ತುಮಕೂರು: ಮತದಾರರ ಪಟ್ಟಿ ಪರಿಶೀಲನೆಗೆ ನಾಗರೀಕ ಸೇವಾ ಕೇಂದ್ರದಲ್ಲೂ ಅವಕಾಶ!!

ತುಮಕೂರು:       ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ನಾಗರಿಕ ಸೇವಾ ಕೇಂದ್ರದಲ್ಲೂ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ತಿಳಿಸಿದರು.       ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸಿಎಸ್‍ಸಿ ಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚುನಾವಣಾ ಆಯೋಗ ಪ್ರತಿವರ್ಷವು ಚುನಾವಣಾ ವಿಭಾಗದಿಂದ ಮತದಾರರ ಪಟ್ಟಿಯನ್ನು ಬಿಎಲ್‍ಒ ಹಾಗೂ ವಿವಿಧ ಅಧಿಕಾರಿಗಳು ಮನೆ ಮನೆಗೂ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯನ್ನೂ ಸಹ ಮಾಡಲು ಸೂಚಿಸಲಾಗಿದೆ ಎಂದರು.       ಜಿಲ್ಲೆಯಾದ್ಯಂತ ಈಗಾಗಲೇ 165 ನಾಗರಿಕ ಸೇವಾ ಕೇಂದ್ರಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಾ ಹಲವು ಸೇವೆಗಳನ್ನು ಒದಗಿಸುತ್ತಿವೆ. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ…

ಮುಂದೆ ಓದಿ...

ಸರ್ಕಾರದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಂಸದರ ಸಲಹೆ

ತುಮಕೂರು :       ಸ್ಮಾರ್ಟ್‍ಸಿಟಿ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಹಣವನ್ನು ಸಾರ್ವಜನಿಕವಾಗಿ ಸದುಪಯೋಗವಾಗುವಂತೆ ಅಧಿಕಾರಿಗಳು ಬಳಸಬೇಕು ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.       ನಗರದ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಸ್ಕಿಲ್ ಪಾರ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಧಿಕಾರಿಗಳು ವ್ಯರ್ಥಮಾಡದೇ ನಗರದ ಅಭಿವೃದ್ಧಿಗೆ ಸದುಪಯೋಗಪಡಿಸಿ ತುಮಕೂರು ನಗರದ ಚಿತ್ರಣವನ್ನು ಬದಲಾಯಿಸಿ ಉತ್ತಮ ನಗರವನ್ನಾಗಿ ನಿರ್ಮಿಸಬೇಕು ಎಂದು ಅವರು ಹೇಳಿದರು.       ಈ ಹಿಂದೆ ಐದು ವರ್ಷಗಳ ಕಾಲ ಸಂಸತ್‍ನ ಸದಸ್ಯನಾಗಿದ್ದಾಗ ತುಮಕೂರು ನಗರವನ್ನು ಇಂಡಸ್ಟ್ರಿಯಲ್ ಹಬ್ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಆಗ ಕೈಗೂಡಲಿಲ್ಲ. ತುಮಕೂರು ನಗರ ಬೆಂಗಳೂರಿಗೆ ಮುಖ್ಯದ್ವಾರವಾಗಿದ್ದು, ಕೈಗಾರಿಕೀಕರಣದ ಕೇಂದ್ರೀಯ ಸ್ಥಾನವನ್ನಾಗಿ ಮಾರ್ಪಾಡು ಮಾಡಬೇಕು. ವಿದೇಶಿಯರಿಗೆ 100 ಎಕರೆ ಜಮೀನು ಕೊಟ್ಟು ಅವಕಾಶ ನೀಡುವುದಕ್ಕಿಂತ ಸ್ಥಳೀಯರನ್ನು ಗುರ್ತಿಸಿ 2…

ಮುಂದೆ ಓದಿ...

ಬಸ್-ಆಟೋಗಳ ನಡುವೆ ಡಿಕ್ಕಿ : ಓರ್ವ ಮಹಿಳೆ ಸಾವು!

ಚಿಕ್ಕನಾಯಕನಹಳ್ಳಿ:       ಖಾಸಗಿ ಬಸ್ ಹಾಗೂ ಆಟೋಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಪಟ್ಟಣದ ದುಗಡಿಹಳ್ಳಿ ಬಳಿ ನಡೆದಿದೆ.       ತಿಪಟೂರಿನಿಂದ ಚಿ.ನಾ. ಹಳ್ಳಿಯಕಡೆ ಬರುತ್ತಿದ್ದ ಖಾಸಗಿ ಬಸ್ ದುಗಡಿಹಳ್ಳಿ ಕಟ್ಟೆಯ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿಹೊಡೆದ ಪರಿಣಾಮ ಆಟೋದಲಿದ್ದ ಪಟ್ಟಣದ ಲತಾಮಣಿ (35) ಎಂಬುವರಿಗೆ ತಲೆಗೆ ತೀವ್ರಪೆಟ್ಟುಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತನ್ನ ಮಗುವಿನ ಚಿಕಿತ್ಸೆಗಾಗಿ ತಿಪಟೂರಿಗೆ ತೆರಳುತ್ತಿದ್ದಾಗ ಈಘಟನೆ ನಡೆದಿದೆ. ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ.

ಮುಂದೆ ಓದಿ...

ತುಮಕೂರು : ಎಸಿಬಿ ಗೆ ನೂತನ ಡಿವೈಎಸ್‍ಪಿ!

ತುಮಕೂರು :       ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ನೂತನ ಪೊಲೀಸ್ ಉಪಾಧೀಕ್ಷಕರಾಗಿ ಬಿ.ಉಮಾಶಂಕರ್ ರವರು ಇಂದು (ಆ.31 ಮಂಗಳವಾರ) ಅಧಿಕಾರ ಸ್ವೀಕರಿಸಿದ್ದಾರೆ.       ಇವರು ತುಮಕೂರು ಜಿಲ್ಲೆಯ ಹಲವೆಡೆಗಳಲ್ಲಿ ತುಮಕೂರು ನಗರ ಸಂಚಾರಿ ಪಿಎಸ್‍ಐ, ಶಿರಾ ತಾವರೆಕೆರೆ ಪಿಎಸ್‍ಐ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.       ತುಮಕೂರು ಜಿಲ್ಲೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. ಆ ಸಮಯದಲ್ಲಿ ಬಹಳಷ್ಟು ಟ್ರ್ಯಾಪ್ ಮತ್ತು ರೈಡ್ ಮಾಡಿ ಉತ್ತಮ ಹೆಸರು ಗಳಿಸಿದ್ದರು. ವರ್ಗಾವಣೆಯಾಗಿ ಬೆಸ್ಕಾಂ ಜಾಗೃತದಳದ ಇನ್ಸ್ಪೆಕ್ಟರ್ ಆಗಿ ತುಮಕೂರಿನ ಜಾಗೃತ ದಳದಲ್ಲಿ ಸೇವೆ ಸಲ್ಲಿಸಿದ್ದ ಇವರು ಬೆಂಗಳೂರು ಸಿಸಿಬಿ ಹಾಗೂ ಡಿಸಿಬಿ ಇನ್ಸ್ಪೆಕ್ಟರ್ ಆಗಿ ಸೇವೆಸಲ್ಲಿಸಿದ್ದ ಇವರು ಬಡ್ತಿ ಹೊಂದಿ ಭ್ರಷ್ಟಾಚಾರ ನಿಗ್ರಹದಳದ ಉಪಾಧೀಕ್ಷಕರಾಗಿ ತುಮಕೂರಿನಲ್ಲಿ ಮತ್ತೆ ತನ್ನ…

ಮುಂದೆ ಓದಿ...