Author: News Desk Benkiyabale

  ಚಿಕ್ಕನಾಯಕನಹಳ್ಳಿ:       ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಅನುಮಾನಸ್ಪದವಾಗಿ ಸತ್ತಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.       ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ಎಂಬುವವರೇ ಸಾವಿಗೀಡಾಗಿರುವ ವ್ಯಕ್ತಿ. ಹಂದನಕೆರೆ ಹುಚ್ಚನಹಳ್ಳಿ ಸಮೀಪದ ಅರಳಿಮರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ಮೃತ ಧನಂಜಯ್ ಬಿದ್ದು ಸಂಶಯಾಸ್ಪದ ಸಾವು ಸಂಭವಿಸಿದೆ.       ಸುದ್ದಿ ತಿಳಿದೊಡನೆ ಹಂದನಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಹಿಡಿಕೋಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಧನಂಜಯ್ ಕೆ.ಇ.ಬಿ ವ್ಯಾನ್ ಡ್ರೈವರ್‍ಯಾಗಿ ಕೆಲಸ ನಿರ್ವಹಿಸುತ್ತಿದ್ದ ತಂದೆ ವೀರಭದ್ರಯ್ಯ ಸಾವನ್ನಪ್ಪಿದ ನಂತರ ಕುಟುಂಬದ ಜವಬ್ದಾರಿ ಇವನದ್ದಾಗಿತ್ತು ಮೃತನಿಗೆ ತಾಯಿ ಮತ್ತು ಅಕ್ಕ ಇದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು :       ಅನಾರೋಗ್ಯದ ಕಾರಣ ನೀಡಿ ವರ್ಗಾವಣೆಗೆ ಕೋರುವ ಪೊಲೀಸರನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕ ಸುತ್ತೋಲೆ ಹೊರಡಿಸಿದ್ದಾರೆ.       ಅನಾರೋಗ್ಯದ ನಿಮಿತ್ತ ಬೇರೆ ಠಾಣೆಗಳಿಗೆ ವರ್ಗಾವಣೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಕಾನ್‌ಸ್ಟೇಬಲ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆ ವೈದ್ಯಕೀಯ ದಾಖಲೆಗಳನ್ನು ಸಹ ಲಗತ್ತಿಸಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸಿದಾಗ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಇನ್ನಿತರೆ ಗುರುತರವಲ್ಲದ ಆರೋಗ್ಯ ಸಮಸ್ಯೆಯನ್ನು ನೀಡಿ ಪೊಲೀಸರು ವರ್ಗಾವಣೆ ಬಯಸಿರುವುದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.        ವೈಯಕ್ತಿಕ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ನಿಯುಕ್ತಗೊಳಿಸಿರುವ ಠಾಣೆಗಳಲ್ಲಿ ಕನಿಷ್ಠ ವರ್ಗಾವಣೆ ಅವಧಿಯನ್ನು ಪೂರ್ಣಗೊಳಿಸದ ಎಎಸ್‌ಐ, ಎಚ್‌ಸಿ ಹಾಗೂ ಪಿಸಿ ಅವರು ವರ್ಗಾವಣೆಗೆ ಇನ್ನು ಮುಂದೆ ಕಚೇರಿಗೆ (ಎಸ್ಪಿ ಕಚೇರಿ) ನೇರವಾಗಿ ಮನವಿಗಳನ್ನು ಸಲ್ಲಿಸಿದರೆ…

Read More

ಶಿವಮೊಗ್ಗ:        ಪ್ರೇಮಿಗಳಿಬ್ಬರು ಒಟ್ಟಿಗೆ ಇದ್ದ ಅಶ್ಲೀಲ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಭೀರವಾಗಿದೆ.       ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್‍ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡಲು ನಿರಾಕರಿಸಿದರೆ ವಿಡಿಯೋವನ್ನು ವಾಟ್ಸಪ್, ಫೇಸ್ ಬುಕ್‍ಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ.        ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರದಂದು ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದು, ಯುವತಿ ಸ್ಥಿತಿ ಚಿಂತಾಜನಕವಾಗಿದೆ.  

Read More

ದೇವನಹಳ್ಳಿ:             ತನ್ನ ಅಕ್ಕನನ್ನೇ ಪ್ರೀತಿಸಿ ಮದುವೆಯಾಗಿದ್ದ ಅನ್ಯ ಜಾತಿಯ ಸ್ನೇಹಿತನನ್ನು  ಯುವಕನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.       ಗ್ರಾಮದ ಸೊಸೈಟಿ ಪಕ್ಕದಲ್ಲಿರುವ ಹೂವಿನ ತೋಟದಲ್ಲಿ ಮುಚ್ಚಿನಿಂದ ಕೊಚ್ಚಿಹಾಕಲಾಗಿದ್ದ ಶವ ಪತ್ತೆಯಾಗಿದೆ. ಮೃತನನ್ನು ಹರೀಶ್​ ಎಂದು ಗುರುತಿಸಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಹರೀಶ್​ನನ್ನು  ಜಾತಿ  ಕಾರಣದಿಂದಲೇ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹರೀಶ್​ ಸ್ನೇಹಿತನೇ ಆದ ನವೀನ್​ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಚನ್ನರಾಯಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣ ಹಿನ್ನೆಲೆ:       ಬಿದಲೂರು ಗ್ರಾಮದ ಹರೀಶ ಹಾಗೂ ನಲ್ಲೂರು ಗ್ರಾಮದ ನವೀನ್​ ಇಬ್ಬರೂ ಸ್ನೇಹಿತರು. ನವೀನ್​ನ ಅಕ್ಕಳನ್ನು ಹರೀಶ್ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಯ ವಿಷಯ ಹುಡುಗಿ ಮನೆಗೆ ತಿಳಿಯಿತು. ಅನ್ಯ ಜಾತಿ ಹುಡುಗನಾಗಿದ್ದರಿಂದ ಮದುವೆಗೆ ಹುಡುಗಿಯ ಮನೆಯವರು ಒಪ್ಪಲಿಲ್ಲ. ಎಂಟು ತಿಂಗಳ ಹಿಂದೆ ಇಬ್ಬರೂ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಮದುವೆಯಾಗಿದ್ದರು.…

Read More

ತುಮಕೂರು:       ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರವೂ ಸ್ಪಂದಿಸಬೇಕಿದೆ. ಆದರೆ ರೈತರ ಸಮಸ್ಯೆ ಹೊತ್ತು ಕೇಂದ್ರಕ್ಕೆ ಹೋದಾಗ ಯಾವುದೇ ರೀತಿಯಲ್ಲೂ ಸ್ಪಂದಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಆರೋಪಿಸಿದರು.       ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ಕೇಂದ್ರ ಸರ್ಕಾರ ನಿಗದಿಪಡಿಸುವುದರಿಂದ ಅವರು ಸಹ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಿದೆ. ಆದರೆ ತಮಗೂಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕೇಂದ್ರ ವರ್ತಿಸುತ್ತಿದೆ. ಹೀಗಿರುವಾಗ ರಾಜ್ಯ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.       ರಾಜ್ಯ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಾಡುತ್ತಾರೆ. ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದರೆ ಇವಱ್ಯಾರಿಗೂ ರೈತರ ಪರವಾದ ಕಾಳಜಿ ಇಲ್ಲದಿರುವುದು ಕಂಡು ಬರುತ್ತದೆ ಎಂದರು       ಕೇಂದ್ರ ಸರ್ಕಾರ ನಿಗದಿಪಡಿಸುವ ಕಬ್ಬಿನ ಎಫ್.ಆರ್.ಪಿ. ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭದಲ್ಲಿ…

Read More

ತುಮಕೂರು:       ಕ್ರಿಶ್ತಪೂರ್ವ 571ರಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರು ಪ್ರಪಂಚದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾರಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.       ನಗರದ ಬಾರ್‍ಲೈನ್ ರಸ್ತೆಯ ಮೆಕ್ಕಾ ಮಸೀದಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಅಲ್ಲಾಹನ ಪ್ರತಿನಿಧಿಯಾಗಿ ಧರೆಗೆ ಬಂದು, ಮನುಕುಲದ ಸಮಸ್ಯೆಗಳಿಗೆ ತತ್ವ ಸಂದೇಶಗಳ ಮೂಲಕ ಪರಿಹಾರವನ್ನು ಸೂಚಿಸಿದ್ದಾರೆ.ಪ್ರವಾದಿಗಳು ಬೋಧಿಸಿದ ಪರಿಹಾರ ಸೂತ್ರಗಳು ಮುಸ್ಲಿಂ ಸಮುದಾಯಕ್ಕೆ ಸಿಮೀತವಲ್ಲ. ಇಡೀ ಮನುಕುಲಕ್ಕೆ ಸೇರಿದ್ದು.ಅಂದು ಅವರು ಬೋಧಿಸಿದ ಪರಿಹಾರ ಸೂತ್ರಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಸಹೋದರ ರಂತೆ ಬಾಳಬೇಕಾಗಿದೆ ಎಂದರು.        ಇಂದು ಶಾಂತಿಯ ಸಂದೇಶಗಳ ದೃಷ್ಠಿಕೋನ ಬದಲಾಗಿದೆ.ದೇಶ,ದೇಶಗಳ ನಡುವೆ ದ್ವೇಷ,ಅಸೂಯೆಗಳು ತುಂಬಿ ತುಳುಕುತಿದ್ದು, ಕಂದಕಗಳು ಸೃಷ್ಟಿಯಾಗಿವೆ.ಪ್ರವಾದಿಗಳ ಶಾಂತಿ ಮತ್ತು ನೆಮ್ಮದಿಯ ಸಂದೇಶಗಳನ್ನು ಅರ್ಥ ಮಾಡಿಕೊಂಡು ಬದುಕಿದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಡಾ.ಜಿ.ಪರಮೇಶ್ವರ್…

Read More

ತುಮಕೂರು:        ರೈತ ಮಹಿಳೆಯ ಚಾರಿತ್ರ್ಯವನ್ನು ಪ್ರಶ್ನಿಸಿದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ನೀಡಲಿ ಎಂದು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‍ರವರು ಕಿಡಿ ಕಾರಿದ್ದಾರೆ.       ಅವರು ಬಿ.ಜೆ.ಪಿಯಿಂದ ತುಮಕೂರು ಟೌನ್ ಹಾಲ್ ಸರ್ಕಲ್‍ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತ ನಾಡುತ್ತಾ ಕಬ್ಬು ಬೆಳೆಗಾರರ ಹಣವನ್ನು ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿಯ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದ ರೈತ ಮಹಿಳೆಯ ಮೇಲೆ ತಮ್ಮ ಪೌರುಷದ ಮಾತನಾಡಿರುವುದು ಖಂಡನೀಯ ಇದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಎಂದು ಕಿಡಿಕಾರಿದರು.       ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುವ ಡೋಂಗಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರೈತರನ್ನು ಗುಂಡಾಗಳು ಎಂದು ಕರೆದಿರುವುದು ರಾಜ್ಯದ ರೈತ ಸಮೂಹಕ್ಕೆ…

Read More

 ತುಮಕೂರು:       ಗುತ್ತಿಗೆದಾರರಿಂದ ಲಂಚ ಪಡೆಯುವ ಸಂದರ್ಭದಲ್ಲಿ ತುಮಕೂರು ನಗರದ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮರಿಯಪ್ಪ(54) ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.       ಇಂದು  ಮಧ್ಯಾಹ್ನ 1.10 ಗಂಟೆ ಸಮಯದಲ್ಲಿ ಕಛೇರಿಯಲ್ಲಿ ವಸಂತನರಸಾಪುರದ ಗುತ್ತಿಗೆದಾರ ಜಗದೀಶಯ್ಯ ರವರಿಂದ 10 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿ ಪಿ ಐ ಹಾಲಪ್ಪರವರು ದಾಳಿ ನಡೆಸಿ ಹಣ ಮತ್ತು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.       ಬಲೆಗೆ ಬಿದ್ದಿರುವ ಮರಿಯಪ್ಪ ಅವರ ಮೇಲೆ ಮಹಾನಗರ ಪಾಲಿಕೆಯ ತಾಂತ್ರಿಕ ಶಾಖೆಯಲ್ಲಿ‌ ಸಾರ್ವಜನಿಕರಿಗೆ ಸರ್ಕಾರಿ ಕೆಲಸಕ್ಕೆ ವಿಳಂಬಮಾಡುತ್ತಿದ್ದು ಹಣ ನೀಡದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆಪಾದನೆಯಿತ್ತು. ಗುತ್ತಿಗೆದಾರರು ಹೆದರಿ ಯಾವುದೇ ರೀತಿಯ ಲಿಖಿತ ರೂಪದಲ್ಲಿ ದೂರು ನೀಡಿರಲಿಲ್ಲ. ಆದರೆ ಜಗಧೀಶ್ ನೀಡಿರುವ ದೂರನ್ನಾದರಿಸಿ ಹಣ ಪಡೆಯುವಾಗ ನೇರವಾಗಿ ಧಾಳಿ ನೆಡಸಿ ಬಂಧಿಸಲಾಗಿದೆ.       ಪರಿಸರ ಶಾಖೆಯ ಅಭಿಯಂತರರು ನಡೆದುಕೊಳ್ಳುವ ರೀತಿ…

Read More

ದೆಹಲಿ:        ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.       ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ ನಿರ್ಗಮಿಸಿದ ಕೇಜ್ರಿವಾಲ್​ ಮೇಲೆ ದೆಹಲಿಯ ನಾರಾಯಣ ಎಂಬಲ್ಲಿನ ಸರಿಸುಮಾರು 40 ವರ್ಷ ವಯಸ್ಸಿನ ಅನಿಲ್​ ಕುಮಾರ್​ ಶರ್ಮಾ ಎಂಬಾತ ದಾಳಿ ನಡೆಸಿದ್ದಾನೆ. ಆತನನ್ನು ಐಪಿ ಎಸ್ಟೇಟ್​ ಪೊಲೀಸರು ಬಂಧಿಸಿದ್ದಾರೆ.        ಅನಿಲ್ ಕುಮಾರ್​​ ಶರ್ಮಾ ಸಿಗರೇಟ್​ ಪ್ಯಾಕೆಟ್​ನಲ್ಲಿ ಖಾರದ ಪುಡಿಯನ್ನು ತುಂಬಿಕೊಂಡು ತಂದಿದ್ದ. ಪತ್ರವೊಂದನ್ನು ನೀಡಲು ಕಾದು ಕುಳಿತಿದ್ದ. ಕೇಜ್ರಿವಾಲ್​ ಅವರು ಕಚೇರಿಯಿಂದ ಬರುತ್ತಲೇ ಅವರ ಕಾಲಿಗೆರಗಿದ ಅನಿಲ್​ನನ್ನು ಕೇಜ್ರಿವಾಲ್​ ಬಗ್ಗಿ ಮೇಲೆತ್ತಲು ಪ್ರಯತ್ನಿಸಿದರು. ಆಗ ಅನಿಲ್​ ಕೇಜ್ರಿವಾಲ್​ ಮೇಲೆ ಖಾರದ ಪುಡಿ ಎರಚಿದ್ದಾನೆ. ಆದರೆ, ಕೇಜ್ರಿವಾಲ್​ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲ. ಕಣ್ಣಿಗೆ ಕನ್ನಡಕ ಹಾಕಿದ್ದರಿಂದ ಅವರು ಪಾರಾಗಿದ್ದಾರೆ. ಆದರೆ, ತಮ್ಮ ಕಣ್ಣನ್ನು…

Read More

ತುಮಕೂರು:     ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ರವರು ಸಭೆಯೊಂದರಲ್ಲಿ ನೀಡಿದ್ದ, ಬಿಸ್ಕೆಟ್ ತಿನ್ನುವ ವೇಳೆ ಕಬ್ಬಿಣದ ಮೊಳೆಯೊಂದು ಸಿಕ್ಕ ಹಿನ್ನೆಲೆಯಲ್ಲಿ, ಬಿಸ್ಕೆಟ್ ತಯಾರಿಸಿದ ಬೇಕರಿಯನ್ನೇ ಸೀಜ್ ಮಾಡುವಂತೆ ಆದೇಶ ಹೊರಡಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.         ನ. 30ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಮಧ್ಯೆ ಸಭೆಯಲ್ಲಿ ಭಾಗವಹಿಸಿದವರಿಗೆ ಬಿಸ್ಕೆಟ್​​​, ಕೇಕ್, ಚಿಪ್ಸ್ ಕೊಡಲಾಗಿತ್ತು.       ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್​​​ ತಿನ್ನಲು ಮುಂದಾದಾಗ ಅದರಲ್ಲಿ ಮೊಳೆ ಕಂಡುಬಂದಿದೆ. ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡ ಜಿಲ್ಲಾಧಿಕಾರಿ ಗಾಬರಿಯಾದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಯಾವ ಬೇಕರಿಯಿಂದ ಬಿಸ್ಕೆಟ್ ಮತ್ತು ಕೇಕ್ ತಂದದ್ದು ಎಂದು ವಿಚಾರಿಸಿದರು. ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕರಿಯಲ್ಲಿ ತಂದಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.       ಉಪ…

Read More