ತುಮಕೂರು : ಸಾರಿಗೆ ನೌಕರರ ಮುಷ್ಕರ : ಪ್ರಯಾಣಿಕ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

 ತುಮಕೂರು :        ಕೆಸ್ಸಾರ್ಟಿಸಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿದಿಂದ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಹಾಗೂ ಇನ್ನಿತರ ಪರ್ಯಾಯ ವ್ಯವಸ್ಥೆಯೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಖಾಸಗಿ ಬಸ್ ಮಾಲೀಕರು ಹಾಗೂ ಮ್ಯಾಕ್ಸಿ ಕ್ಯಾಬ್ ಇನ್ನಿತರ ವಾಹನಗಳ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಕೆಸ್ಸಾರ್ಟಿಸಿ ಸಂಸ್ಥೆಯ 610 ಬಸ್‍ಗಳ ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದವು ಅಲ್ಲದೇ ಜಲ್ಲೆಯಲ್ಲಿ 485 ಪರವಾನಗಿ ಇರುವ ಖಾಸಗಿ ಬಸ್‍ಗಳು ಸಂಚಾರ ನಡೆಸುತ್ತಿವೆ. ಈಗಾಗಿ ಜಿಲ್ಲೆಯೊಳಗಡೆ ಸ್ಥಳೀಯವಾಗಿ ಪ್ರಯಾಣಿಕರ ಸಾರಿಗೆ ವ್ಯತ್ಯಯಲ್ಲಿ ಉಂಟಾಗುವುದಿಲ್ಲ. ಆದರೆ ತುಮಕೂರಿನಿಂದ ಬೆಂಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತಿತರ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ…

ಮುಂದೆ ಓದಿ...

ಹುಳಿಯಾರು :  ಹುಳಿಯಾರು ನಾಡಕಛೇರಿಯಲ್ಲಿ ಅರ್ಜಿ ಸೇವೆ ಸ್ಥಗಿತ

ಹುಳಿಯಾರು:        ಹುಳಿಯಾರು ನಾಡಕಚೇರಿಯಲ್ಲಿ ಪ್ರಿಂಟರ್ ಸಮಸ್ಯೆಯಿಂದಾಗಿ ಅರ್ಜಿ ಸೇವೆ ಸ್ಥಗಿತಗೊಳಿಸಲಾಗಿದೆ.       ಹುಳಿಯಾರು ಹೋಬಳಿಯು ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದ್ದು ನಿತ್ಯ ಸಾವಿರಾರು ಮಂದಿ ಹಳ್ಳಿಗಳಿಂದ ಇಲ್ಲಿಗೆ ಬಂದೋಗುತ್ತಾರೆ. ಅಲ್ಲದೆ ಇಲ್ಲಿನ ನಾಡಕಛೇರಿಗೆ ಜಾತಿಆದಾಯ, ಫೌತಿ ಖಾತೆ, ವಂಶವೃಕ್ಷ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಆಗಮಿಸುತ್ತಾರೆ. ಪಹಣಿ ಹಾಗೂ ಎಂಆರ್ ಪಡೆಯಲೂ ಸಹ ಇಲ್ಲಿಗೆ ಬರುತ್ತಾರೆ.       ಚುನಾವಣೆ ಸಂದರ್ಭದಲ್ಲಂತೂ ಎಂದಿಗಿಂತಲೂ ಹೆಚ್ಚು ಮಂದಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುತ್ತಾರೆ. ಇದು ಇತ್ತೀಚೆಗೆ ನಡೆದ ಗ್ರಾಪಂ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಬದಲ್ಲಿ ಸಾಭೀತಾಗಿದೆ. ಹಾಗಾಗಿ ತಾಲೂಕಿನಲ್ಲೇ ಹೆಚ್ಚು ವರ್ಕ್‍ಲೋಡ್ ಇರುವ ಹುಳಿಯಾರು ನಾಡಕಛೇರಿಗೆ ಇಬ್ಬರು ಕಂಪ್ಯೂಟರ್ ಆಪರೇಟರ್ ಹಾಗೂ ಎರಡು ಪ್ರಿಂಟರ್ ಮತ್ತು ಸಿಸ್ಟಮ್‍ಗಳ ಅಗತ್ಯವಿದೆ. ಆದರೆ ಒಬ್ಬರು…

ಮುಂದೆ ಓದಿ...

ತುಮಕೂರು : ವಾರ್ಡ್ ಹಂತದಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ಬಗ್ಗೆ ಅರಿವು

ತುಮಕೂರು :        ಎರಡನೇ ಹಂತದ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ವಾರ್ಡ್ ಹಂತದಲ್ಲಿ ಕೋವಿಡ್ ತಪಾಸಣೆ ಮತ್ತು ಸ್ವ್ಯಾಬ್ ಸಂಗ್ರಹ, ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ.         ನಗರದ ಸಿದ್ಧಗಂಗಾ ಬಡಾವಣೆಯ 9ನೇ ಕ್ರಾಸ್, ಸಿದ್ದಗಂಗಾ ಮಹಿಳಾ ಹಾಸ್ಟೆಲ್, ಸೇರಿದಂತೆ 26ನೇ ವಾರ್ಡ್‍ನಲ್ಲಿ ಸಾರ್ವಜನಿಕರಿಗಾಗಿ ಕೋವಿಡ್ ಪರೀಕ್ಷೆ ಮಾಡಿ ಸ್ವ್ಯಾಬ್ ಸಂಗ್ರಹ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಹಾಕುವ ಕಾರ್ಯಕ್ರಮಕ್ಕೆ ಮಹಾಪೌರರಾದ ಕೃಷ್ಣಪ್ಪ ಅವರು ಚಾಲನೆ ನೀಡಿದರು.        ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತೆ ರೇಣುಕಾ, ನಗರದಲ್ಲಿ ಪಾಸಿಟಿವ್ ಕೇಸ್‍ಗಳು ಹೆಚ್ಚಾಗುತ್ತಿದೆ ಪಾಲಿಕೆ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆ ಕಡಿಮೆಯಾಗುತ್ತಿದೆ.…

ಮುಂದೆ ಓದಿ...

ತುಮಕೂರು :  ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜಿಲ್ಲೆಯ ಪಾತ್ರ ಮಹತ್ವಪೂರ್ಣವಾಗಿದೆ

ತುಮಕೂರು:        ಕ್ವಿಟ್ ಇಂಡಿಯಾ ಚಳುವಳಿ ಯಲ್ಲಿ ತುಮಕೂರು ಜಿಲ್ಲೆಯ ಪಾತ್ರ ಮಹತ್ವ ದ್ದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.       ನಗರದ ಸ್ವಾತಂತ್ರ್ಯ ಚೌಕದಲ್ಲಿಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧೀಜಿಯವರಿಗೆ ‘ನುಡಿನಮನ’ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಉಪ್ಪಿನ ಸತ್ಯಾಗ್ರಹದಲ್ಲಿ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಅವರಿಗೆ ನಮನ ಸಲ್ಲಿಸುವ ಮೂಲಕ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ರಾಷ್ಟ್ರಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯ ಕ್ರಮದ ಭಾಗವಾಗಿ ಪ್ರತಿ ವಾರವೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.       ಈ ವೇಳೆ…

ಮುಂದೆ ಓದಿ...