Author: News Desk Benkiyabale

ಕುಣಿಗಲ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಪಟ್ಟಣದ ಕೆಆರ್‌ಎಸ್ ಅಗ್ರಹಾರ ಹೊಸಬಡವಣೆ, ಬಾಲಕರ ವಸತಿ ನಿಲಯ ಸಮೀಪದಲ್ಲಿ ಈ ಘಟನೆ ನಡೆದಿದೆ. ತುಮಕೂರು ತಾಲೂಕು ಹೆಬ್ಬರು ಹೋಬಳಿ, ಜಲ್ಲಿಪಾಳ್ಯ ಗ್ರಾಮದ ಅಂದಾನಯ್ಯ ಸೇರಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಅAದಾನಯ್ಯ ಬಾಲಕರ ವಸತಿ ಗೃಹ ಸಮೀಪ ಮನೆಯೊಂದನ್ನು ಬಾಡಿಗೆ ಪಡೆದು ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ನವೀನ್‌ಗೌಡ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಅಂದಾನಯ್ಯ ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

Read More

ಹುಳಿಯಾರು: ಅವೈಜ್ಞಾನಿಕ ಮತ್ತು ಅಪೂರ್ಣ ಚರಂಡಿ ಕಾಮಗಾರಿಯಿಂದಾಗಿ ಮನೆ ಮತ್ತು ಅಂಗಡಿಗಳಿಗೆ ಮಳೆ ಹಾಗೂ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಠಿಸುತ್ತಿದ್ದರೂ ಸಹ ಹುಳಿಯಾರು ಪಪಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಮತ್ತು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಹುಳಿಯಾರಿನ ಸಂತೆ ಬೀದಿಯಲ್ಲಿನ ಮನೆಗಳ ಕೊಳಚೆ ನೀರು ಹರಿಸಲು ಹುಳಿಯಾರು ಕೆರೆಯ ತೂಬು ನಾಲೆಯನ್ನೇ ಚರಂಡಿಯನ್ನಾಗಿ ಮಾರ್ಪಡಿಸಿದಾಗಲೇ ಇಲ್ಲಿನ ನಿವಾಸಿಗಳು ತಕರಾರು ತೆಗೆದಿದ್ದರು. ನಾಲೆಯನ್ನು ಈಗಾಗಲೇ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿದ್ದಾರೆ, ಮೊದಲು ಅವುಗಳನ್ನು ತೆರವು ಮಾಡಿ ನಂತರ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವುದನ್ನು ಪರೀಕ್ಷಿಸಿ ಚರಂಡಿ ಮಾಡಿ ಎಂಬ ಸಲಹೆಯನ್ನೂ ಸಹ ಕೊಟ್ಟಿದ್ದರು. ಅಲ್ಲಿನ ನಿವಾಸಿಗಳ ಸಲಹೆ ಕೇಳದೆ ಚರಂಡಿ ಕಾಮಗಾರಿ ಆರಂಭಿಸಿದರು. ಸಂತೆ ಬೀದಿಯಿಂದ ಒತ್ತುವರಿ ಮಾಡಿಕೊಂಡು ಉಳಿಸಿರುವ ಅಳಿದುಳಿದ ಜಾಗದಲ್ಲೇ ಚರಂಡಿ ಕಾಮಗಾರಿ ಮಾಡಿದರು. ಆದರೆ ರಾಮಗೋಪಾಲ್ ಸರ್ಕಲ್ ಬಳಿ ನಾಲೆ ಸಂಪೂರ್ಣವಾಗಿ ಒತ್ತುವಾರಿಯಾಗಿ ಮುಂದೆ ಚರಂಡಿ ಕಾಮಗಾರಿ ಮಾಡಲಾಗದೆ ಸ್ಥಗಿತಗೊಳಿಸಿದರು. ಆಗ ಅಲ್ಲಿನ ನಿವಾಸಿಗಳು ಕಾಮಗಾರಿ ಪೂರ್ಣ…

Read More

ತುಮಕೂರು ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ತಲೆದೋರುವುದು ಸಹಜ,ಸಣ್ಣಪುಟ್ಟ ಸಮಸ್ಯೆಗಳು,ಭಿನ್ನಾಭಿಪ್ರಾಯಗಳು ಬರುವುದು ಸಹಜ,ಸತಿ-ಪತಿಗಳು ಅವುಗಳನ್ನೇ ದೊಡ್ಡದು ಮಾಡಿಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ತರವಲ್ಲ,ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನೂ ಮರೆತು ಮುಂದಿನ ಜೀವನ ನಡೆಸಬೇಕು,ಮಕ್ಕಳ ಮುಂದಿನ ಓದು,ಮದುವೆ,ಇತ್ಯಾದಿ ಜವಾಬ್ದಾರಿಗಳು ತಂದೆ-ತಾಯಿಗಳಾದ ನಿಮ್ಮ ಮೇಲಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರರವರು ಹೇಳಿದರು. ಅವರು ಇಂದು ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ನಲ್ಲಿ ಪುನರ್ ಒಂದಾದ ಸತಿ-ಪತಿಗಳನ್ನು ಕುರಿತು ಮಾತನಾಡಿದರು. ವಿವಾಹ ವಿಚ್ಛೇದನಕ್ಕೆ ಸದರಿ ನ್ಯಾಯಾಲಯದಲ್ಲಿ ಹಲವಾರು ಜನ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕಳೆದ ಒಂದು ತಿಂಗಳಿನಿAದ ಅರ್ಜಿದಾರರ ಪರ ವಕೀಲರು ಮತ್ತು ಎದುರುರಾರರ ವಕೀಲರು,ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರು ಎರಡೂ ಕಡೆಯವರಿಗೆ ಬುದ್ಧಿ ಹೇಳಿದ ಪರಿಣಾಮ ಇಂದು ೧೦ ಜೋಡಿಗಳು ಮತ್ತೆ ಹಾರ ಬದಲಾಯಿಸಿಕೊಂಡು, ಪರಸ್ಪರ ಸಿಹಿ ತಿನ್ನಿಸಿ ಮತ್ತೆ ಒಂದಾದ ಘಟನೆಗೆ ಇಲ್ಲಿನ ಜಿಲ್ಲಾ ನ್ಯಾಯಾಧೀಶರು,ವಕೀಲರುಗಳು ಸಾಕ್ಷಿಯಾದರು. ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮುನಿರಾಜರವರು…

Read More

ತುಮಕೂರು: ತಾಲೂಕು ಬಿದರೆಕಟ್ಟೆಯಲ್ಲಿ ನಿರ್ಮಾಣ ವಾಗುತ್ತಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗAಗಾಧರಯ್ಯ ಅವರ ಹೆಸರಿಡಬೇಕೆಂದು ಕನ್ನಡಸೇನೆ, ಹಾಗೂ ವಿವಿಧ ಕನ್ನಡಪರ, ದಲಿತ ಸಂಘಟನೆಗಳ ಮುಖಂಡರು ಇಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮತ್ತು ರಿಜಿಸ್ಟಾರ್ ನಾಯಿದಾ ಜಮ್ಹ್, ಜಮ್ಹ್ ಅವರಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಉಮೇಶ್, ಪಿ.ಎನ್.ರಾಮಯ್ಯ, ವಕೀಲ ನಾಗೇಶ್ ಸೇರಿದಂತೆ ಹಲವು ಮುಖಂಡರುಗಳು ನಿಯೋಗ ತೆರಳಿ, ಕುಲಪತಿಗಳು ಮತ್ತು ಕುಲಸಚಿವರಿಗೆ ಮನವಿ ಸಲ್ಲಿಸದ್ದಾರೆ. ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್,ಕುಣಿಗಲ್ ತಾಲೂಕು ಅಮೃತೂರಿನಲ್ಲಿ ಹುಟ್ಟಿದ ಡಾ.ಹೆಚ್.ಎಮ್.ಗಂಗಾಧರಯ್ಯ ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮಗಾಂಧಿ, ವಿನೋಭಾ ಭಾವೆ ಅವರ ಕರೆಗಳಿಗೆ ಓಗಟ್ಟು, ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ,ಗ್ರಾಮೀಣ ಭಾಗದ ಬಡ,ದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸನಿವಾಸ ಪ್ರೌಢಶಾಲೆಯೊಂದನ್ನು ಆರಂಭಿಸಿ,ಹAತ ಹಂತವಾಗಿ ಶಾಲಾ, ಕಾಲೇಜುಗಳ ಜೊತೆಗೆ, ಮೆಡಿಕಲ್, ಇಂಜನಿಯರಿAಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಲಕ್ಷಾಂತರ ಮಕ್ಕಳಿಗೆ…

Read More

ತುಮಕೂರು: ಹಲವಾರು ವರ್ಷಗಳಿಂದ ತಮ್ಮ ಸ್ವತ್ತಿನ ಹೆಸರು ತಿದ್ದುಪಡಿ, ಅಳತೆಯಲ್ಲಿನ ವೆತ್ಯಾಸ, ಜನನ, ಮರಣ ಪತ್ರದಲ್ಲಿ ದಿನಾಂಕ, ಹೆಸರು ತಿದ್ದುಪಡಿ, ನಲ್ಲಿ, ಮನೆ ಕಂದಾಯ, ಯುಜಿಡಿ ಸಂಪರ್ಕ ಸೇರಿದಂತೆ ಹಲವು ಸೇವೆಯನ್ನು ತ್ವರಿತವಾಗಿ ಜನರಿಗೆ ಒದಗಿಸುವ ಉದ್ದೇಶದಿಂದ ಪಾಲಿಕೆವತಿಯಿಂದ ತ್ವರಿತ ಸೇವೆ ಆಭಿಯಾನವನ್ನು ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಯುಕ್ತರಾದ ಆಶ್ವಿಜ ತಿಳಿಸಿದ್ದಾರೆ. ಅಭಿಯಾನದ ಮೇಲುಸ್ತುವಾರಿ ವಹಿಸಿಕೊಂಡು ಸ್ತಳದಲ್ಲಿಯೇ ಹಾಜರಿದ್ದು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಆಯುಕ್ತರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಹತ್ತಾರು ವರ್ಷಗಳಿಂದ ತಮ್ಮ ಆಸ್ತಿ, ಜನನ, ಮರಣ ಪತ್ರಗಳಲ್ಲಿ ಆಗಿರುವ ಸಣ್ಣ, ಪುಟ್ಟ ತಪ್ಪುಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತಿದ್ದಾರೆ. ಇಂತಹವರಿಗೆ ಅನುಕೂಲವಾಗಲೆಂದು ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು. ಇAದು ಪಾಲಿಕೆಯ ಅವರಣದಲ್ಲಿ ೬ ಕೌಂಟರ್‌ಗಳನ್ನು ತೆರೆದು,ಜನನ,ಮರಣ,ಅಳತೆಯಲ್ಲಿನ ವೆತ್ಯಾಸ,ಮತದಾರರ ನೊಂದಣಿ, ನಲ್ಲಿ ಮತ್ತು ಯುಜಿಡಿ ಸಮಪರ್ಕ,ಟ್ರೆಡ್ ಲೈಸನ್ಸ್ಗೆ ಸಂಬAಧಿಸಿದAತೆ ದಾಖಲೆಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.ಹಿರಿಯ ನಾಗರಿಕರಿಗೆ ಪ್ರತ್ಯೇಕ ಲೈನ್ ಮಾಡಿ,ತ್ವರಿತವಾಗಿ ಅವರ ಕೆಲಸಗಳನ್ನು ಪೂರೈಸಿಕೊಡಲಾಗುತ್ತಿದೆ. ಮರುಪರಿಶೀಲನೆ…

Read More

ತುಮಕೂರು: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಮತ್ತು ಅನುವಂಶೀಯ ನ್ಯೂನತೆಗಳ ಕಾರಣದಿಂದ ಕಾಣಿಸಿಕೊಳ್ಳುವ ರೋಗದಿಂದ ಮಾರಾಣಾಂತಿಕ ಶಸ್ತçಚಿಕಿತ್ಸಾ ರೋಗಗಳ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಬಳಕೆಯನ್ನು ಅನುಸರಿಸಿಕೊಳ್ಳಲು ವೈದ್ಯ ಸಮುದಾಯ ಗಮನಹರಿಸುವ ಅಗತ್ಯವಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್‌ಪೀಡಿಯಾಟ್ರಿಕ್ ಸರ್ಜನ್ಸ್ (ಭಾರತೀಯ ಮಕ್ಕಳ ಶಸ್ತçಚಿಕಿತ್ಸಕರು ಸಂಘ) ಅಧ್ಯಕ್ಷರು ಹಾಗೂ ಚೆನ್ನೈ ಪೋರೂರ್‌ನಲ್ಲಿರುವ ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಸಂಸ್ಥೆ & ಸಂಶೋಧನಾಕೇAದ್ರದ ಪೀಡಿಯಾಟ್ರಿಕ್ ವಿಭಾಗದ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ ಆದ ಡಾ. ರಮೇಶ್ ಬಾಬು ಅಭಿಪ್ರಾಯಪಟ್ಟರು. ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏರ್ಪಟ್ಟ ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಗಳ ಕರ್ನಾಟಕಘಟಕದ ೧೮ ನೇ ವರ್ಷದ (ಪೆಸುಕಾನ್-೨೩) ಮೂರು ದಿನಗಳ ರಾಷ್ಟಿçÃಯಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಕರ್ನಾಟಕ ಶಾಖೆಯಅಧ್ಯಕ್ಷರಾದಡಾ.ನರೇಂದ್ರಬಾಬು ಮಾತನಾಡಿ,ದರು. ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ಕರ್ನಾಟಕ ಶಾಖೆಯ ಕಾರ್ಯದರ್ಶಿ, ಸಂಘಟನಾ ಅಧ್ಯಕ್ಷ ಹಾಗೂ ಶ್ರೀ ಸಿದ್ದಾರ್ಥ…

Read More

ಹುಳಿಯಾರು ಬೀದಿಬದಿ ವ್ಯಾಪಾರಿಗಳು, ಖಾಸಗಿ ಬಸ್ ಏಜೆಂಟರು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡ ಭಾಷೆ, ನೆಲ, ಜಲದ ಸಾರ್ವಭೌಮತ್ವ ಸಾರುತ್ತಿದ್ದಾg. ಅಲ್ಲದೆೆ ಕನ್ನಡ ಭಾಷೆಯ ಸೊಗಡು ಉಳಿಸಲು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಶ್ಲಾಘಿಸಿದರು. ಹುಳಿಯಾರು ಬಸ್ ನಿಲ್ದಾಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬದುಕಿಗಾಗಿ ನಾವು ಎಷ್ಟೇ ಭಾಷೆಗಳನ್ನು ಕಲಿತರೂ, ಎಷ್ಟೇ ದೇಶ ಸುತ್ತಿದರೂ ಮಾತೃಭಾಷೆಯ ಮುಂದೆ ಯಾವುದೋ ದೊಡ್ಡದಲ್ಲ. ಅದರಲ್ಲೂ ಶಾಸ್ತಿçÃಯ ಭಾಷೆಯಾಗಿರುವ ಕನ್ನಡವು ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದುದು. ಸಾರಸ್ವತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಮ್ಮ ಭಾಷೆಗೆ, ಸಾಹಿತ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಹೊಂದಿದೆ. ಆದರೂ ಇತ್ತೀಚೆಗೆ ಕನ್ನಡದ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ಮಾತೃಭಾಷೆ ಕಲಿಕೆ ಬಗ್ಗೆ ಕೀಳರಿಮೆ ಇರಬಾರದು. ಈ ನಿಟ್ಟಿನಲ್ಲಿ ಪೋಷರು ನಾಡುನುಡಿಯ ಮಹತ್ವವನ್ನು…

Read More

ತಿಪಟೂರು ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ತಿಪಟೂರಿನಲ್ಲಿ ಪ್ರಾರಂಭವಾಗಿರುವ ನಮ್ಮ ಆರೋಗ್ಯ ಕೇಂದ್ರಗಳಿಗೆ ಯಶಸ್ವಿ ಮೊದಲ ವರ್ಷದ ಹರ್ಷ. ನಮ್ಮ ಆರೋಗ್ಯ ಕೇಂದ್ರಗಳು ಆರಂಭವಾಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ನಾವು ನಿಜಕ್ಕೂ ಹೆಮ್ಮೆಪಡುತ್ತೇವೆ. ತಿಪಟೂರಿನ ಹಾಲ್ಕುರಿಕೆ ಗ್ರಾಮದಲ್ಲಿ ಮೊದಲ ಬಾರಿಗೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಯಿತು. ನಂತರ ಕೆ.ಬಿ ಕ್ರಾಸ್ ನಲ್ಲಿ ಇನ್ನೊಂದು ಆರೋಗ್ಯ ಕೇಂದ್ರದ ಘಟಕವನ್ನು ಆರಂಭಿಸಲಾಯಿತು. ಈ ಎರಡು ಘಟಕಗಳು ನೂರಾರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಇಂದು ವರ್ಷದಿಂದ ಯಶಸ್ವಿಯಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಖಾಸಗಿ ಯೋಜನೆಯಾಗಿದೆ ಎಂಬುದು ನಮ್ಮ ಹೆಮ್ಮೆ. ‘ನಮ್ಮ ಆರೋಗ್ಯ ಕೇಂದ್ರ’ ಸ್ಥಾಪಿಸಿದ ಕೀರ್ತಿ ಜನಸ್ಪಂದನ ಟ್ರಸ್ಟ್ ಗೆ ಸಲ್ಲುತ್ತದೆ. ಜನಸ್ಪಂದನ ಟ್ರಸ್ಟ್ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಟುಡ, ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕರು ಮತ್ತು…

Read More

ತುಮಕೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ನೆಪದಲ್ಲಿ ವಸೂಲಿಗಿಳಿದ ಪೋಲೀಸರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ, ಪೂಜೆಯ ಹೆಸರಿನಲ್ಲಿ ಲಕ್ಷಗಟ್ಟಲೆ ವಸೂಲಿಗಿಳಿದ ಕೆಲವು ಪೋಲೀಸರ ವರ್ತನೆ ನೋಡಲಾಗುತ್ತಿಲ್ಲ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರದ ಡಿವೈಎಸ್ಪಿ ಮತ್ತು ಕ್ಯಾತ್ಸಂದ್ರ ವೃತ್ತ ನಿರೀಕ್ಷಕರು ಆಯುಧ ಪೂಜೆಯ ಹೆಸರಿನಲ್ಲಿ ಹಣ ವಸೂಲಿ ಮಾಡದಂತೆ ಲಿಖಿತವಾಗಿ ಮೆಮೋ ಹಾಕಿದ್ದರೂ ಸಹ ಕ್ಯಾತ್ಸಂದ್ರ ಕಾನೂನು ಸುವ್ಯವಸ್ಥೆಯ ಸಬ್ ಇನ್ಸ್ಪೆಕ್ಟರ್ ಚೇತನ್ ರವರು ಹಿರಿಯ ಅಧಿಕಾರಿಗಳ ಆ ದೇಶವನ್ನು ಧಿಕ್ಕರಿಸಿ ತಮ್ಮ ಠಾಣೆಯ ಎಎಸ್‌ಐ ಸೇರಿದಂತೆ ಒಟ್ಟು ನಾಲ್ವರು ಸಿಬ್ಬಂದಿ ಗಳಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡಿದ್ದಾರೆ, ಮತ್ತು ಮತ್ತೆ ವಸೂಲಿಯನ್ನು ಮುಂದು ವರಿಸುತ್ತಿದ್ದಾರೆ, ಅಕ್ರಮ ಅಡ್ಡೆಗಳು,ಧಂದೆಕೋರರು, ಮೈಮಾರಿ ಜೀವನ ನೆಡೆಸುವವರು. ಅಕ್ರಮ ಮಸಾಜ್ ಪಾರ್ಲರ್ಗಳು ಸೇರಿ ದಂತೆ ವಿವಿಧ ಕಂಪನಿಗಳು ಅಂಗಡಿಗಳು ವಾಹನ ಮಾಲಿಕರು ಕ್ರಷ್ಷರ್ ಮಾಲಿಕರು ಗ್ರಾನೈಟ್ ಮಾಲಿಕರು ಸೇರಿದಂತೆ ಅಕ್ರಮ ಮತ್ತು ಸಕ್ರಮವಾಗಿ ನೆಡೆಸುವ ಎಲ್ಲಾ ವ್ಯವಹಾರಸ್ಥರು ಜೂಜು ಅಡ್ಡೆಗಳು ಹಾಗೂ ಇನ್ನಿತರೆ ಕಡೆಗಳಲ್ಲಿ…

Read More

ತುಮಕೂರು ೨೦೨೩ರ ಅಕ್ಟೋಬರ್ ಮಾಹೆಯ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಸಾಲ ಮತ್ತು ಸಬ್ಸಿಡಿ ಮಂಜೂರಾತಿ ಅರ್ಜಿಗಳನ್ನು ಕಡ್ಡಾಯವಾಗಿ ಇತ್ಯರ್ಥಪಡಿಸದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಎಸ್‌ಎಲ್‌ಬಿಸಿ(ರಾಜ್ಯ ಮಟ್ಟದ ಬ್ಯಾಂರ‍್ಸ್ಗಳ ಸಮಿತಿ) ಹಾಗೂ ಆರ್‌ಬಿಐಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಹೇಳಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನೆ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಯೋಜನೆಗಳು, ಕಳೆದ ತ್ರೈಮಾಸಿಕದÀಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಶೇಕಡಾವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು, ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎAವೈ), ಎನ್.ಎಲ್.ಎಂ, ಪಿಎಂಇಜಿಪಿ, ಉದ್ಯೋಗಿನಿ, ಪಿಎಂಎವೈ, ಎಪಿವೈ, ಪಿ.ಎಂ ಸ್ವನಿಧಿ ಮತ್ತು ವಸತಿ ಯೋಜನೆ ಮೊದಲಾದ ಯೋಜನೆಗಳಡಿ ವಿವಿಧ ಇಲಾಖೆಗಳಿಂದ ಬ್ಯಾಂಕುಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಸಮಾಜದ ಬಡ ಹಾಗೂ ಅಶಕ್ತ…

Read More