ಹಲ ವರ್ಷಗಳ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ:       ಹಲವಾರು ವರ್ಷಗಳಿಂದ ಇತ್ಯರ್ಥವಾಗದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಎಸ್.ಆರ್.ಶ್ರೀನಿವಾಸ್ ಎರಡು ಬಣಗಳಾಗಿದ್ದ ರೈತರೊಟ್ಟಿಗೆ ಚರ್ಚಿಸಿ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯೊಂದಿಗೆ ಸುಖಾಂತ್ಯ ಕಾಣಿಸಿದರು.       ತಾಲ್ಲೂಕಿನ ಚೇಳೂರು ಹೋಬಳಿ ಸಿ.ಹರುವೇಸಂದ್ರಪಾಳ್ಯ ಗ್ರಾಮದಲ್ಲಿ ಗಂಗಣ್ಣ ಸಹೋದರರ ಮನೆಗಳಿಗೆ ತೆರಳಲು ಇದ್ದ ರಸ್ತೆ ವಿವಾದ ತಾರಕಕ್ಕೇರಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ನಡುವೆ ಅಲ್ಲಿನ ಖರಾಬುಹಳ್ಳ ತೆರವು ಮಾಡಲು ಅರ್ಜಿ ಸಲ್ಲಿಸಲಾಗಿದ್ದ ಕಾರಣ ರಸ್ತೆಗಾಗಿ ನಡೆದ ತಿಕ್ಕಾಟಕ್ಕೆ ಹಲವಾರು ಮನೆಗಳಿಗೆ ಹೋಗಲು ರಸ್ತೆ ಇಲ್ಲವಾಗುವ ಬಗ್ಗೆ ಅರಿತು ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳಿಂದ ಆಗಬೇಕಿದ್ದ ಹಳ್ಳ ತೆರವು ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿ ವಿವಾದ ಮಾಡಿಕೊಂಡ ರೈತರೊಟ್ಟಿಗೆ ಎರಡು ತಾಸು ಚರ್ಚಿಸಿ ರಸ್ತೆ, ಖರಾಬು ಸ್ಥಳಗಳನ್ನು ಪರಿಶೀಲಿಸಿ ಅಂತಿಮವಾಗಿ ಎರಡೂ ಗುಂಪುಗಳಿಂದ ಐದು ಅಡಿಗಳಂತೆ ಸ್ಥಳ…

ಮುಂದೆ ಓದಿ...

ಅಶೋಕ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು:      ಕಳೆದ ಮೂರೂವರೆ ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಅಶೋಕ ರಸ್ತೆಯು ಸದ್ಯದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದ್ದು, ಬರುವ ಅಕ್ಟೋಬರ್ 10 ರಂದು ಈ ರಸ್ತೆ ಲೋಕಾರ್ಪಣೆಯಾಗಲಿದೆ.       ನಗರದ ಹೃದಯಭಾಗದಲ್ಲಿರುವ ಹಾಗೂ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಅಶೋಕ ರಸ್ತೆಯಲ್ಲಿ ಕಳೆದ 110 ದಿನಗಳಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಮಾರ್ಟ್‍ಸಿಟಿ ಯೋಜನೆ ವತಿಯಿಂದ ಕೈಗೊಳ್ಳಲಾಗಿದ್ದು, ಈ ರಸ್ತೆಯ ಕಾಮಗಾರಿ ಮತ್ತು ಗುಣಮಟ್ಟವನ್ನು ಸ್ಮಾರ್ಟ್‍ಸಿಟಿ ಅಧಿಕಾರಿಗಳೊಂದಿಗೆ ಬೆಳ್ಳಂಬೆಳಿಗ್ಗೆ ಪರಿಶೀಲನೆ ನಡೆಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಹಗಲು-ರಾತ್ರಿ ಕೆಲಸ ಮಾಡಿ ನಿಗದಿತ ದಿನಾಂಕದೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.       ಅಶೋಕ ರಸ್ತೆಯಲ್ಲಿ 110 ದಿನಗಳಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ…

ಮುಂದೆ ಓದಿ...

ಕೊರೊನಾ ಎದುರಿಸುವಲ್ಲಿ ಲ್ಯಾಬ್ ಟೆಕ್ನಿಷಿಯನ್‍ಗಳ ಪಾತ್ರ ಮಹತ್ವದ್ದು – ಡಿಸಿ

ತುಮಕೂರು:       ಕೊರೊನಾ ಮಹಾಮಾರಿಯನ್ನು ಸಮರ್ಥ ವಾಗಿ ಜಿಲ್ಲೆಯಲ್ಲಿ ಎದುರಿಸುವಲ್ಲಿ ಲ್ಯಾಬ್ ಟೆಕ್ನೀಷಿಯನ್‍ಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಸೇವೆಯನ್ನು ಮರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.       ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕರ್ನಾಟಕ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್(ರಿ), ಬೆಂಗಳೂರು, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್(ರಿ) ತುಮಕೂರು ಹಾಗೂ ಸರಕಾರಿ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್ ಸಂಘ (ರಿ) ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಕೊಂಡಿದ್ದ ಕೋರೋನಾ ವಾರಿಯರ್ಸ್ ಲ್ಯಾಬ್ ಟೆಕ್ನೇಷಿಯನ್ಸ್‍ಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ತೆರೆಯ ಮೆರೆಯಲ್ಲಿ ನಿಮ್ಮ ಕೆಲಸ ಅವಿಸ್ಮರಣಿಯವಾದುದ್ದು ಎಂದರು.       ಜನರ ಇತ್ತೀಚಿನ ನಡವಳಿಕೆಗಳನ್ನು ನೋಡಿದರೆ ಕೊರೊನಾ ಭಯ ಹೋದಂತೆ ಕಾಣುತ್ತಿದೆ. ಅಲ್ಲದೆ ಕೊರೊನಾ ಎಂಬುದು ಅಧಿಕಾರಿಗಳು, ರಾಜಕಾರಣಿಗಳು ಹಣ ಮಾಡಲು ಬಳಸುತ್ತಿರುವ ದಂಧೆ ಎಂಬ ತಪ್ಪು ಅಭಿಪ್ರಾಯ ಮೂಡಿ ದಂತಿದೆ.…

ಮುಂದೆ ಓದಿ...