ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

ಮಧುಗಿರಿ:

      ಗಡಿಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮೇವು ಬ್ಯಾಂಕ್ ತೆರೆದಿದ್ದು ದಿಢೀರ್ ಜಿಲ್ಲಾಧಿಕಾರಿ ಡಾ ಕೆ ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

      ತಾಲೂಕಿನ ಪುರವರ ಗಂಕಾರನಹಳ್ಳಿ ತೋಪು ಹಾಗೂ ಮೈದನಹಳ್ಳಿ ಮೇವು ಬ್ಯಾಂಕಿಗೆ ಭೇಟಿ ನೀಡಿ ಪಶು ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದರು. ಈ ವೇಳೆ ಗೋ ಶಾಲೆಯ ಬದಲು ಮೇವು ಬ್ಯಾಂಕ್ ತೆರದಿದ್ದು ತುಂಬ ಅನುಕೂಲಕರವಾಗಿದೆ, ಆದರೆ ಮೈದನಹಳ್ಳಿ ಮೇವು ಬ್ಯಾಂಕಿನಲ್ಲಿ ಹಸಿ ಮೇವು ವಿತರಿಸಲಾಗುತ್ತಿದೆ ಜೋಳದ ಮೇವು ಹಸಿಯಾಗಿರುತ್ತದೆ ಇದರ ಬದಲು ಬತ್ತದ ಮೇವು ಗುಣಮಟ್ಟದಿಂದ ಕೊಡಿದ್ದು ಇದನ್ನೇ ವಿತರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿದರು

      ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 14 ನೇ ಹಣಕಾಸಿನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಪಂಚಾಯತಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ವೇಳೆ ರಸ್ತೆಯುದ್ದಕ್ಕು ಅಗೆದಿದ್ದ ಗುಂಡಿಯನ್ನು ಕಂಡ ಜಿಲ್ಲಾಧಿಕಾರಿ ಪಿಡಿಓ ವೆಂಕಟಚಲಾಪತಿ ಅವರನ್ನು ವಿಚಾರಿಸಿದಾಗ ನೀರು ಪೂರೈಕೆಗೆ ಪೈಪ್ ಲೈನ್ ಅಳವಡಿಸಿಲು ಗುಂಡಿ ತೆಗೆಯಾಲಾಗಿದೆ ಎಂದು ತಿಳಿಸಿದರು.

      ನಂತರ ಕೆಲ ರೈತರೊಂದಿಗೆ ಮೇವು ಬ್ಯಾಂಕಿನ ಬಗ್ಗೆ ಚರ್ಚಿಸಿ ನಂತರ ಬರಗಾಲದಲ್ಲಿ ರೈತರಿಗೆ ತೊಂದರೆಯಾಗದಂತೆ ನೀರು ಮತ್ತು ಗುಣಮಟ್ಟದ ಮೇವು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸೂಚಿಸಿದರು.

      ಈ ಸಂದರ್ಭದಲ್ಲಿ ಪಶು ಇಲಾಖೆಯ ಸಹಾಯಕ ನಿದೇರ್ಶಕ ನಾಗಭೂಷಣ್, ಗ್ರಾಪಂ ಅಧ್ಯಕ್ಷ ಎಂಪಿ ಕಾಂತರಾಜು, ಪಿಡಿಓ ವೆಂಕಟಚಲಾಪತಿ, ಪಶು ಇಲಾಖೆ ಡಾ ಜಗದೀಶ್, ಭಾಗ್ಯಲಕ್ಷ್ಮಿ, ಕಂದಾಯ ಅಧಿಕಾರಿ ಶಿವಶಂಕರ್ ನಾಯ್ಕ್, ಗ್ರಾಪಂ ಸಿಬ್ಬಂದಿ ಪ್ರದೀಪ್ ಇದ್ದರು.

(Visited 14 times, 1 visits today)

Related posts