ಜೂನ್ 1 ರಿಂದ ತುಮಕೂರಿನಲ್ಲಿ ವಿದ್ಯುತ್ ವ್ಯತ್ಯಯ

 ತುಮಕೂರು:       ತುಮಕೂರು ನಗರ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕೈಗೊಳ್ಳುವುದರಿಂದ ಜೂನ್ 1 ರಿಂದ 25ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಟಿಎಫ್10 ಹಾಗೂ 2 ಫೀಡರ್ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.        ಕಾಮಗಾರಿ ಕೈಗೊಂಡಿರುವುದರಿಂದ ಜೂನ್ 1, 2, 14 ಹಾಗೂ 24ರಂದು ಕುವೆಂಪು ನಗರ; ಜೂ.3, 12 ಹಾಗೂ 19ರಂದು ಬಿ.ಎ.ಗುಡಿಪಾಳ್ಯ; ಜೂ. 4 ಹಾಗೂ 17ರಂದು ಬಟವಾಡಿ; ಜೂನ್ 6, 8, 18 ಹಾಗೂ 20ರಂದು ಹನುಮಂತಪುರ; ಜೂ. 9ರಂದು ವಾಲ್ಮೀಕಿ ನಗರ: ಜೂ. 10 ಹಾಗೂ 25ರಂದು ಶಾರದಾದೇವಿ ನಗರ; ಜೂ. 11, 15 ಹಾಗೂ 21ರಂದು ವಿದ್ಯಾನಗರ; ಜೂ. 13ರಂದು ಬಿ.ಹೆಚ್.ರಸ್ತೆ; ಜೂ.16 ಹಾಗೂ…

ಮುಂದೆ ಓದಿ...

ವರ್ಷದೊಳಗೆ ತುಮಕೂರಲ್ಲಿ ಮಾಲ್ ನಿರ್ಮಿಸಲು ಡಿಸಿಎಂ ಸೂಚನೆ

 ತುಮಕೂರು :       ತುಮಕೂರಿನ ಸ್ಮಾರ್ಟ್‍ಸಿಟಿ ಯೋಜನೆಯಡಿ ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿಥ್ ಮಲ್ಟಿಲೆವೆಲ್ ಕಾರ್‍ಪಾರ್ಕಿಂಗ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಒಂದು ವರ್ಷದೊಳಗೆ ನಿರ್ಮಿಸುವಂತೆ ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಸೂಚಿಸಿದರು.       ಮಲ್ಟಿಯುಟಿಲಿಟಿ ಮಾಲ್ ನಿರ್ಮಾಣ ಸಂಬಂಧ ಇಂದು ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳ ಪ್ರಸ್ತುತ ಎಪಿಎಂಸಿ ಸುಪರ್ಧಿಗೆ ಸೇರಿದೆ. ಆದರೂ ಈ ಸ್ಥಳ ತಕರಾರಿನಲ್ಲಿದ್ದು, ಅಗತ್ಯಬಿದ್ದರೆ ಸ್ಥಳವನ್ನು ಸಚಿವ ಸಂಪುಟದಲ್ಲಿ ಮುಂದಿಟ್ಟು ವಶಕ್ಕೆ ಪಡೆದು ಕೊಳ್ಳಲಾಗುವುದು ಎಂದರು.       ಈ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಮಾಲ್ ಮೂರು ಅಂತಸ್ತಿನ ಕಟ್ಟಡವಾಗಿದೆ. ತಳಮಹಡಿಯಲ್ಲಿ 140 ಕಾರ್ ಗಳ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಈ ಮಾಲ್‍ನನ್ನು ಒಂದು ವರ್ಷದ…

ಮುಂದೆ ಓದಿ...

ಜೂನ್ 1 ರಿಂದ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ

 ತುಮಕೂರು:       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ಜೂನ್ 1 ರಿಂದ 5ರವರೆಗೆ 5 ದಿನಗಳ ಕಾಲ “ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಸ್ಯಸಂತೆ ಮೇಳ”ವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.       ಜಿಲ್ಲಾ ಪಂಚಾಯತಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೇಳವನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮಾವು ಪ್ರಮುಖವಾದ ಬೆಳೆಯಾಗಿದ್ದು, 16,330 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಬಾದಾಮಿ, ರಸಪುರಿ, ಸೇಂದೂರು, ತೋತಾಪುರಿ ಮತ್ತಿತರ ಮಾವಿನ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ 1.50 ರಿಂದ 1.90ಲಕ್ಷ ಮೆಟ್ರಿಕ್ ಟನ್‍ಗಳಷ್ಟು ವಾರ್ಷಿಕ ಉತ್ಪಾದನೆಯಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.…

ಮುಂದೆ ಓದಿ...