Author: News Desk Benkiyabale

 ತುಮಕೂರು:      ಗ್ರಾಮಸ್ಥರೊಬ್ಬರು ಹೊಲದ ಬಳಿ ಹೋಗುತ್ತಿದ್ದಾಗ ಮಗು ಅಳುವ ಶಬ್ದ ಕೇಳಿದ್ದಾರೆ. ಆಗ ಸಮೀಪ ಹೋಗಿ ನೋಡಿದ ಅವರಿಗೆ ಆಗ ತಾನೆ ಹುಟ್ಟಿರೋ ಹೆಣ್ಣುಮಗು ಪತ್ತೆಯಾಗಿದೆ       ತಕ್ಷಣವೇ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಮಹದೆವಮ್ಮ ಎಂಬುವರು ಮಗುವಿಗೆ ಆರೈಕೆ ಮಾಡಿದ್ದಾರೆ. ವೈದ್ಯರ ಪ್ರಕಾರ ಶಿಶು ಇಂದು ಬೆಳಿಗ್ಗೆ ಜನಿಸಿರಬಹುದು ಎಂದು ಹೇಳಲಾಗಿದೆ. ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ವಿಶೇಷ ನವಜಾತ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.       ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಮಗು ಜನಿಸಿದ್ದು, ಮಗುವನ್ನ ಹಾಗೇ ಬೀಸಾಡಿ ಹೋಗಿರುವುದರಿಂದ ತೀವ್ರ ಶೀತಕ್ಕೆ ರಕ್ತ ಹೆಪ್ಪುಗಟ್ಟಿದೆ. ಅಲ್ಲದೇ ಮಗುವಿನ ಉಸಿರಾಟದಲ್ಲೂ ತೀವ್ರ ತೊಂದರೆ ಇದೆ ಎಂದು ಆರೈಕೆ ಮಾಡುತ್ತಿರುವ ನರ್ಸ್ ಹೇಳುತ್ತಿದ್ದಾರೆ.      ಶಿಶುವಿನ ಹೊಕ್ಕುಳ ಬಳ್ಳಿಯಲ್ಲಿ ದಾರ ಕಟ್ಟಿರುವುದು ಪತ್ತೆಯಾಗಿದೆ‌. ಹೀಗಾಗಿ ಸುತ್ತಮುತ್ತಲ ಪ್ರದೇಶದ ಮನೆಯಲ್ಲೇ ಮಗು ಜನಿಸಿರುವುದು ಸ್ಪಷ್ಟವಾಗಿದೆ.…

Read More

                 ದೇಹ ಪುರುಷನಾಗಿದ್ದರೂ ಮಾನಸಿಕವಾಗಿ ಮತ್ತು ಹಾರ್ಮೋನಲ್ ಎಫೆಕ್ಟ್​ನಿಂದಾಗಿ ಹೆಣ್ಣಾಗಿರೋರನ್ನ, ದೇಹ ಹೆಣ್ಣಾಗಿದ್ದರೂ ಭಾವನೆಯಿಂದ ಗಂಡಾಗಿದ್ದು ನಿತ್ಯ ತಮ್ಮಲ್ಲೇ ಸೆಣಸಾಡುವಂಥ ಹಲವರನ್ನು ನೋಡೇ ನೋಡಿರ್ತೀರಿ. ಆದ್ರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆಯಂಥ ಸರ್ಜರಿ ಮಾಡಿಸಿಕೊಳ್ಳೋದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ, ಪರಮೇಶ್ವರ್ ಪುತ್ರನಾಗಿದ್ದ ಶಶಾಂಕ್ ಪರಮೇಶ್ವರ್ ದಿಟ್ಟ ನಿರ್ಧಾರ ಕೈಗೊಂಡು ಕಳೆದ ವರ್ಷ ಲಿಂಗಪರಿವರ್ತನೆ ಸರ್ಜರಿ ಮಾಡಿಸಿಕೊಂಡು ಶನಾ ಆಗಿ ಬದಲಾಗಿದ್ದರು. ಆದ್ರೆ ಈ ಪರಿವರ್ತನೆಯನ್ನು ಪರಮೇಶ್ವರ್ ಆಗಲೀ ಅಥವಾ ಅವರ ಕುಟುಂಬವಾಗಲೀ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ರಾಜ್ಯ ಸರ್ಕಾರದಲ್ಲಿ ಮೋಸ್ಟ್ ಪವರ್​​ಫುಲ್ ಪೊಲಿಟಿಶಿಯನ್ ಡಿಸಿಎಂ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂದು ಧರ್ಮ ಸಂಕಟವನ್ನು ತಂದಿಟ್ಟಿದೆ. ಅಷ್ಟಕ್ಕೂ ಆಗ್ತಿರೋದು ಏನು?       ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ, ಗೃಹ ಸಚಿವರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸ್ತಿರುವ ಡಾ.ಜಿ.ಪರಮೇಶ್ವರ್ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಕೇವಲ…

Read More

ತುಮಕೂರು:        ನೀರಿನ ತೊಟ್ಟಿಗೆ‌ ಬಿದ್ದು‌ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಣಿಗಲ್​ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ. ಹಡವನಹಳ್ಳಿಯ ಶಂಕ್ರಪ್ಪ-ವನಿತಾ ದಂಪತಿ ಮಗ ಭರತ್(3) ಮತ್ತು ಗೊಲ್ಲರಹಟ್ಟಿಯ ಲಕ್ಷ್ಮೀ-ಪರಮೇಶ್ ದಂಪತಿ ಮಗು ಭರತ್(2) ಮೃತ ದುರ್ದೈವಿಗಳು. ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಮನೆ ನಿರ್ಮಾಣಕ್ಕೆ ನಿರ್ಮಿಸಿದ್ದ ತೊಟ್ಟಿ ಬಳಿ ಆಟವಾಡುವಾಗ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಕುಣಿಗಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಧುಗಿರಿ:       ದೀಪಾವಳಿ ಹಬ್ಬದ ಹೊತ್ತಿಗೆ ಶೇಂಗಾ ಫಸಲು ಕೈಗೆ ಬರುವ ಜೊತೆಗೆ ದ್ವಿದಳ ದಾನ್ಯಗಳ ಬೆಳೆಗಳು ಕೈಗೆ ತಾಕಬೇಕಿತ್ತು. ಎಲ್ಲೆಲ್ಲೂ ಅಚ್ಚ ಹಸಿರು ಕಂಗೊಳಿಸಿಬೇಕಿದ್ದ ಮಧುಗಿರಿ ತಾಲೂಕು ವರುಣನ ಸುಳಿವಿಲ್ಲದೆ ಬರದ ದವಡೆಗೆ ಸಿಲುಕಿ ಬೇಸಿಗೆ ಬಿಸಿಲನ್ನು ಮೀರಿಸುವ ರಣ ಬಿಸಿಲು ತಾಲೂಕಿನಾದ್ಯಂತ ಕೇಕೆ ಹಾಕುತ್ತಿದ್ದು ಜನ ಜಾನುವಾರುಗಳು ಕುಡಿವ ನೀರು ಮತ್ತು ಮೇವಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.       ದೊಡ್ಡೇರಿ, ಮಧುಗಿರಿ ಕಸಬಾ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಹಿಂದೆ ಭತ್ತ, ರಾಗಿ ,ಶೇಂಗಾ ಬೆಳೆದು ಸಮೃದ್ಧವಾದ ತೆಂಗು, ಅಡಿಕೆ ತೋಟಗಳು ಮತ್ತು ರೇಷ್ಮೆ ಬೆಳೆಗಳು ಹಾಸು ಹೊಕ್ಕಾಗಿದ್ದು ಸಂಪದ್ಬರಿತ ಪ್ರದೇಶವಾಗಿತ್ತು.ಆದರೆ ಕಳೆದ 10 -12 ವರ್ಷಗಳಿಂದ ಕಾಲ ಕಾಲಕ್ಕೆ ಮಳೆ ಬಾರದೇ ರೈತರು ಕಷ್ಟ ಪಟ್ಟು ಸಂಪಾದಿಸಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ದೊಡ್ಡೇರಿ ,ಬಡವನಹಳ್ಳಿ ಸುತ್ತಮುತ್ತ ಹಳ್ಳಿಗಳ ಜನರು ಕಾಕಡ,ಕನಕಾಂಬರ ಕ್ವಿಂಟಾಲ್‍ಗಟ್ಟಲೆ ಹೂವು ಬೆಳೆದು ಆಂದ್ರ ಪ್ರದೇಶ ಮತ್ತು ನಮ್ಮ ರಾಜ್ಯದಲ್ಲಿ…

Read More

ಬೆಂಗಳೂರು:        ಸುನಾಮಿ ಕಿಟ್ಟಿಯ ಕಿರಿಕ್‌ಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಿಡ್ನಾಪ್ ಆಯ್ತು, ಒರೆಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮನೆ ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನಿಗೆ ಕಿಟ್ಟಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.       4 ತಿಂಗಳ ಮನೆ ಬಾಡಿಗೆ ಕೇಳಿದಕ್ಕೆೆ, ಕಿಟ್ಟಿ ಮನೆ ಮಾಲೀಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದ್ದು, ಮನೆ ಮಾಲೀಕ ಶಿವಣ್ಣ ಎಂಬುವವರು ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ₹88 ಸಾವಿರ ಬಾಡಿಗೆ ಕೊಡದೇ ಕಿಟ್ಟಿ ಸತಾಯಿಸುತ್ತಿದ್ದಾರೆ ಎಂದು ಮನೆ ಮಾಲೀಕ ಶಿವಣ್ಣ ಆರೋಪಿಸಿದ್ದಾರೆ.       ಶಂಕರಮಠದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿರೋ ಸುನಾಮಿ ಕಿಟ್ಟಿ, ತಿಂಗಳಿಗೆ ₹22 ಸಾವಿರ ಬಾಡಿಗೆ ನೀಡಬೇಕು. ಆದರೆ 4 ತಿಂಗಳಿಂದ ಮನೆ ಬಾಡಿಗೆ ಕಟ್ಟದೇ ಮಾಲೀಕ ಶಿವಣ್ಣನನ್ನ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಸುನಾಮಿ ಕಿಟ್ಟಿಯನ್ನ ಮಹಾಲಕ್ಷೀ ಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  

Read More

ಬೆಂಗಳೂರು:       ಎಚ್‌1ಎನ್‌1 ಮಹಾಮಾರಿಗೆ ಶನಿವಾರ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 12 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಾರಣಾಂತಿಕ ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಂಖ್ಯೆ ರಾಜ್ಯದಲ್ಲಿ 31ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆತಂಕ ಮತ್ತಷ್ಟು ತೀವ್ರಗೊಂಡಿದೆ.       ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ಅತಿ ಹೆಚ್ಚು ಎಚ್‌1ಎನ್‌1 ಸಾವು ವರದಿಯಾಗಿರುವುದು ಇದೇ ಮೊದಲು. ಅ.12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 13ಕ್ಕೆ ಹೆಚ್ಚಳವಾಗಿತ್ತು. ಬಳಿಕ ನವೆಂಬರ್‌ 16ರ ವೇಳೆಗೆ 19ಕ್ಕೆ ಏರಿಕೆಯಾಗಿದ್ದ ಮೃತರ ಸಂಖ್ಯೆ ನ.17ರಂದು ಒಂದೇ ದಿನ 31ಕ್ಕೆ ತಲುಪಿದೆ. ಈ ಮೂಲಕ ಅ.17ರಂದು ಒಂದೇ ದಿನ 12 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.       ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶನಿವಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ವಿಶೇಷ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ…

Read More

ಕಲಬರುಗಿ :         ನಗರದ ಕುಖ್ಯಾತ ರೌಡಿಶೀಟರ್ 7 ಸ್ಟಾರ್ ಪ್ರದೀಪ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.       ಪ್ರಕರಣವೊಂದರ ಸ್ಥಳ ಪರಿಶೀಲನೆಗೆ ಪೊಲೀಸರು ಕರೆದುಕೊಂಡು ಹೋದಾಗ ಆತ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಫೈರಿಂಗ್ ನಡೆಸಿದ್ದಾಗಿ ಎಸ್.ಪಿ ಶಶಿಕುಮಾರ್​ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಅಶೋಕ ನಗರದ ಸಿಪಿಐ ಪ್ರದೀಪ್ ಕಾಲಿಗೆ ಗುಂಡಿಟ್ಟಿದ್ದಾರೆ.       ಪ್ರದೀಪ್ 19 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ, ಈತನ ಮೇಲೆ ಅಪಹರಣ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಇತ್ಯಾದಿ ಪ್ರಕರಣಗಳು ದಾಖಲಾಗಿದ್ದವು. ಗಾಯಾಳು ರೌಡಿಶೀಟರ್​ನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.      ಕಲಬುರಗಿ ಹೊರವಲಯದ ಗ್ರೀನ್ ಸಿಟಿ ಬಳಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವೆಂಕಟೇಶ್ ಮತ್ತು…

Read More

ಕುಣಿಗಲ್:       ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು .       ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ತಾಪಂ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ನಾಗೇಶ್ ಮತ್ತು ಶ್ರೀನಿವಾಸ್ ನೇತೃತ್ವದಲ್ಲಿ ಜಮಾವಣೆಗೊಂಡ ಗ್ರಾಪಂ ನೌಕರರು ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಅನ್ಯಾಯವಾಗಿದೆ ಸರ್ಕಾರದ ಆದೇಶದಂತೆ ಸಂಬಳ, ನಿವೃತ್ತಿ ಮರಣೋತ್ತರ ಉಪಧನ, ಹಾಗೂ ಬಿಲ್ ಕಲೆಕ್ಟರ್, ಮತ್ತು ಡಾಟಾ ಎಂಟ್ರಿ ಆಪರೇಟರ್ಗಳ ಜೇಷ್ಠತಾ ಪಟ್ಟಿಯನ್ನು ಜಿಪಂಗೆ ರವಾನಿಸಬೇಕು,ಬಾಕಿ ಉಳಿದುಕೊಂಡಿರುವ ವೇತನವನ್ನು ನೀಡಲು ಪಿಡಿಒಗಳಿಗೆ ಆದೇಶ ನೀಡಬೇಕು, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ನೌಕರರನ್ನು ಕೂಡಲೇ ಭರ್ತಿ ಮಾಡಬೇಕು ,ಸರ್ಕಾರದ ಆದೇಶದಂತೆ ನೌಕರರ ವಿವರಗಳನ್ನು ಪಂಚತಂತ್ರದಲ್ಲಿ ಅಳವಡಿಸಲು ಪಿಡಿಒ ಹಾಗೂ ಇಒ ರವರು ಕ್ರಮ ವಹಿಸಬೇಕು,ಇನ್ನು ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸರ್ಕಾರ ನೌಕರರಿಗೆ ಅನ್ಯಾಯ ಮಾಡದೇ ಕ್ರಮ ವಹಿಸಬೇಕೆಂದು…

Read More

ಮಧುಗಿರಿ :       ತಾಲೂಕಿನಲ್ಲಿ ಮಳೆ ಬೀಳದೆ ಬೇಸಿಗೆಕಾಲ ಬೀಕರವಾಗಿದ್ದು ಅಂತರ್ಜಲ ಸಂಪೂರ್ಣ ಕುಸಿದಿರುವುದರಿಂದ ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪುರಸಭೆ ಹಾಗೂ ನಿರಾವರಿ ಇಲಾಖೆಯ ಅಧಿಕಾರಿಗಳು ಒಂದು ಮಾಸ್ಟರ್ ಪ್ಲಾನ್ ತಯಾರಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.       ಶನಿವಾರ ಮಧುಗಿರಿ ಪುರಸಭೆಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಪೌರ ಕಾಮಿರ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.       ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಜಲ ಮೂಲಗಳಾದ ಕೆರೆ, ಕಟ್ಟೆಗಳು ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣ ಮತ್ತು ಈಗ ಸಿಗುವ ನೀರನ್ನೇ ಸಮರ್ಪಕವಾಗಿ ವಿತರಿಸುವ ಮೂಲಕ ಕುಡಿವ ನೀರಿಗೆ ಜನ, ಜಾನುವಾರುಗಳಿಗೆ ತೊಂದರೆ ಆಗದಂತೆ ಸದಾ ಕಾಲ ಪುರಸಭೆ ಮತ್ತು ನಿರಾವರಿ ಇಲಾಖೆಯ ಅಧಿಕಾರಿಗಳು ಕಾಳಾಜಿ…

Read More

 ತುಮಕೂರು :       ಜಿಲ್ಲೆಯ ರೈತರು “ಬೆಳೆ ದರ್ಶಕ್” ಮೊಬೈಲ್ ಆ್ಯಪ್ ಮೂಲಕ ಮುಂಗಾರು ಋತುವಿನಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ 2018ರ ಮುಂಗಾರು ಋತುವಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು, ಮೊಬೈಲ್ ತಂತ್ರಾಂಶದ ಮೂಲಕ ಈಗಾಗÀಲೇ ಸಂಗ್ರಹಿಸಲಾಗಿದೆ. ಸಂಗ್ರಹಿತ ಮಾಹಿತಿಯನ್ನು ತಾಲ್ಲೂಕು ಆಡಳಿತವು ಈಗಾಗಲೇ ಪರಿಶೀಲಿಸುತ್ತಿದೆ.       ಸರ್ಕಾರವೂ ಸಹ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದು, ಸರ್ಕಾರವು ದಾಖಲಿಸಿರುವ ಈ ಮಾಹಿತಿಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತಿ ಮಹತ್ವದ್ದಾಗಿರುತ್ತದೆ. ಈ ಹಿನ್ನಲೆಯಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಗ್ರಾಮವಾರು ಪ್ರತಿಯೊಬ್ಬ ರೈತರ ಜಮೀನಿನ ಮಾಹಿತಿಯನ್ನು ದಾಖಲಿಸಿಡಲಾಗಿದೆ.…

Read More