Author: News Desk Benkiyabale

 ತುಮಕೂರು:       ಕೇರಳ ರಾಜ್ಯದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಮಾಲಾದಾರಿ ಭಕ್ತರ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವುದು ಸರಿಯಲ್ಲ ಎಂದು ಶಬರಿಮಲ ಅಯ್ಯಪ್ಪಸೇವಾ ಸಮಾಜಂ (ಎಸ್‍ಎಎಸ್‍ಎಸ್) ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದರು.       ನಗರದ ಗಾರ್ಡನ್‍ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಗೊಂದಲ ಏರ್ಪಟ್ಟಿದ್ದು ಬೂಟುದಾರಿ ಪೊಲೀಸರು ಭಕ್ತರನ್ನು ತುಳಿಯುವ ದೃಶ್ಯ ಖಂಡನೀಯ ಎಂದರು.       ಈ ಹಿಂದೆ 100-200 ಜನ ಪೊಲೀಸರು ಖಾಕಿ ಸಮವಸ್ತ್ರದಲ್ಲಿ ಹೆಗಲಮೇಲೆ ಕಪ್ಪು ಟವಲ್ ಹಾಕಿಕೊಂಡು ಬೂಟ್ಸ್‍ಗಳನ್ನು ಧರಿಸದೆ ಭಕ್ತರಿಗೆ ಸಹಕಾರ ನೀಡುತ್ತಿದ್ದರು ಈಗ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಇದೆ ಎಂಬ ನೆಪವೊಡ್ಡಿ ಅಲ್ಲಿಗೆ ತೆರಳುತ್ತಿರುವ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.       ನ.17ರಿಂದ ಜನವರಿ 18 ರವರೆಗೆ ಮಂಡಲ ಮಹೋತ್ಸವ ಜಾತ್ರೆ,…

Read More

 ತುಮಕೂರು:       ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ 2017-18ನೇ ಸಾಲಿನ ವಿದ್ಯುತ್ ಕಳವು ಪ್ರಕರಣದಲ್ಲಿ ದಾಖಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ ತಿಳಿಸಿದ್ದಾರೆ.       ಮಧುಗಿರಿ ತಾಲ್ಲೂಕು ಚೀಲನಹಳ್ಳಿ ಗ್ರಾಮದ ನಿವಾಸಿ 42ವರ್ಷದ ಮಲ್ಲೇಶಪ್ಪ ಬಿನ್ ಲೇ.ಮಲ್ಲೇಲಿಂಗಪ್ಪ ಹಾಗೂ ತುರುವೇಕೆರೆ ತಾಲ್ಲೂಕು ತಾಳೇಕೆರೆ ಗ್ರಾಮದ ನಿವಾಸಿ 63 ವರ್ಷದ ತಿಮ್ಮೇಗೌಡ ಬಿನ್ ಪಟೇಲ್ ಶಿವಣ್ಣ ಅವರೇ ಬಂಧಿತ ಆರೋಪಿಗಳು. ಆರೋಪಿಗಳು ವಿದ್ಯುತ್ ಕಳವು ಮಾಡಿದ್ದರಿಂದ 16,326(ಮಲ್ಲೇಶಪ್ಪ)ರೂ. ಹಾಗೂ 47,154 (ತಿಮ್ಮೇಗೌಡ)ರೂ. ಸೇರಿ ಇಲಾಖೆಗೆ ಒಟ್ಟು 63,480 ರೂ.ಗಳಷ್ಟು ನಷ್ಟವಾಗಿದೆ.       ಅಕ್ರಮವಾಗಿ ವಿದ್ಯುತ್ ಬಳಸಿದ ಹಣವನ್ನು ಪಾವತಿಸದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ಬೆಸ್ಕಾಂ ಜಾಗೃತಿದಳ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 19ರಂದು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಹಾಯಕ ಕಾರ್ಯ…

Read More

ಪಾವಗಡ :       ಮಧುಮೇಹದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕಿನ ವಳ್ಳೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಿರುಮಣೆ ವತಿಯಿಂದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಳ್ಳೂರು ಗ್ರಾಮ ಪಂಚಾಯ್ತಿಯ ವಳ್ಳೂರು ಗ್ರಾಮದಲ್ಲಿ ತಿರುಮಣೆ ಸಮುದಾಯ ಆರೋಗ್ಯ ಕೇಂದ್ರದಿಂದ ಮಧುಮೇಹದ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂರು ಜನ ವಿದ್ಯಾರ್ಥಿಗಳು ಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಗ್ರಾಮಸ್ಥರಿಗೆ ಹಂಚಲಾಯಿತು.       ಇದೇ ವೇಳೆ ಗ್ರಾಮ ಪಂಚಾಯ್ತಿ ಕಾರ್ಯಲಯದಲ್ಲಿ ಮಧುಮೇಹ, ರಕ್ತದೂತ್ತಡ ಶಿಬಿರವನ್ನು ಆಯೋಜಿಸಿ ಜನತೆಗೆ ತಪಾಸಣೆ ನಡೆಸಲಾಯಿತು.       ಆಪ್ತ ಸಮಾಲೋಚರಾದ ಆರ್.ಕೋಮಲೇಶ್ ಮಾತನಾಡಿ ಸಾಂಕ್ರಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು , ಪ್ರಸ್ತುತ ದೇಶದಲ್ಲಿ 59 % ಜನ ಈ ರೋಗಗಳಿಂದ ಬಳುತ್ತಿದ್ದಾರೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಗಳಿಂದ ದೂರವಿದ್ದು ಉತ್ತಮ ಆರೋಗ್ಯ ಮತ್ತು ಪೌಷ್ಠಿಕಾಂಶದಿಂದ ಕೂಡಿದ ಆಹಾರ ಸೇವನೆ ಮಾಡಬೇಕು.…

Read More

ರಾಮನಗರ :       ಜೆಡಿಎಸ್ ನ ರಾಜ್ಯ ಎಸ್ಸಿ, ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಬಳಿ ನಡೆದಿದೆ.  ಈ ವೇಳೆ ಇಬ್ಬರು ಆರೋಪಿಗಳಿಗೆ ಗಾಯಾಗಳಾಗಿದ್ದು, ಓರ್ವ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.        ಕೊಲೆ ಆರೋಪಿಗಳಾದ ರಾಮ (21) ಮತ್ತು ದೀಪು (27) ಎಂಬುವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಇಬ್ಬರು ಆರೋಪಿಗಳ ಕಾಲಿನ ಭಾಗಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.       ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿಗಳ ಸುಳಿವಿನ ಮಾಹಿತಿ ಮೇರೆಗೆ ತಡರಾತ್ರಿ ಪೊಲೀಸರು ತೋಟಹಳ್ಳಿ ಬಳಿಯ ಪೈಪ್​ಲೈನ್​ನಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಆರೋಪಿಗಳು ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ವಿಧಿಯಿಲ್ಲದೇ ಪೊಲೀಸರು ಫೈರ್​ ಮಾಡಿದ್ದಾರೆ.       ನವೆಂಬರ್ 11 ರಂದು ಕನಕಪುರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟಹಳ್ಳಿ ಬಳಿ  ಮುಸ್ಲಿಂ ಬ್ಲಾಕ್ ನಲ್ಲಿ ರಾಜ್ಯ ಜೆಡಿಎಸ್…

Read More

ಬೆಂಗಳೂರು:       ಟಿಪ್ಪು ಜಯಂತಿಗೆ ಮುನ್ನಾ ದಿನ ಪತ್ರಕರ್ತ ಸಂತೋಶ್ ತಮ್ಮಯ್ಯ ಅವರು ಟಿಪ್ಪು ಜಯಂತಿ ವಿರೋಧಿಸಿ ಭಾಷಣ ಮಾಡಿದ್ದರು.ಅದರ ಆಧಾರವಾಗಿಟ್ಟುಕೊಂಡು ಗೊಣಿಕೊಪ್ಪ ಪೊಲೀಸರು ಅವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ.       ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ಖಂಡಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂತೋಷ್ ತಮ್ಮಯ್ಯ, ಟಿಪ್ಪು ಮತಾಂಧತೆಗೆ ಕಾರಣವಾಗಿದ್ದ ಮನಸ್ಥಿತಿಯನ್ನು ವಿಮರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಾಗಿತ್ತು. ಸಂತೋಷ್ ತಮ್ಮಯ್ಯ ಅವರನ್ನು ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗಿತ್ತು. ಸಂತೋಷ್ ತಮ್ಮಯ್ಯ ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ.       ಪೋಸ್ಟ್ ಒಂದಕ್ಕೆ ಕಾಮೆಂಟಿಸಿರುವ ಸಂಘಗಳ ಸಂಹಾರ ಎಂಬ ಖಾತೆಯ ಪ್ರೊಫೈಲ್ ಸಂತೋಷ್ ತಮ್ಮಯ್ಯ ವಿರುದ್ಧ ಅವಹೇಳನಕಾರಿ ಶಬ್ದಗಳಲ್ಲಿ…

Read More

ಬೆಂಗಳೂರು:       ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ  ಎಂಬ ವಿಷಯದ ಕುರಿತು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿಯಷ್ಟೇ, ಅವರು ಸಂಪುಟ ಸಭೆಗೆ ಹಾಜರಾಗಿದ್ದರು. ರಮೇಶ್ ರಾಜೀನಾಮೆ ಕೊಟ್ಟಿಲ್ಲ. ಅಲ್ಲದೇ 16 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಗಾಳಿಸುದ್ದಿ ಎಂದು ಅವರು ತಿಳಿಸಿದ್ದಾರೆ.        ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿರುವ ಸ್ಪೀಕರ್​ ರಮೇಶ್​ಕುಮಾರ್​, ” ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ. ಅವರಿಂದ ಅಂಥ ಪತ್ರವೂ ನನಗೆ ಬಂದಿಲ್ಲ. ಇದು ವದಂತಿಯಷ್ಟೇ,” ಎಂದು ತಿಳಿಸಿದ್ದಾರೆ.       ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಮೇಶ್​ ಜಾರಕಿಹೊಳಿ ಅವರು ಅಲಿಸಲಿಲ್ಲ ಎಂಬ ಕಾರಣಕ್ಕೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಸಂಪುಟ ಸಭೆ ನಡೆಯುತ್ತಿರುವಾಗಲೇ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ರಮೇಶ್​ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ…

Read More

ಬೆಂಗಳೂರು:       ಕಬ್ಬಿನ ಬಾಕಿ ಬಿಡುಗಡೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.       ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿದ ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ವಾತಂತ್ರ ಉದ್ಯಾನವದವರೆಗೂ ಮೆರವಣಿಗೆ ಸಾಗಿ ವಿಧಾನಸೌಧದತ್ತ ತೆರಳಲು ಪ್ರಯತ್ನಿಸಿದರೂ, ಪೊಲೀಸರ ಮಧ್ಯಪ್ರವೇಶದಿಂದಾಗಿ ಅಲ್ಲಿಯೇ ಧರಣಿ ನಡೆಸಿದರು.       ರೈತರು ಬೆಳೆದ ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ರೈತರನ್ನು ವಂಚಿಸಲಾಗುತ್ತಿದೆ. ಈ ಮೂಲಕ ರೈತರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಸರಕಾರ ವಿರುದ್ಧ ಕಿಡಿಕಾರಿದರು. ಸಿಎಂ ವಿರುದ್ಧ ಕಿಡಿ:      …

Read More

ಚಿಕ್ಕನಾಯಕನಹಳ್ಳಿ:       ಪಟ್ಟಣದಲ್ಲಿ ನವೆಂಬರ್ 26ರಂದು ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತೀರ್ಮಾನಿಸಿತು.       ಶಾಸಕ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರತಿ ಕನಕ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 3 ಜನರನ್ನು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಕನಕ ಜಯಂತಿಯಲ್ಲಿ ಕುರುಬ ಸಮಾಜದ ಮಠಗಳಿಂದ ಒಬ್ಬೋಬ್ಬರಿಗೆ ಸನ್ಮಾನ ಮಾಡಲಾಗುತ್ತದೆ. ಇದೇ ರೀತಿ ಈ ಬಾರಿಯು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.ತಾಲ್ಲೂಕು ಕಛೇರಿಯಲ್ಲಿ 26ರಂದು 10 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ 10.30ಕ್ಕೆ ಪುರಸಭೆಯ ಮುಂಭಾಗದಿಂದ ವಿವಿಧ ಕಲಾ ತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಜಯಂತಿ ನಡೆಸಲು ಸಭೆ ತೀರ್ಮಾನಿಸಿತು ನಂತರ ಕುರುಬ ಸಮಾಜದ ಎಲ್ಲಾ ಮಠಗಳ ಒಬ್ಬೋಬ್ಬರನ್ನು ತೆಗೆದುಕೊಂಡು ಸಮಿತಿ ರಚಿಸಲು ತೀರ್ಮಾನಿಸಿತು.  …

Read More

ಕೊರಟಗೆರೆ:       ದೇವಾಲಯ ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿ ಜಾತಿ-ಬೇದವಿಲ್ಲದೇ ಪ್ರತಿಯೊಬ್ಬರಿಗೆ ಮುಕ್ತ ಅವಕಾಶ ನೀಡವಂತಾಗಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.       ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಮದ ಪುರಾತನ ಇತಿಹಾಸವುಳ್ಳ ಶ್ರೀವೀರನಾಗಮ್ಮ ದೇವಾಲಯಕ್ಕೆ 2.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ರಾಜಗೂಪುರ, ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮವಾರ ವಹಿಸಿ ಮಾತನಾಡಿದರು.       ಕುಂಚಿಟಿಗರು ಒಟ್ಟಾಗಿ ನಮ್ಮ 48ಕುಲ ದೇವಾಲಯಗಳ ರಕ್ಷಣೆಗೆ ಪಣ ತೋಡಬೇಕು. ಮೊದಲನೇ ಹಂತವಾಗಿ ಕೇವಲ ಬಸಲೇನೋರ ಬುಡಕಟ್ಟಿನ 33ಬಂಡಿಗಳನ್ನು ಈ ಭಾರಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ 48ಕುಲಗಳ ಬಂಡಿಗಳನ್ನು ತಂದು ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದರು.       ದೇವಾಲಯದಲ್ಲಿ ಗಂಡಿಗೆ ಅವಕಾಶ ಹೆಣ್ಣಿಗೆ ಅವಕಾಶ ನೀಡದಿರುವಂತಹ ಸಂಪ್ರದಾಯಗಳು ಬೇಡ ಇಬ್ಬರೂ ಸಹ ಮನುಷ್ಯರೇ ದೇವರ ದರ್ಶನ ಪಡೆಯಲು ಎಲ್ಲರಿಗೂ ಮುಕ್ತ…

Read More

 ಕೊರಟಗೆರೆ:       ದ್ವಿಚಕ್ರ ವಾಹನ ಸವಾರನೋರ್ವ ನಸುಕಿನ ವೇಳೆಯಲ್ಲಿ ಆಯ ತಪ್ಪಿ ರಸ್ತೆಯ ಬದಿಯ ತೋಟ್ಟಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಸೋಮವಾರ ಮುಂಜಾನೆ ಜರುಗಿದೆ.       ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ-ಕೊರಟಗೆರೆ ರಸ್ತೆಯ ಹುಂಜನಹಳ್ಳಕ್ಕೆ ಹೊಂದಿಕೊಂಡ ನೀರಿನ ತೊಟ್ಟಿಗೆ ಡಿಕ್ಕಿ ಹೊಡೆದು ಮಡಕಸಿರಾ ತಾಲೂಕಿನ ಮದ್ದಲಕುಂಟ ಗ್ರಾಮದ ವಾಸಿಯಾದ ತಿಪ್ಪೆಸ್ವಾಮಿಯ ಮಗ ಆನಂದಕುಮಾರ್(27) ಮೃತ ದುರ್ದೈವಿ ಎಂದು ತಿಳಿದುಬಂದಿದೆ.       ವಡ್ಡಗೆರೆ ವೀರನಾಗಮ್ಮ ದೇವಿ ದರ್ಶನಕ್ಕೆ ಬಂದ ಮೃತ ಆನಂದ ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತೀದ್ದಾನೆ ಎನ್ನಲಾಗಿದೆ. ವಡ್ಡಗೆರೆ ಗ್ರಾಮದಿಂದ ಬೆಂಗಳೂರಿಗೆ ತೆರಳುವಾಗ ಅಪಘಾತವಾಗಿದೆ ಎನ್ನಲಾಗಿದೆ. ಪಿಎಸೈ ಮಂಜುನಾಥ ಅಪಘಾತ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More