೌಂಟರ್ ತೆರೆಯುವ ಭರವಸೆ

 ಹುಳಿಯಾರು :       ಹುಳಿಯಾರಿನ ಎಪಿಎಂಸಿಯಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಚಿಕ್ಕನಾಯಕಹಳ್ಳಿ ತಹಸೀಲ್ದಾರ್ ಬಿ.ತೇಜಸ್ವಿನಿ ಅವರು ಬುಧವಾರ ಸಂಜೆ ದಿಡೀರ್ ಭೇಟಿ ನೀಡಿ ಖರೀದಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದರು.       ಈ ಸಂದರ್ಭದಲ್ಲಿ ರಾಗಿ ಬೆಳೆಗಾರರು ಭಾನುವಾರವೂ ಸಹ ಖರೀದಿ ಮಾಡುವಂತೆಯೂ, ಇರುವ ಕೌಂಟರ್ ಜೊತೆಗೆ ಮತ್ತೊಂದು ಕೌಂಟರ್ ತೆರೆಯುವಂತೆಯೂ ತಹಸೀಲ್ದಾರ್ ಬಳಿ ಮನವಿ ಮಾಡಿದರು. ಶಿರಾದಲ್ಲಿನ ವೇರ್‍ಹೌಸ್ ಲಭ್ಯತೆ ಮಾಹಿತಿ ಪಡೆದು ಹಾಗೂ ಹಮಾಲಿಗಳ ಸಹಕಾರ ಕೇಳಿ ಭಾನುವಾರವೂ ಖರೀದಿ ಜೊತೆಗೆ ನಿತ್ಯವೂ ಮತ್ತೊಂದು ಕೌಂಟರ್ ತೆರೆಯುವ ಭರವಸೆ ನೀಡಿದರು. ಹುಳಿಯಾರು ಖರೀದಿ ಕೇಂದ್ರದಲ್ಲಿ 4150 ರೈತರು ನೊಂದಣಿ ಮಾಡಿಸಿದ್ದು ಇದುವರೆವಿಗೂ 2300 ರೈತರಿಂದ 57 ಸಾವಿರ ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಸರ್ವರ್ ಸಮಸ್ಯೆ ಇದ್ದಾಗ ಮಾತ್ರ ಸ್ವಲ್ಪ ಖರೀದಿ ಪ್ರಕ್ರಿಯೆ ಸ್ಲೋ…

ಮುಂದೆ ಓದಿ...

ಕೋವಿಡ್ ಲಸಿಕೆ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ : ಸಚಿವ ಜೆ.ಸಿ.ಎಂ

ಚಿಕ್ಕನಾಯಕನಹಳ್ಳಿ:       ಎರಡು ಹಂತದ ಲಸಿಕಾ ಅಭಿಯಾನದಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಪ್ರಥಮಸ್ಥಾನದಲ್ಲಿದ್ದು ಮೂರನೇ ಲಸಿಕೆ ಹಂತದಲ್ಲಿಯುಸಹ ನಮಗೆ ನೀಡಿದ ಗುರಿಯನ್ನು ಸಾಧಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ತಾವೇ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಕೇಂದ್ರ ಸರ್ಕಾರದ ತೀರ್ಮಾನದಂತೆ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 60ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ, ಅದರಲ್ಲೂ ಬಿಪಿ. ಮದುಮೇಹ, ಹೃದಯಸಂಬಂಧಿ ಇನ್ನಿತರ ಖಾಯಿಲೆಯಿಂದ ಬಳಲುತ್ತಿರುವವರೂಸಹ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ, ಅಪಪ್ರಚಾರಕ್ಕೆ ಕಿವಿಕೊಡದೆ 60ವರ್ಷ ಮೇಲ್ಪಟ್ಟವರು ನೊಂದಣಿ ಮಾಡಿಸಿ ಲಸಿಕೆ ಪಡೆಯಿರಿ ಎಂದರು. ಖಾಸಗಿಯಾಗಿ ರೂ.250 ಶುಲ್ಕ ನಿಗಧಿಯಾಗಿದ್ದು ಅಲ್ಲಿಯೂಸಹ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.…

ಮುಂದೆ ಓದಿ...

ಶ್ರವಣ ದೋಷವನ್ನು ಮಗುವಿನಲ್ಲೇ ಪತ್ತೆಹಚ್ಚಿ : ಡಿಹೆಚ್‍ಓ ನಾಗೇಂದ್ರಪ್ಪ

ತುಮಕೂರು:      ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆಹಚ್ಚುವುದು ಮುಖ್ಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ ತಿಳಿಸಿದರು.       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಶ್ರವಣದೋಷ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ವಿಶ್ವ ಶ್ರವಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗು ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.       ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ಅಧಿಕಾರಿ ಡಾ: ಮಹಿಮಾ ಮಾತನಾಡಿ, ಸೋಹಂ, ಬೆರಾ ಎಂಬ ಶ್ರವಣ ದೋಷ ಪತ್ತೆ ಹಚ್ಚುವ ಸಾಧನದಿಂದ ಹುಟ್ಟಿದ ಮಗುವಿನಲ್ಲಿರುವ ಶ್ರವಣ ದೋಷವನ್ನು ಪತ್ತೆ ಹಚ್ಚಬಹುದಾಗಿದೆ. ಅದೇ ರೀತಿ…

ಮುಂದೆ ಓದಿ...

ರೈತರು ಸಮಗ್ರ ಕೃಷಿಯನ್ನ ಅಳವಡಿಸಿಕೊಳ್ಳಿ : ಕೃಷಿ ಸಚಿವ ಬಿ.ಸಿ. ಪಾಟೀಲ್

ತುಮಕೂರು :        ಕೃಷಿಕರು ಸಾವಯವ ಪದ್ಧತಿಯನ್ನ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಹಿಂದೆ ಸಿರಿಧಾನ್ಯಗಳು ಬಡವರ ಧಾನ್ಯಗಳಾಗಿದ್ದವು. ಆದರೆ ಇಂದು ಖಾಯಿಲೆಗಳ ಅಬ್ಬರದಿಂದ ಬಡವರ ಧಾನ್ಯಗಳು ಸಿರಿಧಾನ್ಯಗಳಾಗಿ ಮಾರ್ಪಟ್ಟಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು.       ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಕೃಷಿ ಭವನ ಕಟ್ಟಡದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ನಂತರ ಕೃಷಿ ಸುಧಾರಿಸಿದೆ. ಕೃಷಿ ಉಳಿದರೆ ರೈತರು ಉಳಿಯುತ್ತಾರೆ. ದೇಶ ಉಳಿಯುತ್ತದೆ. ಇಲ್ಲವಾದರೆ ದೇಶವೇ ನಾಶವಾಗುತ್ತದೆ.  ಇಂತಹ ಮಹತ್ವವಿರುವ ಕೃಷಿ ಕಾಯಕವನ್ನು ನಾವು ಮರೆಯುತ್ತಿದೇವೆ. ಇದು ತುಂಬಾ ನೋವಿನ ಸಂಗತಿ. ರೈತರು ಕೊಡುಗೈ ದಾನಿಗಳು. ದೇಶಕ್ಕೆ…

ಮುಂದೆ ಓದಿ...