ಬಿಎಸ್‍ಎನ್‍ಎಲ್ ಕೇಬಲ್‍ಗಳ ನಿಖರ ಮಾಹಿತಿಯಿಲ್ಲದಿರುವುದರಿಂದ ಸ್ಮಾರ್ಟ್ ರಸ್ತೆ ಅಭಿವೃದ್ಧಿ ನಿಧಾನಗತಿ!

ತುಮಕೂರು:       ಬಿಎಸ್‍ಎನ್‍ಎಲ್ ಕೇಬಲ್‍ಗಳ ನಿಖರ ಮಾಹಿತಿಯಿಲ್ಲದಿರುವುದರಿಂದ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೂಡಲೇ ತಮ್ಮ ಸಂಸ್ಥೆಯ ಕೇಬಲ್‍ಗಳು ಹಾದು ಹೋಗಿರುವ ಮಾರ್ಗದ ನಿಖರ ಮಾಹಿತಿಯನ್ನು ನೀಡಿ ಕಾಮಗಾರಿ ತ್ವರಿತವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಿಎಸ್‍ಎನ್‍ಎಲ್ ಕೇಬಲ್‍ಗಳ ನಿಖರ ಮಾಹಿತಿಯಿಲ್ಲದೆ ಸ್ಮಾರ್ಟ್ ರಸ್ತೆ ಪ್ರಗತಿ ವಿಳಂಬವಾಗಿದೆ. ಪ್ರಗತಿ ಕಾರ್ಯದಲ್ಲಿ ಬಿಎಸ್‍ಎನ್‍ಎಲ್ ಕೇಬಲ್‍ಗಳಿಗೆ ಹಾನಿಯಾದರೆ ಸ್ಮಾರ್ಟ್ ಸಿಟಿ ಹೊಣೆಯಾಗುವುದಿಲ್ಲ. ರಸ್ತೆ ಅಗೆಯುವ ಹಾಗೂ ಚೇಂಬರ್ ನಿರ್ಮಿಸುವ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಖುದ್ದು ಹಾಜರಿದ್ದು, ಕೇಬಲ್ ಲೇಯಿಂಗ್ ಮಾಹಿತಿ ನೀಡಿ ಸಹಕರಿಸಬೇಕೆಂದು ಬಿಎಸ್‍ಎನ್‍ಎಲ್…

ಮುಂದೆ ಓದಿ...

ಮಾಂಗಲ್ಯ ಸರವನ್ನು ಕಿತ್ತು ಪರಾರಿ!

ಪಾವಗಡ :       ಪಟ್ಟಣದ ಶಾಂತಿನಗರದ ಯೋಗಮಂದಿರದ ಮುಂಭಾಗ ವೃದ್ದೆ ಕಾಲುನಡಿಗೆಯಕಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯೆಕ್ತಿ ದ್ವೀಚಕ್ರವಾಹನದಲ್ಲಿ ಬಂದು ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.       ಪಟ್ಟಣದವಾಸಿ ಶಾಂತಮ್ಮ ಮಂಗಳವಾರ ಸಂಜೆ ಜೈನ್ ಲೇಔಟ್‍ನಲ್ಲಿರುವ ಸಂಬಂದಿಕರ ಮನೆಗೆ ತೆರಳುವ ವೇಳೆ ಶಾಂತಿನಗರದ ಯೋಗಮಂದಿರದ ಮುಂಭಾಗದ ತಿರುವಿನಲ್ಲಿ ಶಾಂತಮ್ಮ ಕೋರಳಿನಲ್ಲಿದ್ದ 60 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ದ್ವೀಚಕ್ರ ವಾಹನದಲ್ಲಿ ಬಂದಾ ಅಪರಿಚಿತ ವ್ಯೆಕ್ತಿ ಕಿತ್ತುಕೊಂಡು ಪರಾರಿಯಾಗಿದ್ದು , ಘಟನೆಯ ಸಂಬಂದ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಪಿಎಸೈ ರಾಘವೇಂದ್ರರವರು ಬೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

ಮುಂದೆ ಓದಿ...

ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದ ಸಿಎಂ ಬಿ.ಎಸ್.ಯಡಿಯೂರಪ್ಪ

ತುಮಕೂರು :       ರಾಜ್ಯದಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಪರಿಹಾರ ಕೆಲಸ ಕೈಗೊಳ್ಳುವಂತೆ ಸಚಿವರನ್ನು ಸಂತ್ರಸ್ಥ ನೆರೆ ಜಿಲ್ಲೆಗಳಿಗೆ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.       ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅತೀವೃಷ್ಠಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಚಿವರಿಗೆ ಸೂಚಿಸಿದ್ದೇನೆ ಎಂದರು.       ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ನಾನು ಮುಖ್ಯಮಂತ್ರಿ ಆಗಿದ್ದನ್ನು ಅವ್ರು ನೋಡಿದ್ರೆ ಎಷ್ಟು ಸಂತಸ ಪಡುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ಅವರು ತಿಳಿಸಿದರು. ಗದ್ದುಗೆ ದರ್ಶನ ಪಡೆದ ನಂತರ ಮುಖ್ಯಮಂತ್ರಿಗಳು ಸಿದ್ಧಲಿಂಗ…

ಮುಂದೆ ಓದಿ...