ಹುಳಿಯಾರು: ಒಟ್ಟಿಗೆ ಪಂಚಾಯ್ತಿ ಪ್ರವೇಶಿಸಿದ ಪತಿ-ಪತ್ನಿ!

ಹುಳಿಯಾರು:      ಪಟ್ಟಣ ಪಂಚಾಯ್ತಿಯ ಮೊದಲ ಚುನಾವಣೆಯಲ್ಲಿ ಗಂಡಹೆಂಡತಿ ಇಬ್ಬರೂ ಗೆದ್ದು ಒಟ್ಟಿಗೆ ಸದಸ್ಯರಾಗಿ ಪಂಚಾಯ್ತಿ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.      2 ನೇ ವಾರ್ಡ್‍ನಿಂದ ಕಿರಣ್ ಕುಮಾರ್ ಅವರು ಗೆದ್ದರೆ 13 ನೇ ವಾರ್ಡ್‍ನಿಂದ ಸಂಧ್ಯ ಅವರು ಗೆಲ್ಲುವ ಮೂಲಕ ಈ ಇತಿಹಾಸ ನಿರ್ಮಿಸಿದ್ದಾರೆ. ಜೆಡಿಎಸ್‍ನಿಂದ 7 ನೇ ವಾರ್ಡ್‍ನಲ್ಲಿ ಎಚ್.ಎನ್.ಕುಮಾರ್ ಹಾಗೂ ನಾದಿನಿ ಪ್ರೀತಿ 16 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದರು. ಇವರಲ್ಲಿ ಪ್ರೀತಿ ಗೆದ್ದಿದ್ದಾರೆ. 3 ನೇ ವಾರ್ಡ್‍ನಿಂದ ಬಡ್ಡಿಪುಟ್ಟರಾಜು ಹಾಗೂ ಅವರ ಅತ್ತಿಗೆ ಸಿದ್ದಗಂಗಮ್ಮ 15 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದರು ಇವರಿಬ್ಬರೂ ಸೋತಿದ್ದಾರೆ.

ಮುಂದೆ ಓದಿ...

ಗ್ರಾಪಂ 15ನೇ ಹಣಕಾಸು ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ಬಳಸಿ : ಸಿಇಓ

ತುಮಕೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿಗಳು 15ನೇ ಹಣಕಾಸಿನ ಶೇ.25ರಷ್ಟು ಅನುದಾನವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಮಿಷನ್‍ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಅಂತಹ ಪಂಚಾಯತಿಗಳು 15ನೇ ಹಣಕಾಸು ಯೋಜನೆಯ ಶೇಕಡಾ 25%ರಷ್ಟು ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ವಿನಿಯೋಗಿಸಬೇಕೇಂದು ಇಓ ಮತ್ತು ಪಿಡಿಓಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.       ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಮೂರು ಜಿಲ್ಲೆಗಳ ಸಮನ್ವಯದಿಂದ ನೀರಿನ…

ಮುಂದೆ ಓದಿ...

ಹುಳಿಯಾರು ಪಂಚಾಯ್ತಿಗೆ 8 ಹೊಸಬರು, 8 ಹಳಬರ ಗೆಲುವು

ಹುಳಿಯಾರು:       ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 3 ವರ್ಷಗಳ ನಂತರ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡದೆ ಅತಂತ್ರ ಪಂಚಾಯ್ತಿಯ ತೀರ್ಪು ನೀಡಿದ್ದಾರೆ. ಗೆದ್ದಿರುವವರಲ್ಲಿ 8 ಮಂದಿ ಹೊಸಬರು ಹಾಗೂ 8 ಮಂದಿ ಹಳಬರು ಗೆಲುವು ಸಾಧಿಸಿದ್ದಾರೆ.       ಹುಳಿಯಾರು ಪಂಚಾಯ್ತಿ ಚುನಾವಣೆಯನ್ನು 3 ಪಕ್ಷಗಳ ಮುಖಂಡರ ಜೊತೆ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಬಿ ಫಾರಂ ಹಂಚಿಕೆಯಿಂದ ಆರಂಭವಾದ ಜಿದ್ದಾಜಿದ್ದಿ ಮತದಾನದ ಕೊನೆಯವರೆವಿಗೂ ನಡೆಯಿತು. ಆದರೆ ಮತದಾರರು 6 ಕಡೆ ಬಿಜೆಪಿ, 5 ಕಡೆ ಕಾಂಗ್ರೆಸ್, 3 ಕಡೆ ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರನ್ನು ಗೆಲ್ಲಿಸಿ ಅಧ್ಯಕ್ಷ ಗಾದಿಗೂ ಪೈಪೋಟಿ ಬಾಕಿ ಉಳಿಸಿದ್ದಾರೆ.       ಬಿಜೆಪಿ ಪಂಚಾಯ್ತಿ ಅಧಿಕಾರ ಹಿಡಿಯಲೆಂದು ಸಚಿವ ಜೆ.ಸಿ.ಮಾಧುಸ್ವಾಮಿ…

ಮುಂದೆ ಓದಿ...

ತುಮಕೂರು :  ಗುಬ್ಬಿಗೇಟ್, ಭದ್ರಮ್ಮ ವೃತ್ತಕ್ಕೆ ಮರುನಾಮಕರಣ ಮಾಡುವಂತೆ ಮನವಿ

ತುಮಕೂರು :        ನಗರದ ಗುಬ್ಬಿಗೇಟ್ ವೃತ್ತಕ್ಕೆ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಹಾಗೂ ಭದ್ರಮ್ಮ ವೃತ್ತಕ್ಕೆ ಡಾ. ಬಾಬು ಜಗಜೀವನರಾಂ ಹೆಸರಿಡುವಂತೆ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ ಹಾಗೂ ಆಯುಕ್ತೆ ರೇಣುಕಾರವರಿಗೆ ಮನವಿ ಸಲ್ಲಿಸಲಾಯಿತು.        ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತರು ಮತ್ತು ಮೇಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ದೇಶದಲ್ಲಿಯೇ ಮೊದಲ ದಲಿತ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲು ಕಾರಣರಾಗಿದ್ದಾರೆ. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ. ಇವರ ಹೆಸರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ…

ಮುಂದೆ ಓದಿ...

ವಿವಿಧತೆಯಲ್ಲಿ ಏಕತೆ ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ

ತುಮಕೂರು :        ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಸಿ ಹನುಮಂತಯ್ಯ ತಿಳಿಸಿದರು.       ನಗರದ ಶಿರಾಗೇಟ್ ರಸ್ತೆಯಲ್ಲಿರುವ ಕಾಳಿದಾಸ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ತುಮಕೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ದೈಹಿಕ ಶಿಕ್ಷಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮತ್ತು ಕೊರೋನಾ ಜಾಗೃತಿ ಮಾಹಿತಿ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶಪ್ರೇಮದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜ ಹಲವು ವಿಶೇಷತೆಗಳಿಂದ ಕೂಡಿದ್ದು, ಹಲವು ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನಾಯಕರು ಸೇರಿ ನಮ್ಮ ರಾಷ್ಟ್ರಧ್ವಜಕ್ಕೆ ಸುಂದರ ರೂಪ ನೀಡಿದ್ದಾರೆ ಎಂದರು.      …

ಮುಂದೆ ಓದಿ...

ತುಮಕೂರು : 5 ವರ್ಷಗಳಲ್ಲಿ ತುಮಕೂರು ವಿವಿ ಹೊಸ ಕ್ಯಾಂಪಸ್ ಸಂಪೂರ್ಣ

ತುಮಕೂರು :       ಮುಂಬರುವ ಶೈಕ್ಷಣಿಕ ವರ್ಷದಿಂದ ತುಮಕೂರು ವಿಶ್ವವಿದ್ಯಾ ನಿಲಯವು ಆಂಶಿಕವಾಗಿ ಬಿದರಕಟ್ಟೆ ಹೊಸ ಕ್ಯಾಂಪಸ್‍ಗೆ ಸ್ಥಳಾಂತ ರವಾಗಲಿದೆ ಎಂದು ಕುಲಪತಿ ಕರ್ನಲ್ (ಪ್ರೊ.) ವೈ. ಎಸ್ ಸಿದ್ದೇಗೌಡ ತಿಳಿಸಿದರು.      ಹೊಸ ಕ್ಯಾಂಪಸ್‍ಗೆ ಮಂಗಳವಾರ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸ್ನಾತಕೋತ್ತರ ಸಮಾಜಕಾರ್ಯ, ಜೀವ ರಸಾಯನಶಾಸ್ತ್ರ, ಸೂಕ್ಷ್ಮಾ ಣು ಜೀವಶಾಸ್ತ್ರ ಹಾಗೂ ಪರಿಸರ ವಿಜ್ಞಾನ ವಿಭಾಗಗಳು ಹೊಸ ಶೈಕ್ಷಣಿಕ ವರ್ಷದಿಂದ ಬಿದರಕಟ್ಟೆಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.        ಲಭ್ಯವಿರುವ ಅನುದಾನದಿಂದ 240 ಎಕರೆ ವಿಸ್ತೀರ್ಣದ ಹೊಸ ಕ್ಯಾಂಪಸ್‍ನ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ಯಾಂಪಸ್ ಪೂರ್ಣಗೊಳ್ಳಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕ್ಯಾಂಪಸ್ ಮೂಡಿಬರಲಿದೆ ಎಂದರು. ತಲಾ ರೂ. 36 ಕೋಟಿ ವೆಚ್ಚದ ಮೂರು…

ಮುಂದೆ ಓದಿ...

ಮನರಂಜನಾ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲು ಜೆಸಿಎಂ ಹಾಗೂ ಡಿಸಿಗೆ ಮನವಿ

ತುಮಕೂರು :         ಕೋವಿಡ್-19ನಿಂದ ರಂಗಭೂಮಿ ಸೇರಿದಂತೆ ಎಲ್ಲಾ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಆದೇಶಿಸಿದ್ದು, ಕೂಡಲೇ ಮನರಂಜನಾ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿ ಪುನಃ ರಂಗ ಚಟುವಟಿಕೆಗಳು ನಡೆಯಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ನಾಟಕ ಅಕಾಡೆಮಿ ಸದಸ್ಯರು, ರಂಗಭೂಮಿ ಕಲಾವಿದರು, ಆರ್ಕೆಸ್ಟ್ರಾ ಕಲಾವಿದರು ಸೇರಿದಂತೆ ವಿವಿಧ ಪ್ರಕಾರಗಳ ಕಲಾವಿದರು ಮಂಗಳವಾರ ಮನವಿ ಸಲ್ಲಿಸಿದರು.         ಈ ಸಂದರ್ಭದಲ್ಲಿ ಮಾತನಾಡಿದ ನಾಟಕ ಅಕಾಡೆಮಿ ಸದಸ್ಯರಾದ ಸದಾಶಿವಯ್ಯ, ಜಿಲ್ಲೆಯ ಪೌರಾಣಿಕ ರಂಗಭೂಮಿ ಕಲಾವಿ ದರು ಆರ್ಕೆಸ್ಟ್ರಾ ಹಾಗೂ ಸುಗಮ ಸಂಗೀತ ಕಲಾವಿದರು, ಸಾಮಾಜಿಕ ನಾಟಕ ಹಾಗೂ ಹವ್ಯಾಸಿ ವೃತ್ತಿ ರಂಗಭೂಮಿ ಕಲಾವಿದರು, ಮಹಿಳಾ ಕಲಾವಿದರು, ಡ್ರಾಮಾ ಸೀನರಿ ಮಾಲೀಕರು, ಹಾರ್ಮೋನಿಯಂ ಮಾಸ್ಟರ್‍ಗಳು, ಪಕ್ಕವಾದ್ಯಗಾರರು, ಡ್ರಾಮಾ ಸೀನರಿ ಮಾಲೀಕರು ಹಾಗೂ ಕಾರ್ಮಿಕರು, ಸಾಂಸ್ಕøತಿಕ…

ಮುಂದೆ ಓದಿ...

ತುಮಕೂರು : ಕೋವಿಡ್-19 2ನೇ ಅಲೆ ; ಅದ್ದೂರಿ ಮದುವೆಗೆ ಕಡಿವಾಣ!

 ತುಮಕೂರು :       ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತ್ ನ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ಕೋವಿಡ್- 2ನೇ ಅಲೆ ಹರಡುವಿಕೆ ನಿಯಂತ್ರಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ನಾಳೆಯಿಂದಲೇ ಸಭೆ-ಸಮಾರಂಭ ಜಾತ್ರೆ, ಸಂತೆ ರದ್ದು: ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಭೆ-ಸಮಾರಂಭ, ಆರ್ಕೆಸ್ಟ್ರಾ ಹಾಗೂ ಜಾತ್ರೆಗಳ ಆಚರಣೆ ಹಾಗೂ ಸಂತೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆದೇಶ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಹಶೀಲ್ದಾರ್‍ಗಳು ಕಾರ್ಯೊನ್ಮುಖರಾಗಬೇಕು ಎಂದು ನಿರ್ದೇಶಿಸಿದರು. ಅದ್ದೂರಿ ಮದುವೆಗೆ ಕಡಿವಾಣ:        ಅದ್ದೂರಿ…

ಮುಂದೆ ಓದಿ...

ಎತ್ತಿನಹೊಳೆ, ಹೇಮಾವತಿ, ಭದ್ರ ಮೇಲ್ಡಂಡೆ ಯೋಜನೆಗಳಿಂದ ತುಮಕೂರು ಜಿಲ್ಲೆಗೆ ಸಮಗ್ರ ನೀರು

 ತುಮಕೂರು:       ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆಯ ರೂಪು-ರೇಷಗಳನ್ನು ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಯೋಜನೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚರ್ಚೆ ನಡೆಸಿದರು. ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ಯೋಜನೆಗಳಿಂದ ತಾಲ್ಲೂಕುವಾರು ನೀರಿನ ಸಮಗ್ರ ಹಂಚಿಕೆಯ ಬಗ್ಗೆ ವಿಸ್ತøತವಾಗಿ ಚರ್ಚೆ ನಡೆಸಿದರು. ಮೂರು ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಶೇ.50ರಷ್ಟು ಜಿಲ್ಲೆಯ ಕೆರೆಗಳು ತುಂಬಲಿವೆ. ಹಂಚಿಕೆಯಾದ ಎಲ್ಲಾ ಕೆರೆಗಳನ್ನು ಶೇ.50 ರಷ್ಟಾದರೂ ತುಂಬಿಸುವ ಗುರಿ ಹೊಂದಲಾಗಿದೆ. ಹೇಮಾವತಿಯಿಂದ ಜಿಲ್ಲೆಗೆ ಹರಿಯುವ ನೀರನ್ನು ಈ ವರ್ಷ ಸಮಗ್ರವಾಗಿ ಬಳಕೆ ಮಾಡಲಾಗಿದೆ. ಆದರೆ,…

ಮುಂದೆ ಓದಿ...

ಹುಳಿಯಾರ: ಮತದಾರರ ಮನೆಮನೆಗೆ ತಲುಪಿತು ಸೀರೆ, ಕುಕ್ಕರ್!

ಹುಳಿಯಾರು:       ಹುಳಿಯಾರು ಪಂಚಾಯ್ತಿ ಚುನಾವಣೆಯ ಇತಿಹಾಸದಲ್ಲಿ ಇಂತಹ ಭ್ರಷ್ಟ ಚುನಾವಣೆ ಹಿಂದೆಂದೂ ನಡೆದಿರಲಿಲ್ಲ. ಮತದಾರರೇ ಭಷ್ಟ್ರರಾಗಿದ್ದಾರೋ ಅಥ ವಾ ಅಭ್ಯರ್ಥಿಗಳೇ ಬಲವಂತದಿಂದ ತಲುಪಿಸುತ್ತಿದ್ದಾರೋ ತಿಳಿಯದಾಗಿದೆ. ಒಟ್ಟಿನಲ್ಲಿ ಇಲ್ಲಿನ ಮನೆಮನೆಗಳಿಗೆ ಗೃಹ ಉಪಯೋಗಿ ವಸ್ತುಗಳು ಬಂದು ಸೇರಿವೆ.       ಬಹಳ ವರ್ಷಗಳ ಹಿಂದೇನಲ್ಲ ಹತ್ತನ್ನೆರಡು ವರ್ಷಗಳ ಹಿಂದೆಷ್ಟೆ ಮತದಾನಕ್ಕೆ ಬಂದಾಗ ಟೀ, ತಿಂಡಿ ಕೊಡಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಮನೆಮನೆಗೆ ಕೋಳಿ, ಮದ್ಯ ಸರಬರಾಜು ಮಾಡುತ್ತಿದ್ದರು. ಆದರ ಈಗ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರೂ ತಮ್ಮ ಶಕ್ತಾನುಸಾರ ತಮ್ಮ ವಾರ್ಡ್‍ಗಳ ಮನೆಮನೆಗೆ ಚುನಾವಣಾ ಗಿಫ್ಟ್ ನೀಡುತ್ತಿದ್ದಾರೆ.      ಸೀರೆ, ಕುಕ್ಕರ್, ಡ್ರಸ್ ಮೆಟಿರಿಯಲ್, ಬೆಳ್ಳಿ ಬಟ್ಟಲು, ಮಿಕ್ಸಿ, ಫ್ಯಾನ್, ಎಲ್‍ಇಡಿ ಚಾರ್ಜ್ ಲೈಟ್ ಹೀಗೆ ಒಂದೊಂದು ವಾರ್ಡ್‍ಗಳಲ್ಲಿ ಒಂದೊಂದು ಬಗೆಯ ಗೃಹ ಉಪಯೋಗಿ ವಸ್ತುಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಕೆಲ ವಾರ್ಡ್‍ಗಳಲ್ಲಿ ಯುಗಾದಿ ಕಿಟ್ ಎಂದು…

ಮುಂದೆ ಓದಿ...