ಕಾರು ಪಲ್ಟಿ: ಇಬ್ಬರು ಸಾವು

ಶಿರಾ:
      ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಕಾರಿನಲ್ಲಿದ್ದ 8 ಮಂದಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ತಾವರೆಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬುಧವಾರ ನಡೆದಿದೆ. 

      ಜಯತಿ(6) ಮತ್ತು ಸುಧಮ್ಮ (55) ಮೃತಪಟ್ಟವರು. ಶಿವಣ್ಣ, ಮೇಘನ, ಬಾಲಮ್ಮ, ಮಂಜಮ್ಮ, ಹಿಮ, ಸುಬಧ ಗಾಯಗೊಂಡವರು ಎಂದು ತಿಳಿದು ಬಂದಿದ್ದು, ಇವರೆಲ್ಲರೂ ತುಮಕೂರಿನಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿ ವಾಪಸ್‌ ತಮ್ಮ ಊರಾದ ಹಿರಿಯೂರು ತಾಲೂಕಿನ ಎ.ವಿ.ಕೊಟ್ಟಿಗೆ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
      ಗಾಯಗೊಂಡವರನ್ನು ಹಿರಿಯೂರು, ಸಿರಾ ಮತ್ತು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 
(Visited 10 times, 1 visits today)

Related posts

Leave a Comment