ತುಮಕೂರು: ಶುದ್ಧಕುಡಿಯುವ ನೀರು ಘಟಕಕ್ಕೆ ಬೀಗ: ನಾಗರೀಕರ ಪರದಾಟ

 ತುಮಕೂರು:       ನಗರದ ಸರಸ್ವತಿಪುರಂನ ದೇವರಾಜಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ ಭಾಗದ ನಾಗರೀಕರು ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ.       ಕಳೆದ ಡಿಸೆಂಬರ್‍ನಲ್ಲಿ ಉದ್ಘಾಟನೆಯಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯಡಿ ಇದ್ದು, ಈ ಶುದ್ಧಕುಡಿಯುವ ನೀರಿನ ಘಟಕವನ್ನು ಬೆಂಗಳೂರಿನ ಗುತ್ತಿಗೆದಾರ ರಾಮಾಂಜಿ ಎಂಬುವರು ನಿರ್ವಹಣೆಗೆ ಪಡೆದುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಪಾಲಿಕೆಯಲ್ಲಿಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.       ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿರುವವರೇ, ವಿದ್ಯುತ್ ಬಿಲ್ ಭರಿಸಬೇಕು ಎಂದು ಪಾಲಿಕೆ ಆಯುಕ್ತ ಭೂಬಾಲನ್ ಆದೇಶ ನೀಡಿರುವುದರಿಂದ ಅನೇಕ ಶುದ್ಧ ಕುಡಿಯುವ ನೀರಿನ…

ಮುಂದೆ ಓದಿ...

ಬಿರುಗಾಳಿ ಸಹಿತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥ

  ಕೊರಟಗೆರೆ:       ಬಿರುಗಾಳಿಯ ರಭಸಕ್ಕೆ ರೈತನು ಕಷ್ಟಪಟ್ಟು ಬೆಳೆದಿದ್ದ ಬಾಳೆ ತೊಟ ಮತ್ತು ಇಬ್ಬರು ರೈತರ ಮನೆಯ ಮೇಲಿನ 30ಕ್ಕೂ ಹೆಚ್ಚು ಸೀಟುಗಳು ಅರ್ಧ ಕೀಮೀ ದೂರಕ್ಕೆ ಹೋಗುವ ಮೂಲಕ ವಿದ್ಯುತ್ ತಂತಿ ತುಂಡಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.       ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ದುಗ್ಗೇನಹಳ್ಳಿ ಗ್ರಾಮದ ರೈತ ಡಕ್ಲಾರಾಂ ಎಂಬುವರ 2ಎಕರೇ ಬಾಳೆ ತೋಟದಲ್ಲಿ 1ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿ 60ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ಸಿದ್ದಪ್ಪ ಎಂಬುವರ ಮನೆಯ 15ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ರೈತನಿಗೆ ವಾಸಿಸಲು ಮನೆಯಿಲ್ಲದೇ ಕಂಗಲಾಗಿದ್ದಾನೆ.       ದುಗ್ಗೇನಹಳ್ಳಿ ಗ್ರಾಮದ ಮತ್ತೋರ್ವ ರೈತ ಮೋಹನ ಎಂಬುವರ ತೋಟದ ಸಮೀಪದ ಜಾನುವಾರುಗಳ ಶೇಡ್‍ನ 15ಅಡಿ ಉದ್ದದ 20ಶೀಟ್‍ಗಳು ಅರ್ಧ ಕೀಮೀ ದೂರಕ್ಕೆ ಹಾರಿಹೋಗಿವೆ. ಬಿರುಸಿನ ಬಿರುಗಾಳಿಗೆ ಶೀಟ್‍ಗಳು…

ಮುಂದೆ ಓದಿ...