ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ : ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ವಿದ್ಯಾರ್ಥಿಗಳು ಭಾಗಿ!

ಮಧುಗಿರಿ :       ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ವಿದ್ಯಾರ್ಥಿಗಳಿಗೆ ಕೂಡಿ ಬಂದಿದೆ.       ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಎಸ್. ಸಾಗರ್ ಮತ್ತು ಬುಕ್ಕಾಪಟ್ಟಣದ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಶಿರಾ ತಾಲೂಕಿನ ಚಂಗಾವರ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ದೀಪಿಕ ಮತ್ತು ನಗರದ ಸಕಾರಿ ಪ್ರದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚೈತ್ರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಜ.20 ರಂದು ನವದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ.     ಬಡ ಕುಟುಂಬದ ಪ್ರತಿಭೆಗಳು :       ನಾಲ್ಕು…

ಮುಂದೆ ಓದಿ...

ತುಮಕೂರು : ಹಣ್ಣು ವ್ಯಾಪಾರಿಗಳ ವ್ಯಾಪಾರಕ್ಕೆ ಅಡ್ಡಿ!

ತುಮಕೂರು :        ನಗರದ ಸಿದ್ದಿವಿನಾಯಕ ಮಾರುಕಟ್ಟೆ ಮುಂಭಾಗ ಕಳೆದ 10-15 ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ಅಲ್ಲಿಂದ ತೆರವುಗೊಳಿಸಿದ್ದು, ಹಣ್ಣಿನ ವ್ಯಾಪಾರಿಗಳಿಗಾಗಿ ಶಾಸಕ ಜ್ಯೋತಿಗಣೇಶ್ ಹಾಗೂ ಆಯುಕ್ತರಾದ ಭೂಬಾಲನ್ ಸೇರಿ ಹಳೇ ಸಿದ್ದಿವಿನಾಯಕ ಮಾರುಕಟ್ಟೆ ಮುಂಭಾಗ ತಾತ್ಕಾಲಿಕವಾಗಿ ವ್ಯಾಪಾರ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.       ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳಾಂತರವಾದ ನಂತರ ಪಕ್ಕದಲ್ಲಿಯೇ ಮಿನಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಗಳು ವಹಿವಾಟು ಮಾಡುತ್ತಿದ್ದು, ಈಗ ಹಣ್ಣು ಹಾಗೂ ಹೂವಿನ ವ್ಯಾಪಾರಿಗಳು ವ್ಯಾಪಾರ ಮಾಡಲು ಅಡ್ಡಿಯುಂಟು ಮಾಡುತ್ತಿದ್ದು, ಮಿನಿ ಮಾರುಕಟ್ಟೆಗೆ ತೆರಳುವ ಗೇಟ್ ಬಾಗಿಲು ಹಾಕಿ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.       ತರಕಾರಿ ವ್ಯಾಪಾರಿಗಳಂತೆ ಹಣ್ಣು ಮತ್ತು ಹೂವು ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು, ವ್ಯಾಪಾರ ಮಾಡದೇ ಜೀವನ ನಡೆಸುವುದು…

ಮುಂದೆ ಓದಿ...