ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ : ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು:      ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ. ಪರಿಸರ ತುಂಬಾ ಮಹತ್ವದ್ದು, ಪರಸ್ಪರ ದೇವೋಭವ ಎಂದು ಹೇಳುವ ಹಾಗೆ ಪರಿಸರ ದೇವೋಭವ ಎಂದು ಹೇಳಬೇಕಾದ ಕಾಲಘಟ್ಟವಿದು. ಪರಿಸರವನ್ನು ನಾವು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.      ತಾಲ್ಲೂಕಿನ ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಎಚ್.ಶಿವಕುಮಾರ್ (ಬಂಡೆಕುಮಾರ್) ಅವರ 40ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ದೇವಸ್ಥಾನದ ಸನ್ನಿಧಾನದಲ್ಲಿ ವೃಕ್ಷವನ್ನು ಆರೋಪಣ ಮಾಡುವಂತಹ ಕಾರ್ಯಕ್ರಮವನ್ನು ಬಂಡೆ ಕುಮಾರ್ ಅವರು ಮಾಡಿದ್ದಾರೆ. ಇದು ಅವರ ಪರಿಸರ ಪ್ರೇಮ, ಪರಿಸರ ಕಾಳಜಿಯನ್ನು ತೋರಿಸುತ್ತದೆ ಎಂದರು.      ಪರಿಸರ ಕಾಳಜಿಯನ್ನು ಹೊಂದಿರುವ ಬಂಡೆ ಕುಮಾರ್ ಅವರು,…

ಮುಂದೆ ಓದಿ...

ತುಮಕೂರು : 222 ಮಂದಿಗೆ ಕೋವಿಡ್-19 ಸೋಂಕು ದೃಢ!!

ತುಮಕೂರು :      ಜಿಲ್ಲೆಯಲ್ಲಿ 222 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6662 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 57, ಪಾವಗಡ-27, ಕುಣಿಗಲ್-21, ಮಧುಗಿರಿ-20, ಕೊರಗಟಗೆರೆ-09, ತುರುವೇಕೆರೆ-16, ಶಿರಾ-09, ತಿಪಟೂರು-27, ಗುಬ್ಬಿ-13, ಚಿಕ್ಕನಾಯಕನಹಳ್ಳಿ-23 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 222 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 189 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 4707 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1778 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 171 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...