ಜಾನುವಾರುಗಳಿಗೆ ಮೇವು ನೀಡುವುದು ಸರ್ಕಾರದ ಕರ್ತವ್ಯ!

ಮಧುಗಿರಿ:       ಸತತ ಬರಗಾಲದಿಂದ ತತ್ತರಿಸುತ್ತಿರುವ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ಮಧುಗಿರಿ ಕಸಬಾ ವ್ಯಾಪ್ತಿಯ ಸಿದ್ದಾಪುರದ ಹಿಪ್ಪೇ ತೋಪಿನಲ್ಲಿ ಹೈ ಕೊರ್ಟ್ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ಆರಂಭಿಸಿದ ಮೊದಲ ಗೋಶಾಲೆಯನ್ನು ಗೋವಿನ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ರೈತರ ಮನೆ ಬಾಗಿಲಿಗೆ ಮೇವನ್ನು ವಿತರಿಸಿ ಯಶಸ್ವಿ ಕಾರ್ಯಕ್ರಮ ನೀಡಿದ್ದೆವು. ಆದರೂ ಬರಗಾಲ ಮುಂದುವರೆದ ಕಾರಣ ಈಗಿನ ಸರ್ಕಾರವು ಹೈ ಕೋರ್ಟ್ ಆದೇಶದಂತೆ ಗೋಶಾಲೆ ಆರಂಭಿಸಲಾಗಿದೆ. ಇಲ್ಲಿ ಪ್ರತಿ ರಾಸುಗಳಿಗೆ 6 ಕೆಜಿ ಒಣ ಮೇವು, ಒಣ ಮೇವು ಸಿಗದಿದ್ದಲ್ಲಿ 18 ಕೆಜಿ ಹಸಿ ಮೇವನ್ನು ಪ್ರತಿ ದಿನ ಉಚಿತವಾಗಿ ನೀಡಲಾಗುತ್ತದೆ.       ಒಣಮೇವು ಸಿಗದ…

ಮುಂದೆ ಓದಿ...

ಟಿವಿಎಸ್ ಗೆ ಕಾರು ಡಿಕ್ಕಿ : ಸವಾರ ಸಾವು!

ತುರುವೇಕೆರೆ:      ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ಸ್ಕಾರ್ಪಿಯೋ ಕಾರು ಹಿಂಬದಿಯಿಂದ ಗುದ್ದಿದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಶನಿವಾರ ಮದ್ಯಾಹ್ನ ನೆಡೆದಿದೆ.       ಮೃತ ದುರ್ದೈವಿ ಶಿವಶಂಕರ್ (50) ಇತನು ಮಾದಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನೀರು ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ಮಾಯಸಂದ್ರ ರಸ್ತೆಯಲ್ಲಿ ತನ್ನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ತುರುವೇಕೆರೆ ಕಡೆಗೆ ಚಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಗುದ್ದಿದ ಪರಿಣಾಮ ದ್ವಿಚಕ್ರವಾಹನ ಸವಾರ ಬಿದ್ದು ತೀವ್ರತರವಾಗಿ ಗಾಯ ಗೊಂಡಿದ್ದಾರೆ. ಕೂಡಲೇ ಸ್ಥಳಿಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು ಎಂದು ತಿಳಿದುಬಂದಿದ್ದು ಕಾರು ನಿಲ್ಲಿಸದೆ ಚಾಲನೆ ಮಾಡಿಕೊಂಡು ತೆರಳಿದ್ದಾರೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ…

ಮುಂದೆ ಓದಿ...

ಕಾರು ಪಲ್ಟಿ : ಕಾಲು ಮುರಿತ!!

ಮಿಡಿಗೇಶಿ :       ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ನಲ್ಲೇಕಾಮನಹಳ್ಳಿ ಬಳಿ ಆ.4 ರಂದು ಬೆಳಗ್ಗೆ 7-15 ರ ಸಮಯದಲ್ಲಿ ಇಂಡಿಕಾ ಕಾರು (ಕೆಎ 04 ಎಂಎಂ 2354) ಅಪಘಾತಕ್ಕೀಡಾಗಿದೆ.        ಬೆಂಗಳೂರಿನಿಂದ ಪಾವಗಡಕ್ಕೆ ಕನ್ನಡಿಗರ ರಕ್ಷಣಾ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಭಾಸ್ಕರ್, ಗುರು, ಈಶ್ವರಪ್ಪ (ತಾತ) ಹಾಗೂ ಬಸವರಾಜು ಪ್ರಯಾಣಿಸುತ್ತಿದ್ದರು.       ಅತಿ ವೇಗದ ಚಾಲನೆಯಿಂದ ಕಾರು ರಸ್ತೆಯನ್ನು ಬಿಟ್ಟು ಸುಮಾರು 200 ಮೀಟರ್ ದೂರದ ಜಮೀನಿಗೆ ಬಿದ್ದಿದೆ. ರಮೇಶ್ ಎಂಬುವರಿಗೆ ಕಾಲು ಮುರಿದಿದ್ದು, ಇನ್ನುಳಿದ ನಾಲ್ವರಿಗೆ ಬಲವಾದ ಪೆಟ್ಟುಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಿಡಿಗೇಶಿಯ ಪೊಲೀಸ್ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ಕೆ.ಶಿಪ್ ಆಯಂಬ್ಯುಲೆನ್ಸ್ ಮೂಲಕ ಮಧುಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಅಪಘಾತಕ್ಕೀಡಾಗಿ ನುಚ್ಚು ನೂರಾಗಿರುವ ಕಾರನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈ…

ಮುಂದೆ ಓದಿ...