ತುಮಕೂರು : ಸ್ಮಾರ್ಟ್ ಸಿಟಿ ಕಿರೀಟಕ್ಕೆ “ಸರ್ಟಿಫಿಕೇಟ್ ಆಫ್ ಮೆರಿಟ್” ಪ್ರಶಸ್ತಿ ಗರಿ

ತುಮಕೂರು :       ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವತಿಯಿಂದ ಸ್ಮಾರ್ಟ್ ಲಾಂಜ್, ಡಿಜಿಟಲ್ ಲೈಬ್ರರಿ ಮತ್ತು ಡಿಜಿಟಲ್ ಕ್ಲಾಸ್‍ರೂಮ್ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಗರದ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಮತ್ತು ವಾಸಯೋಗ್ಯ ಹಾಗೂ ಸುಸ್ಥಿರವಾಗಿಸಿರುವುದಕ್ಕಾಗಿ “ಸರ್ಟಿಫಿಕೇಟ್ ಆಫ್ ಮೇರಿಟ್ ಪ್ರಶಸ್ತಿ” ದೊರೆತಿದೆ.       ದೆಹಲಿಯಲ್ಲಿಂದು ನಡೆದ Ministry of Urban Affairs ರವರಿಂದ ಆಯೋಜೀತ “ಸ್ಮಾರ್ಟ್ ಸಿಟಿ ಎಮ್ ಪವರಿಂಗ್ ಇಂಡಿಯಾ ಅವಾರ್ಡ್-2019”(Smart City Empowering India Awards-2019)ಕಾರ್ಯಕ್ರಮದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಸಿದ್ದಾರೆ.

ಮುಂದೆ ಓದಿ...

ಕೃಷಿ ಮತ್ತು ಪಶುಸಂಗೋಪನಾ ಇಲಾಖೆಯ ವೆಚ್ಚಗಳಿಗೆ ಘಟನೋತ್ತರ ಮಂಜೂರಾತಿಗೆ ಅನುಮೋದನೆ

ತುಮಕೂರು :        ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಕೃಷಿ ಇಲಾಖೆ ವತಿಯಿಂದ ಖರೀದಿಸಲಾಗಿದ್ದ ಶೇಂಗಾ ಬಿತ್ತನೆ ಬೀಜದ ಮೊತ್ತ 400 ಲಕ್ಷ ರೂ. ಪಾವತಿಸಲು ಹಾಗೂ ಪಶುಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಖರೀದಿ ಮಾಡಿರುವ ಔಷಧಿಗಳ ಮೊತ್ತ ರೂ. 1.25ಕೋಟಿ ಅನುದಾನವನ್ನು ಪಾವತಿಸಲು ಘಟನೋತ್ತರ ಮಂಜೂರಾತಿ ನೀಡಿ ಸಭೆಯಲ್ಲಿ ಅನುಮೋದಿಸಲಾಯಿತು.        ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಘಟನೋತ್ತರ ಮಂಜೂರಾತಿ ಕುರಿತು ಪ್ರಸ್ತಾವನೆಯನ್ನು ವಿಶೇಷ ಸಾಮಾನ್ಯ ಸಭೆ ಶೀಘ್ರದಲ್ಲೇ ಕರೆದು ಸದರಿ ಸಭೆಯಲ್ಲಿ ಅಧಿಕಾರಿಗಳು ಸಲ್ಲಿಸಿ ಅನುಮೋದನೆ ಪಡೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.       ಪ್ರಸಕ್ತ ಹಣಕಾಸು ವರ್ಷದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗೆ ಬಂದಿರುವ ಹಣವನ್ನು ಯಾವುದೇ ಕಾರಣಕ್ಕೆ…

ಮುಂದೆ ಓದಿ...

ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಬ್ಯಾಂಕ್ ನಿವೃತ್ತರ ಪ್ರತಿಭಟನೆ

ತುಮಕೂರು:      ಬ್ಯಾಂಕ್ ನಿವೃತ್ತರ ಪಿಂಚಣಿಯನ್ನು ಶೀಘ್ರ ಪರಿಷ್ಕರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ ಜಿಲ್ಲಾ ಶಾಖೆ ವತಿಯಿಂದ ಮಹಾನಗರಪಾಲಿಕೆ ಆವರಣದ ಮುಂದೆ ಶುಕ್ರವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.       ಈ ಸಂದರ್ಭದಲ್ಲಿ ರ್ಯಾಲಿಯನ್ನುದ್ಧೇಶಿಸಿ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ವಾಸುದೇವ ತವಳ, ಕಳೆದ ಸುಮಾರು 25 ವರ್ಷಗಳಿಂದಲೂ ಕೇಂದ್ರ ಸರ್ಕಾರ ಬ್ಯಾಂಕ್ ನಿವೃತ್ತರ ಪಿಂಚಣಿಯನ್ನು ಪರಿಷ್ಕರಿಸದೆ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಕೂಡಲೇ ನಿವೃತ್ತರ ಪಿಂಚಣಿಯನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿದರು.       2002 ಕ್ಕೂ ಹಿಂದೆ ನಿವೃತ್ತರಾದವರ ತುಟ್ಟಿಭತ್ಯೆಯಲ್ಲಿರುವ ಅಸಮಾನತೆಯನ್ನು ನಿವಾರಿಸಿ ಅವರಿಗೂ ಇತರ ನಿವೃತ್ತರಂತೆಯೇ ಸಂಪೂರ್ಣ ತುಟ್ಟಿಭತ್ಯೆ ಕೊಡಬೇಕು, ಅಲ್ಪಪ್ರಮಾಣದಲ್ಲಿರುವ ಕೌಟುಂಬಿಕ ಪಿಂಚಣಿಯನನು ಕೇಂದ್ರ ಸರ್ಕಾರದ ಇತರ ಪಿಂಚಣಿದಾರರಂತೆ ಪರಿಷ್ಕರಿಸಿ ಕೌಟುಂಬಿಕ ಪಿಂಚಣಿದಾರರೂ ಸಹ ಗೌರವಯುತವಾದ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು…

ಮುಂದೆ ಓದಿ...

ಅಭಿವೃದ್ಧಿ ಹೊಂದಬೇಕಾದರೆ ಗ್ರಾಮಸ್ಥರು ದ್ವೇಷ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು – ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ :      ಗ್ರಾಮಗಳು ಅಭಿವೃದ್ದಿ ಹೊಂದಬೇಕಾದರೆ ಗ್ರಾಮಸ್ಥರು ದ್ವೇಷ ಹಾಗೂ ರಾಜಕೀಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ತಾಲೂಕಿನ ರಂಟವಳಲು ಗ್ರಾಮದಲ್ಲಿನ ಅಂಬೇಡ್ಕರ್ ಭವನ ಹಾಗೂ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಜನರು ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರೀತಿ-ವಿಶ್ವಾಸ ದಿಂದ ಬದುಕಲು ಪ್ರಯತ್ನಿಸಿ ಎಂದು ಹೇಳಿದರು.       ಕುಮಾರಸ್ವಾಮಿ ನೇತೃತ್ವದ ಸರಕಾರ ಅಸ್ಥಿತ್ವದಲ್ಲಿದ್ದರೆ ಈ ಬಾರಿಯ ಬಜೆಟ್‍ನಲ್ಲಿ ಮಧುಗಿರಿ ಕಂದಾಯ ಜಿಲ್ಲೆಯಾಗಿ ಘೋಷಣೆಯಾಗುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಕ್ಷೇತ್ರದ ಅಭಿವೃದ್ದಿಯಾಗ ಬೇಕೆಂದರೆ ಅನುದಾನ ಬಿಟ್ಟು ಕಂದಾಯ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡುವುದು ಒಳಿತು. ಆದ್ದರಿಂದ ಈಗಿನ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ ಎಂದ ಅವರು, ಎತ್ತಿನಹೊಳೆ…

ಮುಂದೆ ಓದಿ...

ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ ಪ್ರಥಮ ಬಾರಿಗೆ ತುಮಕೂರು ಜಿಲ್ಲೆ ಆಯ್ಕೆ!

ತುಮಕೂರು:       ಸಂಸದರಾದ ಜಿ.ಎಸ್. ಬಸವರಾಜು ಅವರು ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಭೌಗೋಳಿಕ ಮಾಹಿತಿ ವ್ಯವಸ್ಥೆಯ ವೆಬ್‍ಸೈಟ್‍ಅನ್ನು ಚಾಲನೆ ನೀಡಿದರು. ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಪ್ರಥಮ ಬಾರಿಗೆ ತುಮಕೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.       ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ(ದಿಶಾ) ಸಭೆಯ ಅಧ್ಯಕ್ಷತೆವಹಿಸಿ ಈ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.       ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಕಾರ್ಯಕ್ರಮದ ಅನುಷ್ಠಾನ ಕುರಿತು ಮಾಹಿತಿ ನೀಡುತ್ತಾ, ಕರ್ನಾಟಕ ರಾಜ್ಯದ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಭೌಗೋಳಿಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು ಸರ್ವೆವಾರು ಇಂಚಿಂಚು ಮಾಹಿತಿಯನ್ನು ನಕ್ಷೆಯಲ್ಲಿ ಸಂಗ್ರಹಿಸುವ ಕಾರ್ಯ ಜರುಗಿಸಲಾಗುತ್ತಿದೆ…

ಮುಂದೆ ಓದಿ...

ಕುಡಿಯುವ ನೀರು ಸ್ವಚ್ಛತೆಗೆ ಮೊದಲ ಆದ್ಯತೆ ಮೇಲೆ ಕಾರ್ಯವೆಸಗಲು ಸಚಿವರ ಸೂಚನೆ

 ತುಮಕೂರು:       ತುಮಕೂರು ನಗರವು ಬೆಂಗಳೂರಿನ ಸಮೀಪವಿದ್ದು, ತುಮಕೂರು ನಗರ ಅಭಿವೃದ್ಧಿಗೆ ಕೈಗೊಂಡಿರುವ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಅವರು ಇಂದು ಮಹಾನಗರ ಪಾಲಿಕೆಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಹಾಗೂ ಮಹಾನಗರ ಪಾಲಿಕೆಯ ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಒನ್ ಬೈ ಒನ್ ರಂತೆ ಕಾಮಗಾರಿ ಕೈಗೊಂಡು ಇರುವ ಸಮಸ್ಯೆಗಳನ್ನು ಪರಿಹರಿಸುತ್ತಾ ಅಭಿವೃದ್ಧಿ ಸಾಧಿಸಲು ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಅವರಿಗೆ ತಿಳಿಸಿದರು.      ತುಮಕೂರು ನಗರಕ್ಕೆ ಸುಮಾರು 22 ಹಳ್ಳಿಗಳು ವಿಲೀನಗೊಂಡಿದ್ದು, ಈ…

ಮುಂದೆ ಓದಿ...

ಸಚಿವರ ಆಪ್ತರಿಂದ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ

ಚಿಕ್ಕನಾಯಕನಹಳ್ಳಿ :       ನೀರಾವರಿ ಹೋರಾಟ ಸಮಿತಿ ಹಾಗೂ ರೈತಸಂಘದ ಸದಸ್ಯರೊಂದಿಗೆ ನಾಲಾಕಾಂಗಾರಿ ವೀಕ್ಷಣಗೆ ಜೊತೆಯಲ್ಲಿ ತೆರಳಿದ್ದ ಕನ್ನಡ ಪ್ರಭ ವರದಿಗಾರನ ಮೇಲೆ ಸಚಿವರ ಬೆಂಬಲಿಗರೊಬ್ಬರು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.       ಕಾಮಗಾರಿ ವೀಕ್ಷಣೆಯ ನಂತರ ಮೇಲ್ಕಂಡ ತಂಡದ ಸದಸ್ಯರನ್ನು ಕನ್ನಡ ಪ್ರಭ ವರದಿಗಾರ ಅಣೇಕಟ್ಟೆ ಸಿದ್ದರಾಮಯ್ಯನವರು ಈ ಹಿಂದೆ ಹೇಮಾವತಿ ನಾಲಾ ಭೂಸ್ವಾಧೀನದ ವಿಚಾರದಲ್ಲಿ ರೈತರಿಗೆ ಪರಿಹಾರ ಕೋಡುವವರೆಗೂ ಕಾಮಗಾರಿ ಮಾಡದಂತೆ ಅಡ್ಡಿಪಡಿಸಲಾಗಿತ್ತು. ಇದಕ್ಕೆ ಅಂದಿನ ಮಾಜಿ ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿಯವರು ರೈತರ ನಿಲುವಿಗೆ ಬೆಂಬಲವ್ಯಕ್ತಪಡಿಸಿದ್ದ ಕಾರಣ ಪರಿಹಾರ ದೊರೆತು ಕಾಂಗಾರಿ ಆರಂಭಗೊಂಡಿತು.       ಆದರೆ ಈ ಭಾಗದಲ್ಲಿಯೇ ಎತ್ತಿನಹೊಳೆ ಕಾಮಗಾರಿ ಆರಂಭಗೊಂಡಿದ್ದು ನಾಲೆಗೆ ಭೂಮಿ ಕಳೆದುಕೊಂಡ ರೈತರಿಗೆ ತಿಳುವಳಿಕೆ ಪತ್ರವನ್ನಾಗಲಿ, ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಅವಾರ್ಡ್‍ನ್ನಾಗಲಿ, ಅವರು ಕಳೆದುಕೊಳ್ಳುತ್ತಿರುವ ಭೂಮಿಯ ಮೌಲ್ಯವನ್ನು ನಿರ್ಧರಿಸುವ ಯಾವುದೇಪ್ರಕ್ರಿಯೆ ಪೂರ್ಣಗೊಂಡಿಲ್ಲ.…

ಮುಂದೆ ಓದಿ...

ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆ!

 ತುಮಕೂರು :       ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಸಣ್ಣನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಇಂದು ಚಾಲನೆ ನೀಡಿದರು.       ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಗಡಿ ಗ್ರಾಮವಾದ ದಸೂಡಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಮತ್ತು ಜನ ಸಂಪರ್ಕ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.       ಜಿಲ್ಲಾಧಿಕಾರಿಗಳ ಈ ವರ್ಷದ ಮೊದಲ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಆರಂಭಿಸಲಾಗುತ್ತಿದೆ. ಈ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಲಿದ್ದಾರೆ. ಸುಲಭವಾಗಿ ಬಗೆಹರಿಯುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಹೆಚ್ಚಿನ ಅವಧಿ ತೆಗೆದುಕೊಳ್ಳುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಇದರಿಂದ ಜನರು ಅನಗತ್ಯವಾಗಿ…

ಮುಂದೆ ಓದಿ...

ಮಾಜಿ ಮೇಯರ್ ರವಿ ಹತ್ಯೆ ಪ್ರಕರಣ : ಆರೋಪಿಯೊಂದಿಗೆ ಪೊಲೀಸರ ಸ್ಥಳ ತನಿಖೆ

ಮಧುಗಿರಿ :       ಬೆಂಗಳೂರಿನ ಜೈಲಿನಲ್ಲಿದ್ದು ಕೊಂಡೆ ಶ್ರೀಮಂತರ ರಿಂದ ಹಣ ವಸೂಲಿ ಮಾಡುವ ದಂದೆಯಲ್ಲಿ ತೊಡಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಅನುಮತಿ ಮೇರೆಗೆ ಮಧುಗಿರಿ ಕಸಬ ವ್ಯಾಪ್ತಿಯ ಸೋಂಪುರದ ವಾಸಿ ಹಾಗೂ ತುಮಕೂರು ಮಾಜಿ ಮೇಯರ್ ರವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಲೇಶ್‍ನನ್ನು ಬಿಗಿ ಭದ್ರತೆಯಲ್ಲಿ ಕರೆ ತಂದು ಮಧುಗಿರಿ ಪೋಲಿಸರು ಸ್ಥಳ ತನಿಖೆಯನ್ನು ಸೋಮವಾರ ಸಂಜೆ ನಡೆಸಿದರು.       ಇತ್ತೀಚೆಗೆ ಪಟ್ಟಣದ ವೆಂಕಟ ರವಣ ಸ್ವಾಮಿ ದೇವಾಲಯದ ರಸ್ತೆಯ ಸಮೀಪ ಪುರಸಭಾ ಸದಸ್ಯರ ಮನೆಯ ಮುಂದೆ ನಿಲ್ಲಿಸಿದ್ದ ಇನೂವಾ ಕಾರಿಗೆ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಹಾನಿ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿಯಾಗಿದ್ದಾರೆ.       ಆರೋಪಿ ಮಲ್ಲೇಶ್ ಕೃತ್ಯ ಎಸಗಲು ಬೆಂಗಳೂರಿನ…

ಮುಂದೆ ಓದಿ...

ಶ್ರೀ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ 60 ನೇ ವರ್ಷದ ಉರುಸ್ ಆರಂಭ

ಚಿಕ್ಕನಾಯಕನಹಳ್ಳಿ :       ಭಾವೈಕ್ಯತೆ ಸಂಕೇತವಾಗಿರುವ ಪಟ್ಟಣದ ಶ್ರೀ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ (ತಾತಯ್ಯ)ನವರ 60 ನೇವರ್ಷದ ಉರುಸ್ (ಜಾತ್ರೆ) ಸೋಮವಾರದಿಂದ ಆರಂಭಗೊಂಡಿತು.      ಹಜರತ್ ಸೈಯದ್ ಷಾ ಖಾದ್ರಿಯವರು ಈ ಪ್ರಾಂತ್ಯದಲ್ಲಿ ತಾತಯ್ಯನವರೆಂದೆ ಪ್ರಸಿದ್ದಿಯೆನಿಸಿದ್ದು, ಅವರ ಕಾಲಮಾನದಲ್ಲಿ ಸಮಾಜಕ್ಕೆ ಪೂರಕವಾಗಿ ಲೆಕ್ಕವಿಲ್ಲದಷ್ಟು ಪವಾಡಗಳನ್ನು ನಡೆಸಿದ ಕಾರಣ ತಾತಯ್ಯನವರ ಬಗ್ಗೆ ನಂಬಿಕೆಗಳು ಅಂದಿನಿಂದ ಇಂದಿನವರೆಗೂ ಎರಡೂ ಧರ್ಮಿಯರ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಪೂರಕವಾಗಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಿದ ಹಿಂದಿನವರು ಈ ಗೋರಿ ನಿರ್ಮಾಣದ ಸ್ಥಳಕ್ಕೆ ತಾತಯ್ಯನವರ ಮಠವೆಂದೆ À ಕಲ್ಲಿನಲ್ಲಿ ಕೆತ್ತಿಸಲಾಗಿದೆ.       ಹಿಂದೂ-ಮುಸ್ಲಿಂ ಧಾರ್ಮಿಕಭಾವವನ್ನು ಬೆಸೆಯುವಲ್ಲಿ ಪಟ್ಟಣದ ತಾತಯ್ಯನವರ ಗೋರಿ ಎರಡೂ ಧರ್ಮದವರ ಏಕೈಕ ಸಂಕೇತವೆನಿಸಿದ್ದು ಈವರೆಗೂ ಯಾವುದೇ ಕಳಂಕವಿಲ್ಲದೆ ಮುಂದುವರೆದಿರುವುದು ಇಲ್ಲಿನ ವಿಶೇಷವೆನಿಸಿದೆ. ಈ ಉರುಸ್ ಕಾರ್ಯಕ್ರಮಗಳು ಹಿಂದೂ ಮುಖಂಡರಿಂದಲೇ ಅದ್ದೂರಿಯಿಂದ…

ಮುಂದೆ ಓದಿ...