ರಂಜಾನ್ ಉಪವಾಸ ಸೌಹಾರ್ದತೆಯ ಬದುಕಿನ ಸಂದೇಶ

ತುಮಕೂರು: ಎಲ್ಲಿ ಶಾಂತಿ ಮತ್ತು ಪ್ರೀತಿ ಇರುತ್ತದೆಯೋ ಅಲ್ಲಿ ಮಾನವ ವಿಕಾಸದ ಜಗತ್ತಿನ ಉಳಿವು ಇರುತ್ತದೆ ಎಲ್ಲಿ ಧ್ವೇಷ ಅಸೂಯೆ ಇರುತ್ತದೆಯೋ ಅಲ್ಲಿ ಜಗತ್ತಿನ ನಾಶ ಮತ್ತು ಮಾನವ ವಿಕಾಸದ ನಾಶವಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಪ್ರೊ ಕೆ. ದೊರೈರಾಜ್ ಹೇಳಿದರು ತುಮಕೂರಿನ ಎನ್.ಆರ್ ಕಾಲೋನಿ ದಲಿತ ಮತ್ತು ಕೋತಿ ತೋಪು ಮದೀನ ಮಹೊಲ್ಲ ಮುಸ್ಲಿಂ ಸೌಹಾರ್ದ ಸಮಿತಿಯಿಂದ ರಂಜಾನ್ ಹಬ್ಬದ ಅಂಗವಾಗಿ ದಲಿತರಿಂದ ಮುಸ್ಲಿಂ ಬಾಂಧವರಿಗೆ ಸಮುದಾಯ ಶೈಕ್ಷಣಿಕ ಭವನದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಭಾಷಣ ಮಾಡಿದ ಕೆ.ದೊರೈರಾಜ್ ಮನುಷ್ಯ ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಬದುಕುವಂತಾಗಬೇಕು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ ಸರಿಯಲ್ಲ. ರಂಜಾನ್ ಉಪವಾಸ ಮನುಷ್ಯನಲ್ಲಿರುವ ಕ್ರೌರ್ಯವನ್ನು ದಹಿಸಿ ಹಸಿವಿನ ಅನುಭವವನ್ನು ಕಲಿಸುವುದರಿಂದ ಸಮಾಜದಲ್ಲಿ ಸೌಹಾರ್ಧಯುತವಾಗಿ ಬದುಕುವ ಸಂದೇಶ ನೀಡುತ್ತದೆ ಸಮಾಜದಲ್ಲಿರುವ ಅಶಕ್ತರನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ ಎಂದರು.…

ಮುಂದೆ ಓದಿ...

ಕಷ್ಟಕ್ಕೆ ದೇವರು ಪರಿಹಾರವಲ್ಲ ದುಡಿಮೆಯೇ ಪರಿಹಾರ!

ತುಮಕೂರು: ಕಷ್ಟಕ್ಕೆ ದೇವರು ಪೂಜೆ ಪರಿಹಾರವಲ್ಲ. ದುಡಿಮೆಯೇ ಪರಿಹಾರ ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ವಿವಿಧ ಪ್ರಗತಿಪರ, ದಲಿತ ಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಷ್ಟಗಳಿಗೆ ದೇವರು ಪರಿಹಾರ ನೀಡುತ್ತಾನೆ ಎಂಬುದಾಗಿದ್ದರೆ, ಸಾಲ ಮಾಡಿಕೊಂಡ ರೈತರು, ಸಾಲ ಮನ್ನಾಕ್ಕಾಗಿ ದೇವರ ಮುಂದೆ ಬೇಡುವ ಬದಲು ಸರಕಾರಗಳಿಗೆ ಮನವಿ ಸಲ್ಲಿಸುವ ಅಗತ್ಯವೆನ್ನಿತ್ತು ಎಂದು ಪ್ರಶ್ನಿಸಿದರು. ಇಂದು ದೇವರು ಎಂಬುದು ಒಂದು ಉದ್ಯೋಗವಾಗಿದೆ.ಜನತೆಗೆ ಇನ್ನಿಲ್ಲದ ಭಯ ಹುಟ್ಟಿಸಿ, ಅವರಿಂದು ಒಂದಿಲೊಂದು ಪೂಜೆ ಮಾಡಿಸಿ, ತಾವು ಹೊಟ್ಟೆ ಹೊರೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದನ್ನು ಅರಿಯದೆ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ, ಪುನಸ್ಕಾರಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.ಮೈಮೇಲೆ ಬರುವ ದೇವರುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.ಅದರಲ್ಲಿಯೂ ಕೆಳವರ್ಗದವರ ಮೇಲೆ ದೇವರುಗಳ ಬರುತ್ತಿರುವುದು…

ಮುಂದೆ ಓದಿ...

ಹಿಂದುಳಿದ ವರ್ಗಕ್ಕೆ ಪ್ರಬಲ ಜಾತಿಗಳ ಸೇರ್ಪಡೆಯಿಂದ ಅನ್ಯಾಯ

ತುಮಕೂರು: ಪ್ರಬಲ ಜಾತಿಗಳನ್ನು ಪ್ರವರ್ಗ-2ಕ್ಕೆ ಸೇರಿಸುವುದರಿಂದ ಹಿಂದುಳಿದ ವರ್ಗಗಳಿಗೆ ಸೇರಿದ 105 ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ. ಇದರ ವಿರುದ್ದ ಜನಜಾಗೃತಿ ಮೂಡಿಸುವ ಕೆಲಸವನ್ನು ಹಿಂದುಳಿದ ವರ್ಗಗಳ ಮುಖಂಡರು ಮಾಡಬೇಕಾಗಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ಸಮಿತಿ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಿಕ್ಕನಾಯಕನಹಳ್ಳಿ ತಾಲೂಕು ಹಿಂದುಳಿದ ವರ್ಗಗಗಳ ಹಿತರಕ್ಷಣಾ ಸಮಿತಿವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಬಲ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿಸುವುದರಿಂದ ಹಿಂದುಳಿದ ಜಾತಿಗಳಿಗೆ ಸರಕಾರಿ ನೌಕರಿ,ರಾಜಕೀಯ ಅಧಿಕಾರ ಮರೀಚಿಕೆಯಾಗಲಿದೆ.ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಅರ್ಥಿಕವಾಗಿ ಕುಸಿಯುವುದಲ್ಲದೆ,ಮುಂದಿನ ಯುವಜನತೆ ಸಾಕಷ್ಟು ಪಶ್ಚಾತಾಪ ಪಡಲಿದ್ದಾರೆ.ಹಾಗಾಗಿ ಸರಕಾರ ಪ್ರಬಲ ಜಾತಿಗಳನ್ನು ಹಿಂದುವರ್ಗ ಎಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂಬುದು ನಮ್ಮ ಆಗ್ರಹವಾಗಿದೆ.ಅಲ್ಲದೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಚಾರಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಸಮಿತಿಯ ಮುಖಂಡರುಗಳಿಗೆ ಮನವಿ ಮಾಡಿದರು. ಸಮಿತಿಯ ಮತ್ತೊಬ್ಬ ಸಂಚಾಲಕ ಸಿ.ಡಿ.ಚಂದ್ರಶೇಖರ್…

ಮುಂದೆ ಓದಿ...