ಕಲ್ಪತರು ನಾಡಿನ ಜನರ ಆಶಾಕಿರಣ ಡಾ.ಜಿ.ಪರಮೇಶ್ವರ

ತುಮಕೂರು : ದೇಶ ಕಂಡಂತಹ ಸಜ್ಜನ ರಾಜಕಾರಣಿ, ಪಕ್ಷದ ನಿಷ್ಠಾವಂತ ನಾಯಕ, ಅಜಾತ ಶತ್ರು ಮಾನವೀಯ ಮೌಲ್ಯಗಳುಳ್ಳ ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು, ಕೊರಟಗೆರೆ ಕ್ಷೇತ್ರದ ಜನಪ್ರಿಯ ಅಭಿವೃದ್ಧಿ ಶಾಸಕರು, ಕೆ.ಪಿ.ಸಿ.ಸಿ. ಅಧ್ಯಕರ ಅವಧಿಯಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮುನ್ನೆಡೆಸಿದವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಹೈಕಮಾಂಡ್‍ನಲ್ಲಿ ಹಲವು ಪ್ರಭಾವಿ ಹುದ್ದೆಗಳನ್ನು ಜವಾಬ್ದಾರಿಯಿಂದ ಮತ್ತು ಸಮರ್ಥವಾಗಿ ನಿರ್ವಹಿಸಿದ ಕಲ್ಪತರು ನಾಡಿನ ಜನರ ಆಶಾಕಿರಣ ಡಾ.ಜಿ.ಪರಮೇಶ್ವರ ರವರ ಜೀವನದ “ಸವ್ಯಸಾಚಿ’’ ಗೌರವ ಗ್ರಂಥ ಬಿಡುಗಡೆ ಸಮಾರಂಭವನ್ನು ಏಪ್ರಿಲ್.10ರ ಭಾನುವಾರದಂದು ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸಾವಿರಾರು ಅಭಿಮಾನಿಗಳು, ಸ್ನೇಹಿತರು ಮತ್ತು ಹಿರಿಯರೊಂದಿಗೆ ಬಿಡುಗಡೆಯಾಗುತ್ತಿದೆ. ಡಾ.ಜಿ.ಪರಮೇಶ್ವರ್ ರವರು ಆಸ್ಟ್ರೇಲಿಯಾದ ಹೆಸರಾಂತ ಅಡಿಲೈಡ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿಯನ್ನು ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿದಾಗ 1987 ರಲ್ಲಿ ಶಿಕ್ಷಣ ಭೀಷ್ಮರಾದ ಶ್ರೀಯುತ.ಗಂಗಾಧರಯ್ಯ ರವರ ಆಹ್ವಾನದ…

ಮುಂದೆ ಓದಿ...

ಸಿದ್ದಗಂಗಾ ಕಾಲೇಜಿ‌ನ ವಿದ್ಯಾರ್ಥಿ ಸಂಘಕ್ಕೆ ಒಂದು ಲಕ್ಷ ರೂ. ದೇಣಿಗೆ

ತುಮಕೂರು: ನಗರದ ಶ್ರೀ ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ನಿವೃತ್ತರಾದ ಪ್ರೊ.ಸಿದ್ಧಗಂಗಪ್ಪ ಮತ್ತು ಅವರ ಮಗಳು ಶ್ರೀಮತಿ ಜಲಜರವರು ಒಂದು ಲಕ್ಷ ರೂಗಳ ದೇಣಿಗೆಯನ್ನು ನೀಡಿದ್ದಾರೆ.ಆ ಹಣವನ್ನು ಸಂಘ ನಿಶ್ಚಿತ ಠೇವಣಿ ಇಟ್ಟು ಪ್ರತಿ ವರ್ಷ ಆ ಹಣದಲ್ಲಿ ಬರುವ ಬಡ್ಡಿ ಹಣದಲ್ಲಿ ಕಾಲೇಜಿನಲ್ಲಿ ಓದುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವ್ಯಯಿಸುವಂತೆ ಸಂಘಕ್ಕೆ ಮನವಿ ಮಾಡಿದ್ದಾರೆ. ದೇಣಿಗೆ ಸ್ವೀಕರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರೂ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ||ಹೆಚ್.ಪಿ.ವೀರಭದ್ರಸ್ವಾಮಿರವರು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸಿದ್ಧಗಂಗಪ್ಪ ನವರು ಮತ್ತು ಅವರ ಕುಟುಂಬ ಸದಸ್ಯರು ನೀಡಿದ ಹಣದ ಪ್ರತಿ ರೂಪಾಯಿ ಕಾಲೇಜಿನಲ್ಲಿ ಓದುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೀಡಲಾಗುವುದು,ಇಂದು ನೀಡಿದ ದೇಣಿಗೆ ಎಲ್ಲರಿಗೂ ಮಾದರಿ ಎಂದು ಪ್ರಶಂಸಿದರು,ಇದೇ ರೀತಿ ಎಲ್ಲರೂ ಸಂಘಕ್ಕೆ ದೇಣಿಗೆ…

ಮುಂದೆ ಓದಿ...

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ತುಮಕೂರು: ಇಂಧನ ಬೆಲೆಗಳ ಹೆಚ್ಚಳ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಇಂಧನ ಬೆಲೆಗಳ ಹೆಚ್ಚಳವನ್ನು ಐದು ತಿಂಗಳ ಕಾಲ ಸ್ಥಗಿತ ಮಾಡಿದ್ದ ಬಿಜೆಪಿ, ಫಲಿತಾಂಶ ಪ್ರಕಟವಾದ ನಂತರ, ನಿರಂತರವಾಗಿ ಇಂಧ ಬೆಲೆಗಳನ್ನು ಹೆಚ್ಚಳ ಮಾಡಿ,ಜನಸಾಮಾನ್ಯರ ಕೈಗೆ ಎಟುಕದಂತೆ ಮಾಡಿವೆ.ಅಡುಗೆ ಅನಿಲ 1100ರ ಗಡಿ ದಾಟಿದೆ.ಇದಕ್ಕೆ ಪೂರಕವೆಂಬಂತೆ ಅಡುಗೆ ಎಣ್ಣೆ,ಅಕ್ಕಿ,ಬೆಳೆ ಬೆಲೆಗಳು ಹೆಚ್ಚಳವಾಗಿ ಜನಸಾಮಾನ್ಯರು ಬದುಕು ಕಷ್ಟಕರವಾಗಿದೆ.ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಹಿಜಾಬ್,ಹಲಾಲ್ ಕಟ್,ಆಝಾನ್ ನಂತಹ ಧಾರ್ಮಿಕ ವಿಚಾರಗಳನ್ನು ಜನರ ಮದ್ಯೆ ತಂದು,ದೇಶದ ಕೋಮು ಸೌಹಾರ್ಧತೆಯನ್ನು ಕದಡುತ್ತಿದೆ.ಇದರ ವಿರುದ್ದ ಕಾಂಗ್ರೆಸ್ ಹೋರಾಟ ಆರಂಭಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ…

ಮುಂದೆ ಓದಿ...