Author: News Desk Benkiyabale

ತುಮಕೂರು: ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂಬ ಧ್ಯೇಯ ವಾಕ್ಯದೊಂದಿಗೆ ಅತಿಥಿ ಉಪನ್ಯಾಸಕರು ೨೭ನೇ ದಿನವೂ ರಕ್ತದಾನ ಮಾಡುವ ಮೂಲಕ ಇಂದು ವಿಶಿಷ್ಟವಾಗಿ ಪ್ರತಿಭಟನೆ ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿಯನ್ನು ಮುಂದುವರೆಸಿರುವ ಅತಿಥಿ ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂದು ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್ ಸುಮಾರು ೨೦ ವರ್ಷಗಳಿಂದ ಸರ್ಕಾರ ನಮ್ಮನ್ನು ರಕ್ತ ಹೀರುತ್ತಿದೆ ನಾವು ಸರ್ಕಾರಕ್ಕೆ ರಕ್ತ ಕೊಟ್ಟೆವು ಖಾಯಂಯಾತಿ ಬಿಡುವುದಿಲ್ಲ ಖಾಯಂ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಸುಮಾರು ಒಂದು ತಿಂಗಳಿAದ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ನಮ್ಮನ್ನು ಆತಂಕ್ಕೀಡುಮಾಡಿದೆ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಪಾದಯಾತ್ರೆಯನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು. ಅತಿಥಿ ಉಪನ್ಯಾಸಕರ…

Read More

ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿಸುವ ಸಲುವಾಗಿ ಸೂಕ್ತ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಬಕಾರಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿದೇಶಿ ಸಿಗರೇಟ್‌ಗಳ ಮಾರಾಟದ ಬಗ್ಗೆ ಕ್ರಮಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಎಲ್‌ಇಡಿ ವಾಲ್ ಹಾಗೂ ಸಿಗ್ನಲ್‌ಗಳಲ್ಲಿ ತಂಬಾಕು ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ನಿಯಮಗಳ ಬಗ್ಗೆ ಪ್ರಚಾರ ಮಾಡಬೇಕು ಎಂದರಲ್ಲದೆ, ಪಾಲಿಕೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಪರವಾನಗಿ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ನಿಯಂತ್ರಿಸುವಲ್ಲಿ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡುತ್ತಿವೆ. ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಮಿಕ…

Read More

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿ ರಾಮಘಟ್ಟದಲ್ಲಿ ಇತ್ತೀಚಗೆ ನಡೆದ ಅಗ್ನಿ ದುರಂತದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕುರಿ ಮತ್ತು ಕೋಳಿಗಳನ್ನು ಕಳೆದುಕೊಂಡಿದ್ದ ರೈತ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಅತಿ ಕಡಿಮೆ ದರದಲ್ಲಿ ಸುಮಾರು ೬.೫೦ಲಕ್ಷ ರೂಗಳ ಸಾಲದ ಆದೇಶ ಪತ್ರವನ್ನು ಸಹಕಾರ ಸಚಿವ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ವಿತರಿಸಿದರು. ಹಂದನಕೆರೆ ಹೋಬಳಿ ರಾಮಘಟ್ಟದ ಚೇತನಕುಮಾರ್ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ರೈತ ಕುಟುಂಬದ ಆಧಾರ ಸ್ಥಂಬವಾಗಿದ್ದ ೧೧೦ ಟಗರು, ೩೦ ಮೇಕೆ, ೧೫೦ ಕೋಳಿಗಳು ಸುಟ್ಟು ಕರಕಲಾಗಿದ್ದು, ಇಡೀ ಕುಟುಂಬವೇ ಕಂಗಾಲಾಗಿತ್ತು.ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಅವರು ಕುಟುಂಬದ ಸದಸ್ಯರನ್ನು ಭೇಟಿಯಾಗಿ ನೆರವು ನೀಡುವ ಧೈರ್ಯ ತುಂಬಿದ್ದರು. ಇದರಂತೆ ಇಂದು ಡಿಸಿಸಿ ಬ್ಯಾಂಕ್ ವತಿಯಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸುಮಾರು ೬.೫೦ ಲಕ್ಷ ರೂಗಳ ಸಾಲದ ಆದೇಶ ಪತ್ರವನ್ನು ಸಂತ್ರಸ್ಥ ಕುಟುಂಬದ ಚೇತನಕುಮಾರ್ ಅವರಿಗೆ ಹಸ್ತಾಂತರಿಸಿದರು.…

Read More

ತುಮಕೂರು : ಕೊರಟಗೆರೆ ತಾಲ್ಲೂಕು ಚಿಕ್ಕಪಾಲನಹಳ್ಳಿ, ಧಮಗಲಯ್ಯನಪಾಳ್ಯ ಮತ್ತು ಬೋಳಬಂಡೆನಹಳ್ಳಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಂದು ಭೇಟಿ ನೀಡಿ, ಜಾನುವಾರು ಮೇವು ಬೆಳೆಗಳ ಕ್ಷೇತ್ರ ಪರಿಶೀಲನೆ, ಬರದ ಹಿನ್ನೆಲೆ ಟಾಸ್ಕ್ ಫೋರ್ಸ್ ಸಮಿತಿಯಿಂದ ಕೊರೆಸಿರುವ ಕೊಳವೆಬಾವಿ ಸ್ಥಳ ಪರಿಶೀಲನೆ ಮತ್ತು ಬರಗಾಲ ಪರಿಸ್ಥಿತಿಯಿಂದ ಉಂಟಾದ ಬೆಳೆ ನಷ್ಟವನ್ನು ಪರಿಶೀಲಿಸಿದರು. ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ವಿಟ್ಟಾರಾವುತನಹಳ್ಳಿಗೆ ಮೊದಲಿಗೆ ಭೇಟಿ ನೀಡಿದ ಅವರು, ರೈತ ದೊಡ್ಡಯ್ಯ ಮತ್ತು ದಾಸಪ್ಪ ಎಂಬುವವರ ರಾಗಿ ಹೊಲಕ್ಕೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಯನ್ನು ವೀಕ್ಷಿಸಿ ರೈತರಿಗೆ ಬೆಳೆ ಪರಿಹಾರವನ್ನು ತ್ವರಿತಗತಿಯಲ್ಲಿ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತದ ನಂತರ ಕೋಳಾಲ ಹೋಬಳಿ ಚಿಕ್ಕಪಾಲನಹಳ್ಳಿ ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆಯಿಂದ ರಾಸುಗಳನ್ನು ಹೊಂದಿರುವ ರೈತರಿಗೆ ವಿತರಿಸಿದ ಉಚಿತ ಮೇವು ಬೀಜ ಬೆಳೆಗಳ ಕ್ಷೇತ್ರ ಪರಿಶೀಲನೆ ನಡೆಸಿದ ಅವರು, ರೈತರಿಗೆ ಮೇವಿನ ಕಿಟ್‌ಗಳನ್ನು ಕಾಲಮಿತಿಯೊಳಗಾಗಿ ಸಮರ್ಪಕವಾಗಿ ವಿತರಣೆ ಮಾಡುವಂತೆ ಪಶು ಸಂಗೋಪನೆ…

Read More

ತುಮಕೂರು ವಿದ್ಯುತ್ ಅಪಘಾತ ತಡೆಯುವ ಸಪ್ತಾಹದ ಅಂಗವಾಗಿ ಬೆಸ್ಕಾಂ ತುಮಕೂರು ವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾವನ್ನು ನಗರದಲ್ಲಿ ನಡೆಸಲಾಯಿತು. ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿAದ ಆರಂಭವಾದ ವಿದ್ಯುತ್ ಸುರಕ್ಷತಾ ಜನಜಾಗೃತಿ ಜಾಥಾಕ್ಕೆ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಹೆಚ್.ವಿ. ಕೃಷ್ಣ ಪ್ರಸಾದ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕರು, ರೈತರು, ಶಾಲಾ ಮಕ್ಕಳು ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ವಿದ್ಯುತ್ ಅಪಘಾತವನ್ನು ತಡೆಯುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ ಎಂದರು. ವಿದ್ಯುತ್ ಅಪಘಾತ ಉಂಟಾಗದAತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಮುಂದಾಗಿದೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಸುರಕ್ಷತಾ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದುಯ ತಕ್ಷಣ ಬೆವಿಕಂ ಸಹಾಯವಾಣಿ ೧೯೧೨ಗೆ ಕರೆ ಮಾಡಿ ಮಾಹಿತಿ…

Read More

ಎಚ್.ಬಿ.ಕಿರಣ್ ಕುಮಾರ್ ಹುಳಿಯಾರು: ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಕಟ್ಟಡದಲ್ಲಿ ಕಂದಮ್ಮಗಳ ಆಟ, ಪಾಠ, ಊಟ ನಡೆಯುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆಯ ಕಟ್ಟಡ ಎಂಬ ಅರಿವಿದ್ದರೂ ಸಹ ಅದರಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುವ ಮೂಲಕ ಮುಗ್ಧ ಮಕ್ಕಳ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಹೌದು, ಇದು ಹುಳಿಯಾರು ಪಟ್ಟಣದ ಎ ಕೇಂದ್ರದ ಅಂಗನವಾಡಿ ಕಟ್ಟಡದ ದುಸ್ತಿತಿ. ೧೯೫೯ ರಲ್ಲಿ ಮೈಸೂರು ಸಂಸ್ಥಾನದ ನ್ಯಾಯಂಗ, ಕಾರ್ಮೀಕ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾದ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದ ಶಿಶುವಿಹಾರದ ಕಟ್ಟಡದಲ್ಲಿ ೧೯೮೯ ರಿಂದ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಆದರೆ ಈಗ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು ದುರಸ್ಥಿ ಮಾಡಿಸುವುದಕ್ಕಿಂದ ಕೆಡುವುದೆ ಲೇಸು ಎನ್ನುವಂತಿದೆ. ಕೇAದ್ರದ ಸುತ್ತ ಬಿರುಕು ಬಿಟ್ಟ ಗೋಡೆಗಳು, ಹೆಂಚುಗಳು ಮುರಿದಿವೆ, ತೀರುಗಳು ಗೆದ್ದಲು ಹಿಡಿದಿವೆ. ಪರಿಣಾಮ ಮಳೆ ಬಂದರೆ ಕಟ್ಟಡದ ತುಂಬೆಲ್ಲಾ ನೀರು ತುಂಬುತ್ತದೆ. ಗಾಳಿ ಬಂದರೆ ತುಂಡಾಗಿರುವ ಹೆಂಚುಗಳು ತಲೆ ಮೇಲೆ ಬೀಳುತ್ತವೆ. ಭಾರಿ ಮಳೆಗಾಳಿ ಬಂದರೆ ಗೋಡೆಗಳೇ…

Read More

ತುಮಕೂರು ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುವುದು ವಿದ್ಯಾರ್ಜನೆಯ ಜೊತೆಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆಗಳು ಮೇಳೈಸಿದಾಗಲೇ ಎಂಬುದು ಸರ್ವವಿದಿತ. ಜನ್ಮತಃ ಪ್ರತಿಯೊಂದು ಮಗುವೂ ಪ್ರತಿಭಾಶಾಲಿಯೇ. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೇಕಾದ ಮೆರುಗು ನೀಡಿ, ಸೂಕ್ತ ಅವಕಾಶಗಳನ್ನು ಒದಗಿಸಿದರೆ ಶಿಕ್ಷಣದ ಅರ್ಥವೂ ಪರಿಪೂರ್ಣವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಪಟ್ಟಿಯಲ್ಲಿನ ಅತ್ಯುನ್ನತ ಶ್ರೇಣಿಯೊಂದೇ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಬಿಂಬಿಸಲಾಗದು. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಬದುಕಿನ ಹಲವು ಮಜಲುಗಳನ್ನು ಗೆಲ್ಲಲು ಬೇಕಾದ ಆತ್ಮಸ್ಥೆöÊರ್ಯವನ್ನು ಅವರಲ್ಲಿ ತುಂಬುತ್ತದೆ. ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿರುವ ವಿದ್ಯಾನಿಧಿ ಪದವಿಪೂರ್ವ ಕಾಲೇಜು ಡಿಸೆಂಬರ್ ೧೫ರಂದು ವೈಭವದ ಸಾಂಸ್ಕೃತಿಕ ಉತ್ಸವ ಅಮೇಜ್- ೨೦೨೩ನ್ನು ಹಮ್ಮಿಕೊಂಡಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಅಮೇಜ್-೨೦೨೩ ಉದ್ಘಾಟನೆಗೊಳ್ಳುವುದಕ್ಕಿದೆ. ನಿವೃತ್ತ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್, ಐಪಿಎಸ್., ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ತುಮಕೂರಿನ ಸೂಪರ್‌ಇಂಟೆAಡೆAಟ್ ಆಫ್ ಪೋಲೀಸ್ ಅಶೋಕ್ ಕೆ.ವಿ. ಐಪಿಎಸ್.,…

Read More

ತುಮಕೂರು ನಾಯಿಗಳಿಗೆ ರೇಬೀಸ್ ಲಸಿಕೆ ನೀಡುವಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವAತೆ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ನಡುವಳಿಯ ರೀತ್ಯ ಕ್ಯೆಗೊಂಡಿರುವ ಕ್ರಮಗಳ ಪರಿಶೀಲನೆ ಮಾಡಿದ ಅವರು, ಯಾವುದೇ ಸಭೆಯಲ್ಲಿ ನಿರ್ಣಯಿಸಿದ ನಡವಳಿಗಳನ್ನು ಸಮಗ್ರ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘ ಸದಸ್ಯ ಕಾರ್ಯದರ್ಶಿ ಡಾ.ಗೀರಿಶ್ ಬಾಬು ರೆಡ್ಡಿ ಮಾತನಾಡಿ, ತುಮಕೂರು ನಗರದಲ್ಲಿ ೨೦೨೦ರ ಪ್ರಾಣಿ ಗಣತಿ ಅನುಸಾರ ಎರಡು ಸಾವಿರ ನಾಯಿಗಳಿದ್ದು, ಪ್ರಸ್ತುತ ಸುಮಾರು ಹತ್ತು ಸಾವಿರ…

Read More

ಬೆಳಗಾವಿ ವನ್ಯ ಜೀವಿಗಳಿಗೆ ಸಂಬAಧ ಪಟ್ಟ ವಸ್ತುಗಳು ಮನೆಯಲ್ಲಿದ್ದರೆ ಯಾರೂ ಭಯಪಡವು ಅಗತ್ಯವಿಲ್ಲ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ – ಬಿ.ಸುರೇಶಗೌಡ ರಾಜ್ಯದಲ್ಲಿ ಅನೇಕರು ಪೂರ್ವಜರ ಕಾಲದಿಂದಲೂ ಕೂಡ ಕೆಲವು ಮನೆಗಳಲ್ಲಿ ಇಂದಿಗೂ ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತಿತರ ವನ್ಯಜೀವಿಗಳ ಪರಿಕರಗಳನ್ನು ಮನೆಗಳ ಗೋಡೆ ಮತ್ತು ಕಂಬಗಳಲ್ಲಿ ಅಳವಡಿಸಿರುವುದು ಕೇಳಿ ಬಂದಿದೆ. ಇದರಿಂದ ಇತ್ತೀಚೆಗೆ ಹುಲಿ ಉಗುರು ಪ್ರಕರಣ ಬೆಳಕಿಗೆ ಬಂದಾಗಿನಿAದ ಈ ವಿಚಾರವಾಗಿ ಜನ ಭಯಭೀತರಾಗಿದ್ದಾರೆ. ಆದ್ದರಿಂದ ಮನೆಗಳಲ್ಲಿರುವ ಜಿಂಕೆ ಕೊಂಬು, ಕಾಡುಕೋಣದ ಕೊಂಬುಗಳನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರದ ಗಮನದಲ್ಲಿದೆಯೇ? ಎಂಬ ಕುರಿತಂತೆ ನಿಯಮ ೭೩ ರಡಿ ಮಂಗಳವಾರ ಸರ್ಕಾರದ ಗಮನ ಸೆಳೆದರು . ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಈ ಬಗ್ಗೆ ಗಮನ ಸೆಳೆದರು. ಈ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮತ್ತು ಸಕ್ರಮೀಕರಣ ಗೊಳಿಸಿಕೊಳ್ಳಲು ಸಾಕಷ್ಠು ಸಮಯಾವಾಕಾಶ ನೀಡಿತ್ತಾದರೂ ಕೂಡಾ…

Read More

ಕೊರಟಗೆರೆ ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಂದ ಕೊರಟಗೆರೆ ತಾಲ್ಲೂಕು ಕೋಳಾಲ ಪೋಲೀಸ್ ಠಾಣೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರು, ಮುಖಂಡರು ಹಾಗೂ ರೈತರು ತಮ್ಮ ಅಹವಾಲುಗಳನ್ನು ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ. ಯವರಿಗೆ ನೀಡಿದರು, ಇದರಲ್ಲಿ ಬಹತೇಕ ಜಮೀನು ವಿವಾದ, ದಾರಿ, ವಾರಸತ್ವದ ಬಗ್ಗೆ ದೂರುಗಳಿದ್ದವು ಈ ದೂರು ತಂದವರಲ್ಲಿ ಹೆಚ್ಚಿನವರು ವಯೋವೃದ್ದರಿದ್ದರು ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾ ಎಸ್.ಪಿ.ರವರು ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ರೈತರು ಕೆಲವು ತಿಂಗಳುಗಳಿAದ ಕೋಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಬೋರ್‌ವೆಲ್ ಪಂಪ್‌ಸೆಟ್‌ನ ಕೇಬಲ್ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿದರು, ಸಾರ್ವಜನಿಕರು ಸರಗಳ್ಳತನದ ಬಗ್ಗೆ ದೂರು ಹೇಳಿದರು. ಸಭೆಯಲ್ಲಿ ಕೋಳಾಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು, ಕೋಳಾಲ ಬಸ್ಟಾಂಡ್ ಅನಧಿಕೃತ ಅಂಗಡಿ, ರಸ್ತೆ ಬದಿ ವ್ಯಾಪಾರದಿಂದ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಒಂದೇ ವಿಷಯದ ಸಿವಿಲ್ ವಿವಾದಗಳಿಗೆ ಪದೆ ಪದೆ ದಾಖಲು…

Read More