ಸಾರ್ವಜನಿಕ ರುದ್ರಭೂಮಿಗಾಗಿ ನಾನೇ ಹಣ ನೀಡುತ್ತೇನೆ – ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ :        ಜನರ ರುದ್ರಭೂಮಿ ಸಂವಿಧಾನಬದ್ಧ ಮೂಲಭೂತ ಹಕ್ಕು. ಜಮೀನು ನೀಡುವವರಿದ್ದರೆ ಸಾರ್ವಜನಿಕ ರುದ್ರಭೂಮಿಗಾಗಿ ನಾನೇ ಹಣ ನೀಡುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಭರವಸೆ ನೀಡಿದರು.       ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ತಾಲೂಕು ಆಡಳಿತ ಹಾಗೂ ರೆಡ್ಡಿಹಳ್ಳಿ ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೆಡ್ಡಿಹಳ್ಳಿ ಗ್ರಾಮಸ್ಥರು ನಮ್ಮೂರಿಗೆ ರುದ್ರಭೂಮಿಯಿಲ್ಲ ಎಂದು ಮನವಿ ನೀಡಿದಾಗ ಪರಿಶೀಲಿಸಲು ಕಂದಾಯಾಧಿಕಾರಿಗೆ ಸೂಚಿಸಿದರು. ಆದರೆ ಸುತ್ತಮುತ್ತ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದಾಗ, ಖಾಸಗಿ ಜಮೀನು ನೀಡುವವರು ಇದ್ದರೆ ನಾನೇ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು. ತಾಲೂಕಿನಲ್ಲಿ ಸರಿ ಸುಮಾರು 10 ಸಾವಿರದಷ್ಟು ಮಾಶಾನದ ದೊರೆಯದ ಫಲಾನುಭವಿಗಳು ಇದ್ದಾರೆ. ಹಿಂದಿನವರು ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಬದಲಿಗೆ ತಾಲೂಕಿನೆಲ್ಲೆಡೆ ಕ್ಯೂಬಿಂಗ್ ಮಾಡಿಸಲಿದ್ದು, ಎಲ್ಲರಿಗೂ ಹಂತ…

ಮುಂದೆ ಓದಿ...

ಖಾಸಗಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ತುಮಕೂರು:        ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ವಸತಿ/ ವಿದ್ಯಾರ್ಥಿ ನಿಲಯಗಳಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುರಕ್ಷತೆ ಒದಗಿಸುವುದು ಆಯಾ ವಸತಿ ನಿಲಯಗಳ ಮುಖ್ಯಸ್ಥರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.        ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಖಾಸಗಿ ವಸತಿ ನಿಲಯಗಳಲ್ಲಿ ದಾಖಲಾಗುವ 18ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಆಯಾ ನಿಲಯಗಳ ಮುಖ್ಯಸ್ಥರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದರಲ್ಲದೆ, ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಪೋಕ್ಸೋ ಪ್ರಕರಣದಲ್ಲಿ ಭಾಗಿಯಾಗುವ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಳ್ಳುವಾಗ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಬೇಕು ಎಂದು ಪೊಲೀಸ್…

ಮುಂದೆ ಓದಿ...

ತುಮಕೂರು : ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾಗಿ ಆರ್.ಪಾತಣ್ಣ ನೇಮಕ!

ತುಮಕೂರು :       ತಾಲ್ಲೂಕಿನ ವಕೀಲರು,  ಕುರುಬ ಸಮಾಜದ ಮುಖಂಡರು ಹಾಗೂ ಸಮಾಜ ಸೇವಕರಾದ ಆರ್.ಪಾತಣ್ಣ ನವರನ್ನು ತುಮಕೂರು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಇಂದು  ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಅವರು ಅಧಿಕಾರ ಸ್ವೀರಿಸಿದರು.         ಈ ಸಂದರ್ಭದಲ್ಲಿ   ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತುಮಕೂರು ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.        ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರು, ತುಮಕೂರು ಮಹಾನಗರಪಾಲಿಕೆ ಹಣಕಾಸು ಮತ್ತು ತೆರಿಗೆ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಟಿ.ಇ.ರಘುರಾಮ್, ತುಮಕೂರು ಹಾಲುಮತ ಮಹಾಸಭಾ ಜಿಲ್ಲಾ ಕನಕ ಯುವ ಸೇನೆಯ ಅಧ್ಯಕ್ಷರಾದ ಕೆಂಪರಾಜು, ಕಾಳಿದಾಸ ವಿದ್ಯಾವರ್ಧಕದ ಸಂಘದ ಜಿಲ್ಲಾ ನಿರ್ದೇಶಕ ಪಾವಗಡದ ಮೈಲಾರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಜಯರಾಮ್,  ಸಮಾಜದ ಮುಖಂಡರಾದ ಚಿಕ್ಕಸ್ವಾಮಿ, ಕೆ.ಲಕ್ಕಪ್ಪವರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.…

ಮುಂದೆ ಓದಿ...