ಅಕ್ರಮ ಡಾಕ್ಟರ್ ವಾಟರ್ ಸಂಸ್ಥೆಗೆ ಪಾಲಿಕೆಯಿಂದ ನೋಟಿಸ್!!

ತುಮಕೂರು:             ಮಹಾನಗರ ವ್ಯಾಪ್ತಿಯಲ್ಲಿ ಡಾಕ್ಟರ್ ವಾಟರ್ ಸಂಸ್ಥೆ ವತಿಯಿಂದ ಈವರೆಗೂ 7 ಸ್ಥಳಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು, 7 ಘಟಕಗಳಲ್ಲಿಯೂ ನೀರಿನ ಮಾಪನಗಳನ್ನು(ವಾಟರ್ ಮೀಟರ್) ಅಳವಡಿಸುವಂತೆ ಮಹಾನಗರ ಪಾಲಿಕೆ ಡಾಕ್ಟರ್ ವಾಟರ್ ಸಂಸ್ಥೆಗೆ ನೋಟಿಸ್  ನೀಡಿದೆ.       ನಗರದ ವಾರ್ಡ್ ಸಂಖ್ಯೆ – 7ರಲ್ಲಿ ಶಿಶುವಿಹಾರ, ವಾರ್ಡ್ ಸಂಖ್ಯೆ -25 ರಲ್ಲಿ ಮುನ್ಸಿಪಲ್ ಲೇಔಟ್ ಮತ್ತು ವಾರ್ಡ್ ಸಂಖ್ಯೆ-32 ರಲ್ಲಿ ಗೋಕುಲದಲ್ಲಿ 2014 ನೇ ಸಾಲಿನಲ್ಲಿ ನಿರ್ಮಿಸಿದ್ದು ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 175C(ii) ರೀತ್ಯಾ ಈ ಮೂರು ಸ್ಥಳಗಲ್ಲಿ ನಿಮಗೆ ಘಟಕ ನಿರ್ವಹಣೆ ಮಾಡಲು ನೀಡಲಾದ ಪರವಾನಗಿ ಅವಧಿ 2017 ಏ ಇಸವಿಗೆ ಮುಕ್ತಾಯವಾಗಿರುತ್ತದೆ. ಈ ಅವಧಿಯಲ್ಲಿ ವಾಟರ್ ಹೆಲ್ತ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಿಂದ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 176(6b(i)) ರೀತ್ಯಾ ಯಾವುದೇ…

ಮುಂದೆ ಓದಿ...

ಗ್ರಾ.ಪಂ. ಚುನಾವಣೆ: ಮದ್ಯದಂಗಡಿ ಮುಚ್ಚಲು ಜಿಲ್ಲಾಧಿಕಾರಿ ಆದೇಶ

 ತುಮಕೂರು :       ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಂದ ತೆರವಾಗಿರುವ ತುಮಕೂರು ಜಿಲ್ಲೆಯ ವಿವಿಧ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಮೇ 13 ರಿಂದ 31ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಚುನಾವಣೆ ನಡೆಯಲಿರುವ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ: ಕೆ.ರಾಕೇಶ್‍ಕುಮಾರ್ ಅವರು ಆದೇಶಿಸಿದ್ದಾರೆ.       ಗುಬ್ಬಿ ತಾಲ್ಲೂಕಿನ ಹೊಸಕೆರೆ, ತ್ಯಾಗಟೂರು, ಜಿ.ಹೊಸಹಳ್ಳಿ, ಹಿಂಡಸ್ಕೆರೆ, ಸಿ.ಎಸ್.ಪುರ, ಬ್ಯಾಡಗೆರೆ ಗ್ರಾಮಪಂಚಾಯತಿ; ಕುಣಿಗಲ್ ತಾಲೂಕಿನ ತೆರೇದಕುಪ್ಪೆ; ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು; ತುರುವೇಕೆರೆ ತಾಲೂಕಿನ ಮುನಿಯೂರು(2 ಕ್ಷೇತ್ರ) ಹಾಗೂ ದಬ್ಬೇಘಟ್ಟ; ಮಧುಗಿರಿ ತಾಲೂಕಿನ ಸಿಂಗನಹಳ್ಳಿ, ಶಿರಾ ತಾಲೂಕಿನ ತಡಕಲೂರು; ಪಾವಗಡ ತಾಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.      ಚುನಾವಣೆ ನಡೆಯಲಿರುವ ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಮೇ…

ಮುಂದೆ ಓದಿ...

ತುರ್ತು ಬರ ಪರಿಹಾರ ಕ್ರಮ ಕೈಗೊಳ್ಳಲು ಡಿಸಿಎಂ ಸೂಚನೆ

ತುಮಕೂರು :      ತುಮಕೂರು ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನರೇಗಾ ಯೋಜನೆಯಡಿ ದುಡಿಯಲು ಕೆಲಸವನ್ನು ಒದಗಿಸಲು ತುರ್ತು ಕ್ರಮ ಕೈಕೊಳ್ಳುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಮಪರ್ಕವಾಗಿ ಬರನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಕಡೆ, ಹೊಸದಾಗಿ ಬೋರ್‍ವೆಲ್‍ಗಳನ್ನು ಕೊರೆಯಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ 74 ಗ್ರಾಮ ಪಂಚಾಯಿತಿಗಳ 122 ಗ್ರಾಮಗಳಿಗೆ 455 ಟ್ರಿಪ್‍ಗಳಲ್ಲಿ ಕುಡಿಯುವ…

ಮುಂದೆ ಓದಿ...