ಸ್ಟೇರಿಂಗ್ ರಾಡ್ ಕಟ್ : ಬೇಲಿ ಸಾಲಿಗೆ ನುಗ್ಗಿದ ಬಸ್!!

ಹುಳಿಯಾರು :       “ಚಲಿಸುತ್ತಿದ್ದ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಬಸ್ ಬೇಲಿ ಸಾಲಿನ ಕಡೆ ನುಗ್ಗಿದ ಘಟನೆ ಹುಳಿಯಾರು – ಹೊಸದುರ್ಗ ರಸ್ತೆಯ ಕೇಶವಾಪುರದ ಬಳಿ ಭಾನುವಾರ ಜರುಗಿದೆ.       ಹೊಸದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‍ಆರ್ಟಿಸಿ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ಕಂಟ್ರೋಲ್ ತಪ್ಪಿ ರಸ್ತೆಯಿಂದ ಬೇಲಿ ಸಾಲಿನ ಕಡೆ ಬಸ್ ಚಲಿಸಿದೆ. ಅಷ್ಟರಲ್ಲಿ ಎಚ್ಚೆತ್ತ ಚಾಲಕ ತನ್ನ ಸಮಯಪ್ರಜ್ಞೆ, ಜಾಗರೂಕತೆಯಿಂದ ಚಲಿಸುತ್ತಿದ್ದ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.       ಪರಿಣಾಮ ಭಾರಿ ಅವಘಡ ತಪ್ಪಿ ಯಾವುದೇ ಸಾವು, ನೋವುಗಳು ಸಂಭವಿಸದೆ ಎಲ್ಲರೂ ಕ್ಷೇಮದಿಂದ ಬಸ್ ಇಳಿದಿದ್ದಾರೆ. ನಂತರ ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತೊಂದು ಕೆಎಸ್‍ಆರ್ಟಿಸಿ ಬಸ್‍ಗೆ ಹತ್ತಿಸಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದಾರೆ. 

ಮುಂದೆ ಓದಿ...

ಆರೋಗ್ಯವಂತ ಸಮಾಜದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ!!

ತುಮಕೂರು :      ಆರೋಗ್ಯವಂತ ಸಮಾಜದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟರು.      ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದಾಗ ಮಾತ್ರ ದೇಶವೂ ಆರೋಗ್ಯಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವ ಕೆಲಸ ಇನ್ನು ಹೆಚ್ಚು ಹೆಚ್ಚು ಆಗಬೇಕು ಎಂದು ಅವರು ಹೇಳಿದರು.       ಇಲ್ಲಿನ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಶಾಖೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸಂಶೋಧನಾ ಕೇಂದ್ರ, ಕಂಪೆನಿ, ಸಿಪ್ಲಾ ಕಂಪೆನಿ, ಲಯನ್ಸ್ ಕ್ಲಬ್, ಜ್ಞಾನ ಯೋಗ ಬೆಂಗಳೂರು ಹಾಗೂ ಅಶ್ವಿನಿ ಆಯುರ್ವೇದ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.       ಪ್ರಸ್ತುತ ದಿನಗಳಲ್ಲಿ ಬಡವರಿಗೆ ಆರೋಗ್ಯ ಸೇವೆ ಸಿಗುವುದು ದುಸ್ತರವಾಗಿದೆ.…

ಮುಂದೆ ಓದಿ...