ಅಭಿವೃದ್ದಿಗೆ ಯಾರೇ ಆಗಲಿ ರಾಜಕೀಯ ಹೊರತುಪಡಿಸಿ ಸಾಗಬೇಕಿದೆ – ಸಂಸದ

ಪಾವಗಡ :       ತಾಲೂಕಿನ ಅಭಿವೃದ್ದಿಗೆ ಯಾರೇ ಆಗಲಿ ರಾಜಕೀಯ ಹೊರತುಪಡಿಸಿ ಸಾಗಬೇಕಿದೆ ಎಂದು ಚಿತ್ರದುರ್ಗ ಸಂಸದರಾದ ಎ.ನಾರಾಯಣ ಸ್ವಾಮಿ ತಿಳಿಸಿದರು.       ಶುಕ್ರವಾರ ತಾಪಂ ಸಭಾಂಗಣದಲ್ಲಿ ದಿಢೀರನೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು, ಸಮಗ್ರ ಅಭಿವೃದ್ಧಿಗೆ ಯಾವುದೇ ರಾಜಕೀಯ ಬೇಡ. ನಮ್ಮದೇ ಸರ್ಕಾರವಿದೆ. ಅನುದಾನ ತಂದು ಸರ್ವತೋಮುಖ ಅಭಿವೃದ್ದಿಪಡಿಸೋಣ. ಅದನ್ನು ವಿನಾಕಾರಣ ರಾಜಕೀಯ ಮಾಡಿದರೆ ನಾನಂತು ಸುಮ್ಮನೆ ಕೂರುವ ವ್ಯೆಕ್ತಿಯಲ್ಲ ಎಂದು ಎಲ್ಲಾ ಆದಿಕಾರಿಗಳಿಗೆ ಸಂಸದರು ಖಡಕ್ ಎಚ್ಚರಿಕೆ ನೀಡಿದರು.       ತಾಲೂಕು ಪಂಚಾಯ್ತಿ ವೆಬ್‍ಸೈಟ್‍ನ್ನು ಮೋದಲು ಸಿದ್ದಪಡಿಸಬೇಕು.ಎಲ್ಲಾ ಕಾರ್ಯಕ್ರಮಗಳು ವೆಬ್‍ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಪ್ರತಿ ಇಲಾಖೆವಾರು ಕಾರ್ಯಕ್ರಮಗಳು, ಸಮಸ್ಯೆಗಳ ಸ್ಪಷ್ಟಚಿತ್ರಣವನ್ನು ತಾಪಂ ವೆಬ್‍ನಲ್ಲಿ ಸಿಗುವಂತೆ ಮಾಡಬೇಕೆಂದು ಇಒ ನರಸಿಂಹಮೂರ್ತಿರವರಿಗೆ ತಿಳಿಸಿದರು.       ಇದೇ ತಿಂಗಳ 26ರೊಳಗೆ ತಾಲೂಕಿನ ಶಿಥಿಲ…

ಮುಂದೆ ಓದಿ...

ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ತೊಂದರೆಯಿಲ್ಲ -ಸಚಿವ ಜೆ.ಸಿ ಮಾಧುಸ್ವಾಮಿ

ತುಮಕೂರು:       ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಹೇಮಾವತಿ ನೀರನ್ನು ಈಗಾಗಲೇ ತುಮಕೂರು ನಾಲೆಗೆ ಆಗಸ್ಟ್ 9 ರಿಂದ ಹರಿಸಿದ್ದು, ನಗರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಗೊರೂರು ಹೇಮಾವತಿ ಜಲಾಶಯದಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿರುವ ಬಗ್ಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯ ರೈತರಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಲಾಶಯದಿಂದ ಆಗಸ್ಟ್ 30ರವರೆಗೂ ನೀರು ಹರಿಸಲಾಗುವುದು. ನಂತರ ತಾಲೂಕುವಾರು ನೀರು ಹಂಚಿಕೆ ಮಾಡುವುದರ ಬಗ್ಗೆ ಶಾಸಕರ ಸಭೆ ನಡೆಸಿ ನೀರು ಹರಿಸುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.       ಕುಣಿಗಲ್ ತಾಲೂಕಿಗೆ ಪ್ರತ್ಯೇಕ ನಾಲೆ(ಎಕ್ಸ್‍ಪ್ರೆಸ್…

ಮುಂದೆ ಓದಿ...

ಶಾಸಕ ಗೌರಿಶಂಕರ್ ವಿರುದ್ಧ ಹರಿಹಾಯ್ದ ಮಾಜಿ ಶಾಸಕ ಸುರೇಶ್ ಗೌಡ!

ತುಮಕೂರು :        ಹಾಲಿ ಶಾಸಕ ಗೌರಿಶಂಕರ್ ಧೋರಣೆಯ ವಿರುದ್ದ ಮತ್ತು ಜಿಲ್ಲಾಧಿಕಾರಿ ಹಾಗೂ ಹೇಮಾವತಿ ಇಲಾಖೆಯ ಅಧಿಕಾರಿಗಳ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡರು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.       ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ತಮ್ಮ ಸ್ವಪ್ರತಿಷ್ಟೆಗಾಗಿ ಗೂಳೂರು, ಹೆಬ್ಬೂರು, ಏತನೀರಾವರಿ ಯನ್ನು ಚಾಲನೆ ಮಾಡದಂತೆ ಆದೇಶಿಸಿರುವುದರಿಂದ ಹೆದರಿದ ಅಧಿಕಾರಿಗಳು ಹೇಮಾವತಿ ನಾಲೆಯಿಂದ ಕೆರೆಗಳಿಗೆ ನೀರು ಹರಿಸದೇ ಮೋಟಾರ್ ಸ್ಥಗಿತಗೊಳಿಸಿದ್ದಾರೆ. ಆ ಭಾಗದ ಕೆರೆಗಳು ಬರಿದಾಗಿದ್ದು ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಮಳೆಯಿಲ್ಲದೆ ತೀವ್ರತರವಾದ ಬರಗಾಲದಿಂದ ಬೇಸತ್ತು ಬಸವಳಿದ ರೈತಾಪಿವರ್ಗಕ್ಕೆ ಹರಿಯಬೇಕಿದ್ದ ನೀರು ಸ್ಥಗಿತಗೊಳಿಸಿ ವಿದೇಶದಲ್ಲಿ ಮೋಜು ಮಸ್ತಿ ಮಾಡಲು ಹೋಗಿದ್ದಾರೆ. ಆ ಭಾಗದ ಜನಪ್ರತಿನಿಧಿಯಾಗಿ ತನಗೆ ಮತನೀಡಿದ ಮಾತದಾರರಾದ ರೈತರುಗಳ ಸಂಕಷ್ಟಕ್ಕೆ ನೆರವಾಗುವುದನ್ನ ಬಿಟ್ಟು ಹರಿಯುತ್ತಿದ್ದ ನೀರನ್ನೇ ಸ್ಥಗಿತಗೊಳಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ,…

ಮುಂದೆ ಓದಿ...