ಹುಳಿಯಾರು :  ರಾಗಿ ಖರೀದಿ ಅವಧಿ ವಿಸ್ತರಣೆ

ಹುಳಿಯಾರು :        2020-2021 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಅವಧಿಯನ್ನು ಏ.30 ರ ವರೆವಿಗೆ ವಿಸ್ತರಿಸಲಾಗಿದೆ ಎಂದು ಖರೀದಿ ಅಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.       ಈ ಹಿಂದೆ ನೊಂದಣಿ ಅವಧಿಯಲ್ಲಿ 4501 ರೈತರು ನೊಂದಾಯಿಸಿದ್ದರು. ಮಾರ್ಚ್ 31 ರ ವರೆವಿಗೆ 4230 ರೈತರಿಂದ 98,029 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು. ನೊಂದಾಯಿಸಿದ್ದವರ ಪೈಕಿ ಇನ್ನೂ 271 ರೈತರಿಂದ ರಾಗಿ ಖರೀದಿ ಬಾಕಿ ಉಳಿದಿದೆ. ಇಂತಹ ರೈತರಿಗೆ ಖರೀದಿ ಅವಧಿ ವಿಸ್ತರಿಸಿರುವುದು ಸುವರ್ಣಾವಕಾಶವಾಗಿದೆ ಎಂದರು.       ಫೆ.23 ರ ವರೆವಿಗೆ ರೈತರಿಂದ ಖರೀದಿ ಮಾಡಿರುವ ರಾಗಿಯ ಬಾಬ್ತು ಹಣವನ್ನು ರೈತರ ಖಾತೆಗೆ ಈಗಾಗಲೇ ಜಮೆ ಮಾಡಲಾಗಿದೆ. ಇದರಲ್ಲಿ ಐವತಕ್ಕೂ ಹೆಚ್ಚು ಮಂದಿಯ ಬ್ಯಾಂಕ್‍ನಲ್ಲಿ ಆಧಾರ್ ಲಿಂಕ್ ಆಗದ ಹಾಗೂ ಹೆಸರು ಮಿಸ್ ಮ್ಯಾಚ್…

ಮುಂದೆ ಓದಿ...

ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೈಲಾನಾಗರಾಜ್ ನಾಮಪತ್ರ

ತುಮಕೂರು :        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಡಾ. ಬಿ.ಸಿ.ಶೈಲಾನಾಗರಾಜ್‍ರವರು ತಮ್ಮ ಅಪಾರ ಸ್ನೇಹಿತರ ಬಳಗದೊಂದಿಗೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಮಾದ್ಯಮದೊಂದಿಗೆ ಮಾತನಾಡಿದರು.       ತಾವು ನಾಡು, ನುಡಿ ಸೇವೆ ಮಾಡಲು ಈ ಚುನಾವಣೆಗೆ ಸ್ಪರ್ಧಿಸಿದ್ದು, ತಾವು ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗಮ್ಯ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರಲ್ಲದೇ, ಇದುವರೆವಿಗೂ 4 ಕವನ ಸಂಕಲನಗಳು, 5 ಮಹಿಳಾ ಅಧ್ಯಯನ ಪುಸ್ತಕಗಳು, 6 ವಿಚಾರ ಕೃತಿಗಳು, 5 ವ್ಯಕ್ತಿ ಚಿತ್ರಗಳನ್ನು ಹೊರತಂದಿದ್ದು, ತಾವು ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಗೆ ವಿವಿಧ 9 ಪ್ರಶಸ್ತಿಗಳು ತಮಗೆ ಲಭಿಸಿರುವುದಾಗಿ ತಿಳಿಸಿದರು. ಅಲ್ಲದೇ ತುಮಕೂರು ತಾಲ್ಲೂಕು & ಹೋಬಳಿ ಮಟ್ಟಡದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದ್ದು, ವಿವಿಧ ಮತ್ತು ವಿಶಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸಿರುವ ಅನುಭವವನ್ನು ಹೊಂದಿರುವುದಾಗಿ ತಿಳಿಸಿದರು.    …

ಮುಂದೆ ಓದಿ...

ಶಿರಾ :  ಭಗ್ನ ಪ್ರೇಮಿಯಿಂದ ಯುವತಿಯ ಹತ್ಯೆ

ಶಿರಾ:        ಮದುವೆಗೆ ಒಪ್ಪಲಿಲ್ಲವೆಂಬ ಕಾರಣಕ್ಕಾಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿರಾ ತಾಲ್ಲೂಕಿನ ದೊಡ್ಡಗುಲಾ ಸಮೀಪದ ರತ್ನಸಂದ್ರ ಗೊಲ್ಲರಹಟ್ಟಿಯ ನಿವಾಸಿ 17 ವರ್ಷದ ಕಾವ್ಯ ಎಂಬಾಕೆಯನ್ನು ಅದೇ ಗ್ರಾಮದ ಯುವಕ ಈರಣ್ಣ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.        ಕಾವ್ಯಳನ್ನು ಪ್ರೀತಿಸುವಂತೆ ಪ್ರತಿನಿತ್ಯ ಬೆಂಬಿಡದೇ ಕಾಡುತ್ತಿದ್ದು ಆಕೆಯನ್ನು ಹಿಂಬಾಲಿಸುತ್ತಿದ್ದು ತನ್ನನ್ನೇ ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ ಈರಣ್ಣ ಯುವತಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಿಂದೆ ಬಿದ್ದು ತನ್ನನ್ನೇ ಪ್ರೀತಿಸು, ನಾನು ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಲಾರೆ, ನಿನ್ನನ್ನು ಮನಸಾರೆ ಇಷ್ಟ ಪಟ್ಟಿದ್ದೇನೆ, ಮದುವೆಯಾದರೆ ನಿನ್ನನ್ನು ಮಾತ್ರ ಎಂದು ಸಾಕಷ್ಟು ಬಾರಿ ಯುವತಿ ಎದುರು ಗೋಗರೆದಿದ್ದ ಎನ್ನಲಾಗಿದೆ.       ಆದರೆ ಯುವತಿ ಈರಣ್ಣ ನ ಪ್ರೀತಿಯನ್ನು ಒಪ್ಪಿಕೊಳ್ಳಲಾರದೆ ತಿರಸ್ಕರಿಸಲಾರದೇ ತನ್ನ ಸ್ನೇಹಿತರು ಮತ್ತು ಪೋಷಕರಿಗೆ ಈರಣ್ಣನ ಬೇಡಿಕೆಗಳ ವಿಚಾರ ಹೇಳಿಕೊಂಡಿದ್ದಳು…

ಮುಂದೆ ಓದಿ...

ಹುಳಿಯಾರು:  ಜೆಸಿಎಂ ತೆಕ್ಕೆಗೆ ಮತ್ತೊಬ್ಬ ಪಕ್ಷೇತರ ಸದಸ್ಯ

ಹುಳಿಯಾರು:        ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಗದೆ ಅತಂತ್ರವಾಗಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿಯ ಗಾದಿ ಇಬ್ಬರೂ ಪಕ್ಷೇತರರು ಬಿಜೆಪಿಗೆ ಸೇರುವ ಮೂಲಕ ಬಿಜೆಪಿಗೆ ಮತ್ತೊಷ್ಟು ಸನ್ನಿಹಿತವಾಗಿದೆ.       ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 5, ಜೆಡಿಎಸ್ 3 ಹಾಗೂ ಪಕ್ಷೇತರರು ಇಬ್ಬರು ಗೆದ್ದಿದ್ದರು. ಪಂಚಾಯ್ತಿ ಗಾದಿ ಹಿಡಿಯಲು 9 ಸದಸ್ಯರ ಸಂಖ್ಯಾಬಲ ಅತ್ಯಗತ್ಯ. ಹಾಗಾಗಿ ಪಕ್ಷೇತರರನ್ನು ಸೆಳೆದು ಅಧಿಕಾರ ಹಿಡಿಯಲು ಮೂರು ಪಕ್ಷಗಳೂ ತೆರೆಮರೆಯ ಕಸರತ್ತು ನಡೆಸುತ್ತಿದ್ದವು.       ಆದರೆ ಇತ್ತೀಚೆಗಷ್ಟೆ ಪಕ್ಷೇತರ ಸದಸ್ಯೆ ಶೃತಿಸನತ್ ಅವರು ಜೆಸಿಎಂ ಸಮ್ಮುಖದಲ್ಲಿ ಬಿಜೆಪಿ ಸೇರಿ ಬಿಜೆಪಿ ಗದ್ದುಗೆ ಹಿಡಿಯುವ ದಾರಿ ತರೆದರು. ಈಗ ಮತ್ತೊಬ್ಬ ಪಕ್ಷೇತರ ಸದಸ್ಯ ಸೈಯದ್ ಜಹೀರ್ ಸಾಬ್ ಅವರು ಬಿಜೆಪಿ ಸೇರಿ ಅಧಿಕಾರಿ ಹಿಡಿಯುವ ದಾರಿ ಸುಗಮವಾಗಿಸಿದರು.      …

ಮುಂದೆ ಓದಿ...