ಎಸ್‍ಇಪಿ/ಟಿಎಸ್‍ಪಿ ಯೋಜನೆಯಡಿ ಪುರಸಭೆಗೆ 10 ಕೋಟಿ ರೂ. ವಿಶೇಷ ಅನುದಾನ

ಮಧುಗಿರಿ:      ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಇಲ್ಲಿನ ಪುರಸಭೆಗೆ 10 ಕೋಟಿ ರೂ. ವಿಶೇಷ ಅನುದಾನವನ್ನು ಹಂತ ಹಂತವಾಗಿ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.      ಬುಧವಾರ ಪುರಸಭೆ ಆವರಣದಲ್ಲಿರುವ ಮಾಲೀಮರಿಯಪ್ಪ ರಂಗಮಂದಿರದಲ್ಲಿ 2018-19ನೇ ಸಾಲಿನ ವಿಕಲಚೇತನರಿಗೆ ತ್ರಿಚಕ್ರವಾಹನ ವಿತರಣೆ ಹಾಗೂ ಜೀವ ವಿಮಾ ಬಾಂಡುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು, ಪುರಸಭಾ ಅಧ್ಯಕ್ಷ ತಿಮ್ಮರಾಜು & ಸದಸ್ಯರುಗಳು 10 ಕೋಟಿ ರೂ. ಬಿಡುಗಡೆ ಎಸ್‍ಎಫ್‍ಸಿ ಯೋಜನೆಯಡಿ 3 ಕೋಟಿ ರೂ. ಬಿಡುಗಡೆಯಾಗಿ ಅಭಿವೃದ್ದಿ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡ ನಂತರ ಸರ್ಕಾರ ಹಣವನ್ನು ವಾಪಸ್ ಪಡೆದಿದ್ದು, ಈ ಹಣವನ್ನು ಬಿಡುಗಡೆ ಮಾಡಿಸುವಂತೆ ಮಾಡಿದ ಮನವಿಗೆ, ಸದಸ್ಯರುಗಳು ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಒಗ್ಗಟ್ಟಾಗಿರಿ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿ ಎಂದು ಶಾಸಕ ಎಂ.ವಿ.ವಿ…

ಮುಂದೆ ಓದಿ...

ತುಮಕೂರು:  ಫೆ.6-7ರಂದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟ

ತುಮಕೂರು:        ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆಬ್ರುವರಿ 6 ಮತ್ತು 7ರಂದು ನಡೆಸಲು ಅಗತ್ಯ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ನೌಕರರ ಕ್ರೀಡಾ ಕೂಟವನ್ನು ನಗರದ ಕುಣಿಗಲ್ ರಸ್ತೆಯಲ್ಲಿರುವ ಎಸ್.ಎಸ್.ಐ.ಟಿ. ಕಾಲೇಜಿನ ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದು, ಕ್ರೀಡಾ ಕೂಟವನ್ನು ಯಾವುದೇ ಲೋಪದೋಷವಿಲ್ಲದಂತೆ ಅಚ್ಚುಕಟ್ಟಾಗಿ ನಡೆಸಲು ವಿವಿಧ ಅಧಿಕಾರಿಗಳನ್ನೊಳಗೊಂಡ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಿದರು.       ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಸುಮಾರು 2ಸಾವಿರ ನೌಕರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಓ.ಓ.ಡಿ. ಸೌಲಭ್ಯ ನೀಡಲಾಗುವುದು. ಮೇಲಧಿಕಾರಿಗಳು ಆಸಕ್ತ ನೌಕರರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಕೆಂದು ನಿರ್ದೇಶನ ನೀಡಿದರು.    …

ಮುಂದೆ ಓದಿ...

ಎಸ್‍ಪಿ ಕಛೇರಿಯ ಕೇಸ್‍ವರ್ಕರ್ ಯಶಸ್ವಿನಿ ಬಂಧನ

ತುಮಕೂರು:        ಜಿಲ್ಲಾ ಪೊಲೀಸ್ ಕಛೇರಿಯ ಅಕೌಂಟ್ಸ್ ಕೇಸ್ ವರ್ಕರ್ ಯಶಸ್ವಿನಿಯವರನ್ನು ಮಂಗಳವಾರ ರಾತ್ರಿ ಕರ್ತವ್ಯ ದುರುಪಯೋಗ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.       ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯಶಸ್ವಿನಿ ಎಂಬುವವರ ಮೇಲೆ ಕರ್ತವ್ಯ ದ್ರೋಹ ಮತ್ತು ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವಾಗಿ ತುಮಕೂರು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರು ದಾಖಲು ಮಾಡುವ ಮುನ್ನವೇ ಆಕೆಯ ಕರ್ತವ್ಯ ದುರಪಯೋಗದ ಆಧಾರದ ಮೇಲೆ ಅಮಾನತ್ತು ಮಾಡಲಾಗಿತ್ತು. ದೂರು ದಾಖಲಾದ ನಂತರ ಪ್ರಕರಣದ ತನಿಖೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಆರ್‍ಬಿ ಇನ್ಸ್‍ಪೆಕ್ಟರ್ ವಿಜಯಕುಮಾರ್‍ರವರಿಗೆ ತನಿಖೆ ಮಾಡಲು ಮತ್ತು ಆರೋಪಿಗಳನ್ನ ಬಂಧಿಸಲು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಷೇಶವಾಗಿ ಆದೇಶ ನೀಡಿದ್ದರು. ಇನ್ಸ್‍ಪೆಕ್ಟರ್ ವಿಜಯಕುಮಾರ್‍ರವರು ಲಿಂಗಾಯತ ಸಮುದಾಯಕ್ಕೆ ಸೇರಿದವರೆನ್ನುವುದು ಇಲ್ಲಿ ಗಮನಿಸಬೇಕಾದಂತಹ…

ಮುಂದೆ ಓದಿ...