ಚಿಕ್ಕನಾಯಕನಹಳ್ಳಿ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮುಂದಿನ ಪ್ರಕ್ರಿಯೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣ ವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಿರುವ 448 ಸದಸ್ಯರ ಪ್ರಮಾಣಕ್ಕೆ ತಕ್ಕಂತೆ ಮೀಸಲು ನಿಗದಿಗೊಳಿಸಿದ್ದು 27 ಪಂಚಾಯಿತಿಗಳಲ್ಲಿ ಒಟ್ಟಾರೆಎಲ್ಲಾ ವರ್ಗದಿಂದ 14 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಇದರಲ್ಲಿ ಅನುಸೂಚಿತ ಜಾತಿ 6 ಸ್ಥಾನಗಳನ್ನು ಮೀಸಲಿರಿಸಿದ್ದು ಈ 6ರಲ್ಲಿ 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅನುಸೂಚಿತ ಪಂಗಡಕ್ಕೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲಿ 2 ಸ್ಥಾನಗಳು ಮಹಿಳೆಗೆ ಮೀಸಲಿರಿಸಿದೆ. ಹಿಂದುಳಿದವರ್ಗ(ಎ) ಗೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದವರ್ಗ(ಬ) 1 ಸ್ಥಾನ ಮೀಸಲಿರಿಸಿದೆ. ಸಾಮಾನ್ಯ ಸ್ಥಾನಗಳಿಗೆ 14 ಸ್ಥಾನಗಳನ್ನು ಮೀಸಲಿರಿಸಿದ್ದು ಈ 14 ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ…
ಮುಂದೆ ಓದಿ...Day: January 2, 2021
ಚಿಕ್ಕನಾಯಕನಹಳ್ಳಿ: ಶೈಕ್ಷಣಿಕ ವರ್ಷಕ್ಕೆ ವಿಶೇಷ ರೀತಿಯಲ್ಲಿ ಸ್ವಾಗತ
ಚಿಕ್ಕನಾಯಕನಹಳ್ಳಿ: 2020-21 ನೇ ಶೈಕ್ಷಣಿಕ ವರ್ಷವನ್ನು ವಿಶೇಷ ರೀತಿಯಲ್ಲಿ ಸ್ವಾಗತಕೋರುವ ಮೂಲಕ ಸರ್ಕಾರಿ ಶಾಲೆಗಳು ಆರಂಭಗೊಂಡವು. ಕೊರೋನಾ ಸೋಂಕಿನ ಭೀತಿಯಿಂದ ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಶಾಲೆಗಳಿಗೆ ಜ.1 ರಿಂದ ವಿವಿಧ ಸುರಕ್ಷತಾ ನಿಯಮಗಳ ಕಡ್ಡಾಯ ಪಾಲನೆಯೊಂದಿಗೆ ಶಾಲೆಗಳನ್ನು ತೆರೆಯಲು ಆದೇಶಬಂದ ಕಾರಣ ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಪೋಷಕರು ಹಾಗೂ ವಿದ್ಯಾರ್ಥಿಗಳಿಂದಲೂ ಹೆಚ್ಚಿನ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡರು. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಲ್ಲುಬಾವಿ ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಗಮ ಕಾರ್ಯಕ್ರಮದ ಬೋದನೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆಂಬಾಳ್ ರಮೇಶ್ ಗುಲಾವಿ ಹೂ ನೀಡುವ ಮೂಲಕ ಬರಮಾಡಿಕೊಂಡರು. ಶಾಲೆಯನ್ನು ಹಿಂದಿನ ದಿನಸ್ವಚ್ಚಗೊಳಿಸಿ, ಎಲ್ಲಾ ಕೊಠಡಿ, ಪ್ರಾಂಗಣ,…
ಮುಂದೆ ಓದಿ...3ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಿಇಒ ಸೂಚನೆ
ತುಮಕೂರು : ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜನವರಿ 7ರಂದು ನಡೆಯಲಿರುವ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ನೀಡುವ ಅಂಕಿ-ಅಂಶಗಳು ನಿಖರ ಹಾಗೂ ಸ್ಪಷ್ಟವಾಗಿರಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇಲಾಖಾ ಪ್ರಗತಿ ಕಡಿಮೆಯಿದ್ದರೆ ಸ್ವಷ್ಟ ಕಾರಣ ನೀಡಬೇಕು ಹಾಗೂ ಅದನ್ನು ಷರಾದಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಿದರು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 249590 ರೈತರಿಗೆ 3ನೇ ತ್ರೈಮಾಸಿಕದಲ್ಲಿ ಮೊತ್ತ ಪಾವತಿ ಬಾಕಿಯಿದೆ. ಈಗಾಗಲೇ ಎಫ್ಟಿಒ ಜನರೇಟ್ ಆಗಿದ್ದು, ಅವರಿಗೆ…
ಮುಂದೆ ಓದಿ...ಜ.4 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
ತುಮಕೂರು : ಬೆವಿಕಂ ನಗರ ಉಪವಿಭಾಗ-1 ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಜನವರಿ 4 ರಿಂದ 22ರವರೆಗೆ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆಯವರೆಗೆ (ಜನವರಿ 9, 10 ಮತ್ತು 17ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ) ಕೋತಿತೋಪು, ಹೊರಪೇಟೆ, ಶ್ರೀರಾಮನಗರ, ಆರ್.ವಿ.ಕಾಲೋನಿ, ಕೆ.ಆರ್.ಬಡಾವಣೆ, ಎಮ್.ಜಿ.ರಸ್ತೆ, ವಿವೇಕಾನಂದ ರಸ್ತೆ, ಬಾರ್ ಲೈನ್, ಅರಳೆಪೇಟೆ, ಬಿದಿರುಮಳೆ ತೋಟ, ಆರ್.ಟಿ.ನಗರ, ಬಿ.ಹೆಚ್.ರಸ್ತೆ, ದೊಡ್ಡಮನೆ ನರ್ಸಿಂಗ್ ಹೋಮ್, ಎಸಿ/ಎಸ್ಟಿ ಹಾಸ್ಟೇಲ್, ಹೊಸಹಳ್ಳಿ, ಹಾರೋನಹಳ್ಳಿ, ನರಸಾಪುರ, ಕುಪ್ಪುರು, ಕಾಳಮ್ಮನ ಪಾಳ್ಯ, ಮರಿಹುಚ್ಚಯ್ಯನ ಪಾಳ್ಯ, ಬಿ.ಎಚ್.ಪಾಳ್ಯ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಮುಂದೆ ಓದಿ...