ಅಂಬೇಡ್ಕರ್ – ಜಗಜೀವನ್ ರಾಮ್ ತತ್ವಾದರ್ಶ ಪಾಲನೆಗೆ ಕರೆ

ತುಮಕೂರು: ನಗರದ ಹೊರವಲಯದ ಹೆಗ್ಗೆರೆಯ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ (ರಿ) ಕಚೇರಿಯಲ್ಲಿಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಯ್ಯ ಎಂ. ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗುವ ಅವಶ್ಯಕತೆ ಇದೆ. ಪ್ರತಿವರ್ಷ ಅವರ ಜನ್ಮದಿನೋತ್ಸವವನ್ನು ಆಚರಣೆ ಮಾಡುವುದರ ಮೂಲಕ ಅವರ ಕಾರ್ಯಚಟುವಟಿಕೆಗಳನ್ನು ನೆನೆಯುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಡಾ. ಬಾಬು ಜಗಜೀವನರಾಮ್ ಅವರು ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ, ಎಲ್ಲ ಸಮುದಾಯಗಳ…

ಮುಂದೆ ಓದಿ...

ನಗರದಲ್ಲಿ ಮತ್ತೆ ಮರಗಳ ಮಾರಣ ಹೋಮ: ಗುತ್ತಿಗೆದಾರನ ಬಂಧನಕ್ಕೆ ಆಗ್ರಹ

ತುಮಕೂರು: ನಗರದ ಬಿ.ಹೆಚ್. ರಸ್ತೆಯಲ್ಲಿ ಕಳೆದ 11 ವರ್ಷದಿಂದ ಬೆಳೆಸಿದ್ದ ಬೇವಿನ ಮರಗಳನ್ನು ಗುತ್ತಿಗೆದಾರರು ಮತ್ತೆ ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಬಿ.ಹೆಚ್. ರಸ್ತೆಯ ಮಧ್ಯಭಾಗದಲ್ಲಿ ಕಳೆದ 11 ವರ್ಷಗಳಿಂದ ಮರಗಳನ್ನು ಬೆಳೆಸಲಾಗಿತ್ತು. ಈ ಪೈಕಿ ಬೇವಿನ ಮರಗಳು ಅತಿ ಹೆಚ್ಚಾಗಿದ್ದು, ಚೆನ್ನಾಗಿ ಬೆಳೆದು ನಿಂತಿದ್ದವು. ಆದರೆ ಪಾಲಿಕೆಯಿಂದ ಜಾಹೀರಾತು ನಾಮಫಲಕಗಳನ್ನು ಅಳವಡಿಸುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪಾಲಿಕೆಯಿಂದಾಗಲೀ ಅಥವಾ ಅರಣ್ಯ ಇಲಾಖೆಯಿಂದಾಗಲೀ ಯಾವುದೇ ಅನುಮತಿ ಪಡೆಯದೇ ಏಕಾಏಕಿ ರಾತ್ರಿ 11 ಬೇವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ. ಮರಗಳ ಮಾರಣಹೋಮ ನಡೆಸಿರುವುದನ್ನು ಬೆಳಿಗ್ಗೆ ನೋಡಿದ ಪರಿಸರ ಪ್ರೇಮಿಗಳು ತಕ್ಷಣ ರಸ್ತೆಗಿಳಿದು ಮರಗಳನ್ನು ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಳೆದ 3 ತಿಂಗಳ ಹಿಂದೆ ಸದರಿ ಗುತ್ತಿಗೆದಾರ ಇದೇ ರೀತಿಯ…

ಮುಂದೆ ಓದಿ...

ಅಂಬೇಡ್ಕರ್ ಅಂದರೆ ಎಸ್ಸಿಎಸ್ಟಿ ಎನ್ನುವ ಮನೋಭಾವನೆ ಜನರಲ್ಲಿದೆ: ಡಾ.ಜಿ.ಪರಮೇಶ್ವರ

ತುಮಕೂರು: ದೇಶದಲ್ಲಿ ಸಮಾನತೆ, ಭಾತೃತ್ವದ ಚಿಂತನೆ ನೀಡದೆ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಭಾವನಾತ್ಮಕ ವಿಚಾರಗಳೇ ಮುಖ್ಯವಾಗಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್, ಬಾಬುಜಗಜೀವನ್ ರಾಂ ಜಯಂತಿಯಲ್ಲಿ ಅವರು ಮಾತನಾಡಿದ ಅವರು, ಸಂವಿಧಾನ ರಚನೆಯ ವೇಳೆಯಲ್ಲಿಯೇ ಸಮಾನತೆ, ಭಾತೃತ್ವವನ್ನು ಒಪ್ಪಿಕೊಂಡಿದ್ದೆವು, ಆದರೆ ಇಂದು ನಾವು ಬೇರೆ ನೀವು ಬೇರೆ ಎಂದು ಹೇಳಿದರೆ ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ಅಂದರೆ ಎಸ್ಸಿಎಸ್ಟಿ ಎನ್ನುವಂತಹ ಮನೋಭಾವನೆ ಜನರಲ್ಲಿದೆ, ಅಂಬೇಡ್ಕರ್ ಭಾರತ ದೇಶದಲ್ಲಿರುವ ಪ್ರತಿಯೊಂದು ಜೀವಿಗೂ ಸಂವಿಧಾನವನ್ನು ನೀಡಿದ್ದಾರೆ, ದೇಶದ ಆರ್ಥಿಕತೆ ಇಂದು ಸದೃಢವಾಗಿದೆ ಅದಕ್ಕೆ ಕಾರಣ ಅಂಬೇಡ್ಕರ್ ಅವರು, ಕರೆನ್ಸಿಯೇ ಇಲ್ಲದ ದೇಶಕ್ಕೆ ಸಾಮಾನ್ಯ ಕರೆನ್ಸಿಯನ್ನು ನೀಡಿ, ಆರ್ ಬಿಐ ಸ್ಥಾಪಿಸಲು ಅವರ ಮುಂದಾಲೋಚನೆಯೇ ಕಾರಣ ಎಂದರು. ಅಂಬೇಡ್ಕರ್ ಎಂದರೆ ಬರೀ ಮೀಸಲಾತಿ ಎನ್ನುತ್ತಿದ್ದಾರೆ,ಈ ದೇಶಕ್ಕಾಗಿ ಅಂಬೇಡ್ಕರ್ ನೀಡಿರುವ…

ಮುಂದೆ ಓದಿ...

ಪ್ರಜಾರಾಜ್ಯ ಅವಶ್ಯಕತೆ ಎತ್ತಿ ಹಿಡಿದ ಅಂಬೇಡ್ಕರ್

ತುಮಕೂರು : ಸ್ವರಾಜ್ಯದ ಜೊತೆಗೆ ಪ್ರಜಾ ರಾಜ್ಯದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿ, ಪ್ರಜಾರಾಜ್ಯಕ್ಕಾಗಿ ಮೊಟ್ಟ ಮೊದಲಿಗನಾಗಿ ಧ್ವನಿ ಎತ್ತಿದ ಮಹಾನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಅವರು, ಮಹಾನ್ ರಾಷ್ಟ್ರ ಭಕ್ತರು ಕೂಡ ಆಗಿದ್ದರು ಎಂದು ಪ್ರೊ. ಶ್ರೀ ಹರಿ ರಾಂ ಅವರು ತಿಳಿಸಿದರು. ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಂ ಅವರ 115ನೇ ಜನ್ಮದಿನಾಚರಣೆಯಲ್ಲಿ ಮುಖ್ಯ ಭಾಷಣಾಕಾರರಾಗಿ ಭಾಗವಹಿಸಿ ಮಾತನಾಡುತ್ತಾ, ಜಗತ್ತಿನಾದ್ಯಂತ ಜನಸಾಮಾನ್ಯರು ಹಬ್ಬದ ರೀತಿ ಆಚರಿಸಿ ಸಂಭ್ರಮಿಸುವ ಏಕೈಕ ಹಬ್ಬ ಅದುವೇ ಮಹಾನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಎಂದರು. ಮಹಾನಾಯಕ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತವಾಗಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಅವರು ಕೇವಲ ಒಂದು ದೇಶ, ಒಂದು ರಾಜ್ಯ, ಒಂದು ಜಾತಿಗೆ ಸೀಮಿತವಲ್ಲ, ಅವರು ವಿಶ್ವ…

ಮುಂದೆ ಓದಿ...

ಅನೈತಿಕ ಸಂಬಂಧ : ಪಿಡ್ಲ್ಯೂಡಿ ಇಂಜಿನಿಯರ್ ಶಂಭುಕುಮಾರ್ ವಿರುದ್ಧ ಮೊಕದ್ದಮೆ

ತುಮಕೂರು: ನಗರದ ಲೋಕೋಪಯೋಗಿ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಭುಕುಮಾರ್ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ದಿನಾಂಕ 12.04.2022ರಂದು ಮೊಕದ್ದಮೆ ದಾಖಲಾಗಿದೆ. ಮಹಾಲಕ್ಷ್ಮೀಪುರಂ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಯತ್ನ ಆರೋಪದ ಮೇಲೆ ಒಂದನೇ ಆರೋಪಿಯಾಗಿ ಶಂಭುಕುಮಾರ್, ಎರಡನೇ ಆರೋಪಿಯಾಗಿ ಅಶ್ವಿನಿ ಮತ್ತು ಮೂರನೇ ಆರೋಪಿಯಾಗಿ ಲಕ್ಷ್ಮೀ ಸೇರಿದಂತೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಮೊದಲನೇ ಆರೋಪಿಯಾಗಿರುವ ಶಂಭುಕುಮಾರ್, ಸಹಾಯಕ ಇಂಜಿನಿಯರ್ ಆಗಿ ತುಮಕೂರು ಲೋಕೋಪಯೋಗಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯನ್ನು ಸಹ ಕಳೆದ ಒಂದೂವರೆ ವರ್ಷದಿಂದ ನಿರ್ವಹಿಸುತ್ತಿದ್ದಾರೆ. ತಮ್ಮ ಕಚೇರಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆಕೆಯ ಪತಿ ಲೋಕೋಪಯೋಗಿ ಕಚೇರಿಯ ಮುಂದೆ ಬಂದು ಇಂಜಿನಿಯರ್ ಶಂಭುಕುಮಾರ್ ಅವರಿಗೆ ಬುದ್ದಿ ಹೇಳಿ…

ಮುಂದೆ ಓದಿ...