ಸೆ.21ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : ಅಪರ ಜಿಲ್ಲಾಧಿಕಾರಿ

ತುಮಕೂರು:      ಜಿಲ್ಲೆಯಲ್ಲಿ ಸೆ.21ರಿಂದ ನಡೆಯುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಸುರಕ್ಷಿತ ಹಾಗೂ ಯಶಸ್ವಿಯಾಗಿ ಜರುಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪರವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸೆಪ್ಟಂಬರ್ 21 ರಿಂದ 28 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ನಿಗಾವಹಿಸಬೇಕು. ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು ಎಂದರು.       ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಪರೀಕ್ಷಾ ಕೇಂದ್ರದ ಹೊರಾಂಗಣ ಮತ್ತು ಒಳಾಂಗಣ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಸಿಂಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ…

ಮುಂದೆ ಓದಿ...

ATM ಅದಲು-ಬದಲು ಮಾಡಿ 20 ಸಾವಿರ ದೋಚಿದ ವ್ಯಕ್ತಿಗೆ ನ್ಯಾಯಾಂಗ ಬಂಧನ

ಮಧುಗಿರಿ:      ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಎಟಿಎಂ ಕಾರ್ಡ್‍ನ್ನು ಅದಲು -ಬದಲು ಮಾಡಿ ಗಾರ್ಮೆಂಟ್ಸ್ ಮಹಿಳೆಯೊಬ್ಬರ ಖಾತೆಯಿಂದ ಇಪ್ಪತ್ತು ಸಾವಿರ ಹಣ ಡ್ರಾ ಮಾಡಿ ಮೋಸ ಮಾಡಿದ್ದ ವ್ಯಕ್ತಿಯನ್ನು ಮಧುಗಿರಿ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ನ್ಯಾಯದೀಶರು ಅದೇಶಿಸಿದ್ದಾರೆ.        ಆಚೇನಹಳ್ಳಿ ಗ್ರಾಮದ ನಾಗರತ್ನಮ್ಮ ಕರ್ನಾ ಟಕ ಬ್ಯಾಂಕ್ ಖಾತೆಯಿಂದ ಇಪ್ಪತ್ತು ಸಾವಿರ ರೂಗಳನ್ನು ಬಿಡಿಸಿಕೊಂಡು ಬರುವಂತೆ ಅವರ ತಂದೆಯ ಮೂಲಕ ಎಟಿಎಂ ಕಾರ್ಡನ್ನು ಕೊಟ್ಟು ಕಳುಹಿಸಿದ್ದಾರೆ. ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಾರದಿದ್ದಾಗ ಪಕ್ಕದಲ್ಲಿದ್ದ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ ಹಣ ಡ್ರಾ ಮಾಡುವಂತೆ ಹೇಳಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಇದ್ದ ಹಳೆ ಕಾರ್ಡನ್ನು ನೀಡಿ ಈ ಎಟಿಎಂ ಕಾರ್ಡ್ ನ್ನು ಬೇರೆ ಎಟಿಎಂ ನಲ್ಲಿ ಬಳಸಿ ಹಣ ಡ್ರಾ ಮಾಡಿದ್ದಾರೆ. ಆದರೆ ಹಣ ಡ್ರಾ…

ಮುಂದೆ ಓದಿ...

ಕಳ್ಳರನ್ನು ಬಿಟ್ಟು ಕದ್ದ ಮಾಲನ್ನು ಕದ್ದೊಯ್ದ ಪಿಎಸ್‍ಐ..!!?

ತುಮಕೂರು:      ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಗಳಲ್ಲಿ ನಿಂತಿರುವ ಲಾರಿಗಳಲ್ಲಿ ಡೀಸೆಲ್ ಕದಿಯುತಿದ್ದ ಕಳ್ಳರು ಸಬ್ ಇನ್ಸ್ಪೆಕ್ಟರ್ ಕೈಗೆ ಸಿಕ್ಕಿದರೂ ಸಹ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿರುವ ಆಪಾದನೆ ತುಮಕೂರು ತಿಲಕ್ ಪಾರ್ಕ್ ವೃತ್ತದ ಹೊಸ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.       ಇದರ ಪೂರ್ಣ ವಿವರಗಳನ್ನು ನೋಡಿದರೆ ಪೊಲೀಸರೇ ಈ ರೀತಿ ನಡೆದುಕೊಂಡರೆ ಇನ್ನೂ ಬೇರೆಯವರ ಕಥೆಯೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.       ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುರಿಯಾಗಿರಿಸಿಕೊಂಡು ಡೀಸೆಲ್ ಕದಿಯುತಿದ್ದ ಕಳ್ಳರು ತುಮಕೂರು ಕಡೆ ಬರುತ್ತಿದ್ದಾಗ ರಾತ್ರಿಯ ಪಾಳೆಯದಲ್ಲಿ ಕರ್ತವ್ಯ ನಿರತ ಮಹಿಳಾ ಸಬ್ ಇನ್ಸ್ಪೆಕ್ಟರ್ ಕಾರನ್ನು ತಡೆದು ತಪಾಸಣೆಗೊಳಪಡಿಸಿ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗÀ ಸಿಕ್ಕಿರುವ ವ್ಯಕ್ತಿಗಳು ಕಳ್ಳತನದ ಕಸುಬಿನವರು…

ಮುಂದೆ ಓದಿ...